ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪಾಪಿ ಪತಿ

ಮೈಸೂರು, ಜುಲೈ. 9: ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಆಕೆಯ ಪತಿ ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿರುವ ಅಮಾನುಷ ಘಟನೆ ನಗರದ ನೀಲಕಂಠನಗರ ಬಡಾವಣೆಯಲ್ಲಿ ನಡೆದಿದೆ.

ನೀಲಕಂಠನಗರ ಬಡಾವಣೆಯ ಶೇಖರ್ ಎಂಬುವರ ಮಗಳಾದ ಲಕ್ಷ್ಮೀ (21) ಕೊಲೆಯಾಗಿರುವ ಗರ್ಭಿಣಿ. ಒಂದು ವರ್ಷದ ಹಿಂದೆ ಮೈಸೂರು ತಾಲೂಕಿನ ಕಡಕೊಳ ಸಮೀಪವಿರುವ ಕೂಡನಹಳ್ಳಿ ಗ್ರಾಮದ ವಿಜಯ್ ಮತ್ತು ಲಕ್ಷ್ಮಿ ಇಬ್ಬರೂ ಪೀತಿಸಿ, ಕುಟುಂಬದವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು.

ನಂತರದ ದಿನಗಳಲ್ಲಿ ಪತಿ ವಿಜಯ್ ಪ್ರತಿದಿನ ಮದ್ಯಪಾನ ಮಾಡಿಕೊಂಡು ಬಂದು ಲಕ್ಷ್ಮೀಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಕಳೆದೆರಡು ದಿನಗಳ ಹಿಂದೆ ಮನೆಯ ಮಹಡಿ ಮೇಲಿರುವ ರೂಮಿನಲ್ಲಿ ಬಾಗಿಲು ಹಾಕಿಕೊಂಡು, ಲಕ್ಷ್ಮಿಯನ್ನು ಬಟ್ಟೆಯಿಂದ ಕತ್ತು ಹಿಸುಕಿ ಕೊಲೆಮಾಡಿದ್ದಾನೆ.

A seven-month pregnant wife has been killed by her husband

ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೃತ ಲಕ್ಷ್ಮೀಯ ತಂದೆ, ಅಳಿಯ ಶೇಖರ್ ಮಗಳನ್ನು ಕೊಲೆಗೈದಿದ್ದಾನೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವೃತ್ತ ನಿರೀಕ್ಷಕ ಶಿವಮೂರ್ತಿ, ಗರ್ಭಿಣಿ ಲಕ್ಷ್ಮೀ ಸಾವಿಗೆ ಕಾರಣವಾಗಿರುವ ಪತಿ ವಿಜಯ್ ಬಂಧನಕ್ಕೆ ತೀವ್ರ ತನಿಖೆ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+