ಕಳ್ಳತನದ ಆರೋಪ: ಪತಿ-ಪತ್ನಿ ಆತ್ಮಹತ್ಯೆ
ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಪತ್ನಿ ಲತಾ ತಾನೂ ವಿಷ ಸೇವಿಸಿದ್ದಾಳೆ.
ಮೈಸೂರು, ಮಾರ್ಚ್ 9 : ಕಳ್ಳತನ ಕೇಸಿನಲ್ಲಿ ಪತ್ನಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಪತ್ನಿಯೂ ವಿಷ ಸೇವಿಸಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಮೃತನನ್ನು ಮೈಸೂರಿನ ವಿವಿ ಮೊಹಲ್ಲಾ ನಿವಾಸಿ ರಾಜು(35) ಎಂದು ಗುರುತಿಸಲಾಗಿದೆ. ರಾಜು ಪತ್ನಿ ಲತಾ ಕೆಲದಿನಗಳ ಹಿಂದೆ ಕಳ್ಳತನದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡು ಕದ್ದ ಪದಾರ್ಥಗಳನ್ನು ಹಿಂದಿರುಗಿಸಿದ್ದಳು ಎನ್ನಲಾಗಿದೆ. ಈ ಘಟನೆಯಿಂದ ರಾಜು ತುಂಬಾ ಮನನೊಂದಿದ್ದ ಎಂದು ತಿಳಿದು ಬಂದಿದೆ. ಇದರಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಪತ್ನಿ ಲತಾ ತಾನೂ ವಿಷ ಸೇವಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೂರು ನೀಡಿದ್ದಕ್ಕೆ ಪೋಷಕರಿಗೆ ಕಿರುಕುಳ
ಮೈಸೂರು, ಮಾರ್ಚ್ 9 : ಅಪಘಾತ ಮಾಡಿದ ಕಾರುಮಾಲಿಕನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ಕೇಸ್ ಹಿಂಪಡೆಯುವಂತೆ ಪೋಷಕರಿಗೆ ಕಿರುಕುಳ ನೀಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ರಾಜೀವ್ ನಗರದ ಬಳಿಯ ಅಮೃತನಗರದಲ್ಲಿ ಫೆ.13ರಂದು ಮನೆಯ ಮುಂದೆ ಆಟವಾಡುತ್ತಿದ್ದ ಆಲಿಯಾ ಕೌಷರ್ ಗೆ ಅನ್ಸರ್ ಕಾರಿನಿಂದ ಡಿಕ್ಕಿ ಹೊಡೆದಿದ್ದ ಎನ್ನಲಾಗಿದೆ.
ಇದರಿಂದ ಮಗುವಿನ ಪೋಷಕರು ದೂರು ದಾಖಲಿಸಿದ್ದರು. ಇದರಿಂದ ಅಮೃತಬಡಾವಣೆಯ ಅಬ್ದುಲ್ ರಹಿಂ ಹಾಗೂ ಬಿಬಿ ಆಯೀಷಾ ದಂಪತಿಗೆ ಕಾರು ಮಾಲಿಕರು ರಕ್ತ ಬರುವಹಾಗೆ ಥಳಿಸಿ ಕೇಸ್ ಹಿಂದೆ ಪಡೆಯುವಂತೆ ಕಿರುಕುಳ ನೀಡಿದ್ದರು ಎನ್ನಲಾಗಿದೆ.
ದೂರುದಾಖಲಾದ ಕಾರಣ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದರು. ಮೈಸೂರು ಸೌತ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವೈಡರ್ ಗೆ ಗುದ್ದಿದ ಬೈಕ್ : ಸವಾರ ಸಾವು
ಮೈಸೂರು, ಮಾರ್ಚ್ 9 : ಬೈಕ್ ನಲ್ಲಿ ಮದುವೆಗೆಂದು ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ರಸ್ತೆ ವಿಭಜಕಕ್ಕೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂಜನಗೂಡು ಬಳಿ ನಡೆದಿದೆ.
ಮೃತರನ್ನು ವಿದ್ಯಾರಣ್ಯಪುರಂ ಮಹಾಲಕ್ಷ್ಮಿ ಜ್ಯೂವೆಲ್ಲರಿಯ ಮಾಲೀಕ ಶಂಕರ್ (30) ಎಂದು ಗುರುತಿಸಲಾಗಿದೆ. ಮೃತರ ಶರೀರವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ನಂಜನಗೂಡು ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications