ಮಾವ, ಚಿಕ್ಕಮ್ಮನ ಅನೈತಿಕ ಸಂಬಂಧ, ಯುವಕ ಆತ್ಮಹತ್ಯೆ

ಮೈಸೂರು, ಅಕ್ಟೋಬರ್ 25 : ಸಂಬಂಧಿಕರ ಅನೈತಿಕ ಸಂಬಂಧದಿಂದ ಬೇಸತ್ತು ಫೇಸ್ ಬುಕ್ ನ ಕವರ್ ಪೇಜ್ ನಲ್ಲಿ ಡೆತ್ ನೋಟ್ ಹಾಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲೂಕಿನ ಡಿ. ಸಾಲುಂಡಿ ಗ್ರಾಮದಲ್ಲಿ ನಡೆದಿದೆ.

ನವೀನ್ ನಾಯಕ್ ಆತ್ಮಹತ್ಯೆಗೆ ಶರಣಾದ ಯುವಕ. 6 ಪುಟಗಳ ಡೆತ್ ನೋಟ್ ಬರೆದು ಬಳಿಕ ಫೇಸ್ ಬುಕ್ ಕವರ್ ಪೇಜ್ ಗೆ ಹಾಕಿ ಆತ್ಕಹತ್ಯೆ ಶರಣಾಗಿದ್ದಾನೆ. ಚಿಕ್ಕಮ್ಮ ಮಂಗಳ ಹಾಗೂ ಮಾವ ಹನುಮಂತು ನಡುವೆ ಅಕ್ರಮ ಸಂಬಂಧವಿತ್ತು. ಆ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತ್ತಿದ್ದರು. ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ.

A boy updated his death note as a cover photo in facebook committed suicide

ಇನ್ನು ಆತನ ಶವಯಾತ್ರೆ ನಡೆಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಮಶಾನಕ್ಕೆ ಕೊಂಡೊಯುತ್ತಿದ್ದ ಶವವನ್ನು ಅರ್ಧದಲ್ಲೇ ತಡೆದು ಕೆ.ಆರ್.ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಮಾಧ್ಯಮಗಳ ವರದಿಗೆ ಕೊನೆಗೂ ಎಚ್ಚತ್ತ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಸ್ಥಳಕ್ಕೆ ಜಯಪುರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಮೃತನ ಕುಟುಂಬಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಮಾಧ್ಯಮ ಸಿಬ್ಬಂದಿಗೆ ದಿಗ್ಬಂಧನ ಹಾಕಲಾಗಿದೆ.

ಮೃತ ನವೀನ್ ನಾಯಕ್ ಸಂಬಂಧಿಕರಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಮೊಬೈಲ್ ಫೋನ್, ದ್ವಿಚಕ್ರ ವಾಹನಗಳ ಬೀಗದ ಕೈ ಕಸಿದುಕೊಂಡು ನಿಂದಿಸಿದ್ದು, ವರದಿ ಮಾಡದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+