• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ಪತ್ರೆಯಿಂದ ದರ್ಶನ್‌ ಡಿಸ್ಚಾರ್ಜ್‌: ಸಣ್ಣ ಅಪಘಾತವಷ್ಟೆ, ಕಂಬಕ್ಕೆ ಗುದ್ದಿದ್ದು ನಾವಲ್ಲ

|

ಮೈಸೂರು, ಸೆಪ್ಟೆಂಬರ್ 29: ಕಾರು ಅಪಘಾತದಿಂದ ಸೆಪ್ಟೆಂಬರ್ 23 ರಂದು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಆಸ್ಪತ್ರೆಯಿಂದ ಹೊರಬಂದ ದರ್ಶನ್ ಗೆಲುವಾಗಿದ್ದರು. ತಮಗಾಗಿ ಕಾಯುತಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೊಂದು ಸಣ್ಣ ಅಪಘಾತವಷ್ಟೆ ಎಂದರು.

ಅಪಘಾತದಲ್ಲಿ ನಟ ದರ್ಶನ್ ಬಲಗೈ ಮೂಳೆ ಮುರಿತ: ಯಶಸ್ವಿ ಚಿಕಿತ್ಸೆ ಬಳಿಕ ಚೇತರಿಕೆ

ಸುದ್ದಿ ಮಾಧ್ಯಮಗಳಲ್ಲಿ ಮಾಹಿತಿಯನ್ನು ತಿರುಚಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ದರ್ಶನ್ ಅವರು, ನನ್ನ ಕಾರು ಅಪಘಾತದಿಂದ ಕಂಬ ಬಿದ್ದಿಲ್ಲ, ಮೊದಲೇ ಕಂಬ ಬಿದ್ದಿತ್ತು. ನಮ್ಮ ಅಪಘಾತದಿಂದ ಕಂಬ ಬಿದ್ದಿದ್ದಲ್ಲ ಎಂದರು.

ಕಾರಿನಲ್ಲಿ ಎಷ್ಟು ಜನ ಇದ್ದರು ಎಂಬ ಸಂದೇಹಕ್ಕೆ ಉತ್ತರ ನೀಡಿದ ಅವರು, ನನ್ನ ಕಾರಿನಲ್ಲಿ ಐದು ಜನ ಮಾತ್ರವೇ ಕೂರಲು ಸಾಧ್ಯ, ಅಷ್ಟೆ ಜನರೇ ಅಂದೂ ಕಾರಿನಲ್ಲಿದ್ದರು. ಊಟ ಮಾಡಿಕೊಂಡು ವಾಪಸ್ಸು ಬರುವಾಗ ತಿರುವಿನಲ್ಲಿ ಸಂಭವಿಸಿದ ಸಣ್ಣ ಅಪಘಾತವಷ್ಟೆ ಅದು ಎಂದು ಅವರು ಸ್ಪಷ್ಟನೆ ನೀಡಿದರು.

ನಟ ದರ್ಶನ್ ಕಾರು ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ

ಕೆಲವು ಮಾಧ್ಯಮಗಳು ಸುದ್ದಿಯನ್ನು ತಿರುಚಿದ ಬಗ್ಗೆ ಬೇಸರ ವ್ಯಕ್ತಪಡಿಸಿದ ದರ್ಶನ್ ಅವರು, ಎಲ್ಲ ವಿಷಯಗಳನ್ನು ನಾನೇ ಸಮಾಧಾನವಾಗಿ ಹೇಳುತ್ತೇನೆ, ಮಾಧ್ಯಮಗಳು ಸ್ವಲ್ಪ ಆತುರವಾಗಿ ವರ್ತಿಸಿದವು ಎಂದರು. ನಮ್ಮ ಜೊತೆ ಯಾವುದೇ ಮಹಿಳೆ ಇರಲಿಲ್ಲ ಎಂದೂ ಅವರು ಹೇಳಿದರು.

ಚಾಲೆಂಜಿಂಗ್ ಸ್ಟಾರ್ ಬೆನ್ನಿಗೆ ನಿಂತಿದ್ಯಾ ಖಾಕಿ ಪಡೆ ?

ದರ್ಶನ್ ಅವರ ಬಲಗೈಗೆ ಬ್ಯಾಂಡೆಜ್ ಹಾಕಲಾಗಿದ್ದು, ಇನ್ನು ಕೆಲವು ದಿನಗಳ ವಿಶ್ರಾಂತಿ ಅವರಿಗೆ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದರು. ಕೆಲವು ದಿನಗಳ ನಂತರ ಮಾಮೂಲಿಯಾಗಿ ಜಿಮ್‌ ಸೇರಿದಂತೆ ಇನ್ನಿತರೆ ದೈನಂದಿನ ಕಾರ್ಯದಲ್ಲಿ ಅವರು ತೊಡಗಿಕೊಳ್ಳಬಹುದು ಎಂದು ಅವರು ಹೇಳಿದರು.

English summary
Actor Darshan discharged by hospital today. He was admitted to Mysuru colombia hospital on September 23th. His broke his right hand in a car accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X