ಪಾಂಡವಪುರ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಎಸಿಬಿ ದಾಳಿ
ಮೈಸೂರು, ಮೇ 28: ಪಾಂಡವಪುರ ರಿಜಿಸ್ಟ್ರಾರ್ ಕಚೇರಿಯ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಹಲವು ಲೆಕ್ಕಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಕಚೇರಿಯ ಸಬ್ ರಿಜಿಸ್ಟಾರ್ ಸೇರಿದಂತೆ ಮೂವರು ಸಿಬ್ಬಂದಿ ಹಾಗೂ ವೆಂಡರ್ ಗಳನ್ನು ತನಿಖೆಗೆ ಒಳಪಡಿಸಿದ್ದಾರೆ.
ಸೋಮವಾರ ಸಂಜೆ 7ರ ಸುಮಾರಿಗೆ ದಾಳಿ ನಡೆಸಿದ ಹತ್ತು ಮಂದಿ ಎಸಿಬಿ ಅಧಿಕಾರಿಗಳು, ಉಪನೋಂದಣಾಧಿಕಾರಿ ರೂಪಾದೇವಿ, ಸಿಬ್ಬಂದಿ ರೂಪಾ, ಕುಮಾರ್, ಬಾಬು, ಸತ್ಯನಾರಾಯಣ್, ಮಹದೇವ ಸೇರಿದಂತೆ ಹಲವರನ್ನು ತನಿಖೆಗೆ ಒಳಪಡಿಸಿದ್ದಾರೆ.
ಅಲ್ಲದೇ ಇಂದು ಕೂಡ ಕಚೇರಿಯ ಒಳಗೆ ದಾಖಲಾತಿ ಹಾಗೂ ಕಂಪ್ಯೂಟರ್ ಗಳನ್ನು ಪರಿಶೀಲಿಸುತ್ತಿದ್ದಾರೆ. ಪಾಂಡವಪುರ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ರಿಜಿಸ್ಟ್ರಾರ್ ರೂಪಾದೇವಿ ಅವರು ಭ್ರಷ್ಟ ಅಧಿಕಾರಿ ಎಂಬ ದೂರುಗಳು ಕೇಳಿಬಂದಿದ್ದವು. ರೂಪಾದೇವಿ ಪ್ರಭಾರ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರು ಸಹ ಸಬ್ ರಿಜಿಸ್ಟ್ರರ್ ರೂಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ರೂಪಾದೇವಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆಯೂ ಮೇಲಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆದರೆ ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಿರಲಿಲ್ಲ ಇದೀಗ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಎಸಿಬಿ ದಾಳಿ ನಡೆಸಲಾಗಿದೆ.











Click it and Unblock the Notifications