ನೀತಿ ಸಂಹಿತೆ ಉಲ್ಲಂಘನೆ; ಮೈಸೂರು ಜಿಲ್ಲೆಯಲ್ಲಿ ಸಿ ವಿಜಿಲ್ ಮೂಲಕ 855 ದೂರು ದಾಖಲು
ಲೋಕಸಭಾ ಚುನಾವಣೆಯಲ್ಲಿ ನಡೆಯುವ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಕ್ರಮಗಳನ್ನು ತಡೆಗಟ್ಟಲು ಚುನಾವಣಾ ಆಯೋಗ ತೆರೆದಿರುವ ಸಿ-ವಿಜಿಲ್ ಆ್ಯಪ್ ಮೂಲಕ ಮೈಸೂರು ಜಿಲ್ಲೆಯಲ್ಲಿ 855 ದೂರುಗಳು ದಾಖಲಾಗಿವೆ.
ನರಸಿಂಹರಾಜ ಕ್ಷೇತ್ರದಲ್ಲೇ ಅತಿ ಹೆಚ್ಚು 161 ದೂರುಗಳು ಬಂದಿವೆ. ಕೃಷ್ಣರಾಜ (102), ಚಾಮರಾಜ (101), ಹುಣಸೂರು (94) ದೂರುಗಳು ದಾಖಲಾಗಿವೆ. ನಂಜನಗೂಡು (21) ಹಾಗೂ ಎಚ್.ಡಿ.ಕೋಟೆಯಲ್ಲಿ (37) ದೂರುಗಳು ಬಂದಿವೆ.

ಹೆಚ್ಚಿನ ದೂರುಗಳು ಅನುಮತಿ ಇಲ್ಲದೆ ಬ್ಯಾನರ್, ಪೋಸ್ಟರ್‌ಗಳನ್ನು ಹಾಕಿರುವ ಬಗ್ಗೆ ಮತ್ತು ಉಡುಗೊರೆ, ಹಣ, ಮದ್ಯ ಹಂಚುತ್ತಿರುವ ಕುರಿತಾಗಿವೆ. ಬಹುತೇಕ ದೂರುಗಳನ್ನು ಚುನಾವಣಾಧಿಕಾರಿಗಳು ಬಗೆಹರಿಸಿದ್ದಾರೆ.
ಏನಿದು ಸಿ-ವಿಜಿಲ್?
ಮತಕ್ಕಾಗಿ ಮತದಾರರನ್ನು ಸೆಳೆಯಲು ಉಡುಗೊರೆ, ಮದ್ಯ, ಹಣ ಹಂಚುವವರನ್ನು ಕಂಡ ತಕ್ಷಣ ಪೊಲೀಸರಿಗೆ ತಿಳಿಸಲು ಸಿ-ವಿಜಿಲ್ ಆ್ಯಪ್ ಸಹಕಾರಿ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುವುದನ್ನು ತಡೆಗಟ್ಟಲು ಸಾರ್ವಜನಿಕರು ಸಿ-ವಿಜಿಲ್ ಆ್ಯಪ್ (ಸಿಟಿಜನ್-ವಿಜಿಲ್) ಮೂಲಕ ದೂರು ನೀಡಬಹುದು.
ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
ಪ್ರತಿಯೊಬ್ಬರೂ ತಮ್ಮ ಮೊಬೈಲ್‌ನ ಪ್ಲೇ ಸ್ಟೋರ್‌ನಲ್ಲಿ ಸಿ-ವಿಜಿಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.
ಕಾರ್ಯ ನಿರ್ವಹಣೆ ಹೇಗೆ
ಸಿ ವಿಜಿಲ್ ಆ್ಯಪ್‌ನಲ್ಲಿ ದೂರು ಬಂದ ತಕ್ಷಣ ಆ ಮಾಹಿತಿಯು ಜಿಲ್ಲಾ ಚುನಾವಣಾಧಿಕಾರಿಗಳ ಕಂಟ್ರೋಲ್ ರೂಂಗೆ ಹೋಗಲಿದೆ. ಚುನಾವಣಾಧಿಕಾರಿ ಕಚೇರಿಯಿಂದ ಆಯಾ ಪ್ರದೇಶದ ವಿವಿಧ ಚುನಾವಣಾ ತಪಾಸಣಾ ತಂಡಗಳಾದ ಲೈಯಿಂಗ್ ಸ್ಕ್ವಾಡ್ ತಂಡಗಳಿಗೆ ರವಾನೆಯಾಗುತ್ತದೆ. ಯಾವುದೇ ಅಕ್ರಮಗಳು ವರದಿಯಾದ ತಕ್ಷಣವೇ ತಪಾಸಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡುತ್ತವೆ.
ಜಿಲ್ಲೆಯಲ್ಲಿ ಚುನಾವಣಾ ಅಕ್ರಮ ಸಂಬಂಧ ಕೆಲವು ನಕಲಿ ದೂರುಗಳು ಬಂದಿವೆ. ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆಯನ್ನು ಪರಿಶೀಲಿದಾಗ ಇದು ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ದಾಖಲಾಗಿರುವ ದೂರುಗಳ ವಿವರ
ಚಾಮರಾಜ 101
ಚಾಮುಂಡೇಶ್ವರಿ 71
ಎಚ್.ಡಿ..ಕೋಟೆ 37
ಹುಣಸೂರು 94
ಕೃಷ್ಣರಾಜ 102
ಕೆ.ಆರ್.ನಗರ 84
ನಂಜನಗೂಡು 27
ನರಸಿಂಹರಾಜ 161
ಪಿರಿಯಾಪಟ್ಟಣ 53
ತಿ.ನರಸೀಪುರ 45
ವರುಣ 80
ಒಟ್ಟು 855












Click it and Unblock the Notifications