ನಾಯಿ ಅಡ್ಡ ಬಂದು ಬೈಕ್ ನಿಂದ ಕೆಳಗೆ ಬಿದ್ದಿದ್ದ ಸವಾರ ಸಾವು
ಮೈಸೂರು, ನವೆಂಬರ್.29: ಸ್ನೇಹಿತನ ಹುಟ್ಟುಹಬ್ಬಕ್ಕೆ ಕೇಕ್ ತರಲು ಹೋದಾಗ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಕಳೆದ ವಾರ ಮೈಸೂರಿನ ಕೆ.ಆರ್.ಆಸ್ಪತ್ರೆ ವೃತ್ತದ ಬಳಿ ಈ ಬೈಕ್ ಅಪಘಾತ ನಡೆದಿತ್ತು. ಸಾವನ್ನಪ್ಪಿದ ಯುವಕ ಶಾರದಾದೇವಿನಗರ ನಿವಾಸಿ ಹರ್ಷಕುಮಾರ್ ಸಿಂಗ್ ಎಂದು ತಿಳಿದು ಬಂದಿದೆ.

ಘಟನೆಯ ವಿವರ
ಕಳೆದ ಭಾನುವಾರ (ನ.25) ಮೈಸೂರಿನ ಕೆ.ಆರ್.ಆಸ್ಪತ್ರೆ ವೃತ್ತದ ಸಮೀಪ ನಾಯಿ ಅಡ್ಡಬಂದ ಹಿನ್ನಲೆ ಆಯಾ ತಪ್ಪಿ ಹರ್ಷಕುಮಾರ್ ಸಿಂಗ್ ಕೆಳಗೆ ಬಿದ್ದರು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಹರ್ಷಕುಮಾರ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಈತ ಇಂದು ಗುರುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೈಸೂರಿನ ದೇವರಾಜ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹರ್ಷ ಕುಮಾರ್ ಸಿಂಗ್ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.












Click it and Unblock the Notifications