ಮೈಸೂರಿನಲ್ಲಿ ವಿದ್ಯುತ್ ತಂತಿ ಹರಿದು ವ್ಯಕ್ತಿ ಸಾವು
ನಿರ್ಮಾಣದ ಹಂತದಲ್ಲಿರುವ ಮನೆಯೊಂದರ ಕಬ್ಬಿಣ ಕೆಲಸಕ್ಕೆ ಹೋಗಿದ್ದ ನವೀನ್ ಎಂಬ ವ್ಯಕ್ತಿ ಅಧಿಕ ವಿದ್ಯುತ್ ಪ್ರವಹಿಸುವ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು, ಮಾರ್ಚ್ 27: ನಿರ್ಮಾಣದ ಹಂತದಲ್ಲಿರುವ ಮನೆಯೊಂದರ ಕಬ್ಬಿಣ ಕೆಲಸಕ್ಕೆ ಹೋಗಿದ್ದ ನವೀನ್ ಎಂಬ ವ್ಯಕ್ತಿ ಅಧಿಕ ವಿದ್ಯುತ್ ಪ್ರವಹಿಸುವ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ನವೀನ್ ಅವರೊಂದಿಗಿದ್ದ ಚಂದ್ರು ಎಂಬ ಇನ್ನೋರ್ವ ವ್ಯಕ್ತಿಗೂ ಸುಟ್ಟ ಗಾಯಗಳಾಗಿದ್ದು, ಅವರೀಗ ಇಲ್ಲಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಹುಣಸೂರು ಬಳಿ ಭೀಕರ ಅಪಘಾತ, ಐವರ ಸಾವು]

ಇವರಿಬ್ಬರೂ ಅಂಬೇಡ್ಕರ್ ಬೀದಿಯ ಚಿನ್ಮಯ್ ಎಂಬವರ ಮನೆಗೆ ಕಬ್ಬಿಣದ ಕೆಲಸ ಮಾಡಲು ತೆರಳಿದ್ದರು. ಈ ವೇಳೆ ಕಬ್ಬಿಣ ಹಿಡಿದು ಕೆಲಸ ಮಾಡುತ್ತಿರುವಾಗ ಅಧಿಕ ವಿದ್ಯುತ್ ಪ್ರವಹಿಸುವ ತಂತಿ ಇವರಿಗೆ ತಗುಲಿದೆ. ತಕ್ಷಣ ಜ್ಞಾನತಪ್ಪಿ ಬಿದ್ದ ಇಬ್ಬರಲ್ಲಿ ಚಂದ್ರು ಬದುಕಿದ್ದರೆ, ನವೀನ್ ಕೊನೆಯುಸಿರೆಳೆದಿದ್ದಾರೆ.[ಮೈಸೂರು: ಮಗಳನ್ನು ಅಪಹರಿಸುತ್ತೇವೆ ಎಂದಿದ್ದಕ್ಕೆ ತಂದೆ ಆತ್ಮಹತ್ಯೆ]

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications