ಮೈಸೂರು: ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ
ಮೈಸೂರು, ಜುಲೈ 4 : ಲಂಚ ಸ್ವೀಕರಿಸುವ ವೇಳೆ ಮೈಸೂರು ಪಿಯು ಬೋರ್ಡ್ ವಿಭಾಗದ ಉಪನಿರ್ದೇಶಕ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಘಟನೆ ಇಂದು(ಜು.4) ನಡೆದಿದೆ. ಕಾಲೇಜು ಮಾನ್ಯತೆ ನವೀಕರಣಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೈಸೂರಿನ ಪಿಯು ಮಂಡಳಿ ಉಪನಿರ್ದೇಶಕ ಜಯಪ್ರಕಾಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮೈಸೂರಿನ ಕುವೆಂಪುನಗರದ ವಿಜಯ ಚೇತನ ಕಾಲೇಜು ಮಾನ್ಯತೆ ನವೀಕರಣಕ್ಕಾಗಿ ಜಯ ಪ್ರಕಾಶ್ 2.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ನಡುವೆ ಕುವೆಂಪುನಗರದಲ್ಲಿ 22 ಸಾವಿರ ರೂ. ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಜಯ ಪ್ರಕಾಶ್ ಅವರನ್ನ ಹಿಡಿದಿದ್ದಾರೆ. ಜಯಪ್ರಕಾಶ್ ಜತೆಗೆ ಅವರ ಕಾರುಚಾಲಕನನ್ನೂ ಮತ್ತು 22 ಸಾವಿರ ಹಣವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಯಪ್ರಕಾಶ್ ಲಂಚ ಕೇಳಿರುವ ಬಗ್ಗೆ ಕಾಲೇಜಿನ ಆಡಳಿತಾಧಿಕಾರಿ ಶಕುಂತಲಾ, ಎಸಿಬಿಗೆ ದೂರು ಸಲ್ಲಿಸಿದ್ದರು.












Click it and Unblock the Notifications