ಕೆಳಗಿನಕೊಪ್ಪಲಿನಲ್ಲಿ ನೀರಿನ ತೊಟ್ಟಿಗೆ ಬಿದ್ದು 2 ವರ್ಷದ ಮಗು ದಾರುಣ ಸಾವು

ಮೈಸೂರು, ಜುಲೈ 6 : ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ತೊಟ್ಟಿಗೆ ಬಿದ್ದು ಎರಡು ವರ್ಷದ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗದ ಕೆಳಗಿನಕೊಪ್ಪಲು ಗ್ರಾಮದಲ್ಲಿ ಇಂದು ನಡೆದಿದೆ.

ಬೆಟ್ಟದತುಂಗದ ಕೆಳಗಿನ ಕೊಪ್ಪಲು ಗ್ರಾಮದ ಜಗದೀಶ ಮತ್ತು ಲಕ್ಷ್ಮಿ ಎಂಬವರ ಪುತ್ರ ಯಶಸ್ (2) ಮೃತಪಟ್ಟ ಮಗು. ಯಶಸ್ ತಂದೆ-ತಾಯಿ ಮನೆಯ ಹಿಂಭಾಗದಲ್ಲಿ ಇರುವ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರ ಜೊತೆಯಲ್ಲೇ ಆಟವಾಡುತ್ತಿತ್ತು. ನಂತರ ತಾಯಿ ಲಕ್ಷ್ಮಿ ಮನೆಗೆ ಹೋಗಿದ್ದನ್ನು ನೋಡಿ ಮಗು ಹಿಂಬಾಲಿಸಿದೆ.

ಆಗ ಮನೆಯ ಸಮೀಪವಿರುವ ನೀರಿನ ತೊಟ್ಟಿಯಲ್ಲಿ ಯಾವುದೋ ಒಂದು ಆಟಿಕೆ ವಸ್ತುವನ್ನು ನೋಡಿ ಅದನ್ನು ತೆಗೆದುಕೊಳ್ಳಲು ಹೋಗಿ ಸುಮಾರು 3 ಅಡಿ ಆಳವಿರುವ ತೊಟ್ಟಿಗೆ ಕಾಲು ಜಾರಿ ಬಿದ್ದು ಮೃತಪಟ್ಟಿದೆ. ಆದರೆ ಮಗು ತೊಟ್ಟಿಗೆ ಬಿದ್ದಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ.

A two-year-old baby has died by fell in tank

ನಂತರ ಮಗುವನ್ನು ಹುಡುಕುತ್ತಿದ್ದ ಪೋಷಕರಿಗೆ ತೊಟ್ಟಿಯಲ್ಲಿ ಮಗುವಿನ ಮೃತ ದೇಹ ಕಂಡು ಆಘಾತವಾಗಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು,
ಸದ್ಯ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+