4,511 ರೈತರಿಗೆ 80 ಲಕ್ಷ ರೂಪಾಯಿಗಳ ಬರ ಪರಿಹಾರ ಧನ ವಿತರಣೆ
ಹುಣಸೂರು ಫೆಬ್ರವರಿ 27: ಬರಪರಿಹಾರದ ಪ್ರಥಮ ಹಂತವಾಗಿ ತಾಲೂಕಿನ 4,511 ರೈತರಿಗೆ 80 ಲಕ್ಷ ರೂಪಾಯಿಗಳ ಬರಪರಿಹಾರ ಧನವನ್ನು ವಿತರಿಸಲಾಗಿದೆ ಎಂದು ತಹಸೀಲ್ದಾರ್ ಜಿ. ಮಂಜುನಾಥ್ ಹೇಳಿದರು.
ಹುಣಸೂರು ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕಿನಲ್ಲಿ ಬರಪರಿಸ್ಥಿತಿಯ ಕುರಿತು ರೈತರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಮುಂಗಾರು ಹಂಗಾಮಿನ ವೇಳೆ ರಾಜ್ಯ ಸರ್ಕಾರದ ಆದೇಶದಂತೆ ತಾಲೂಕಿನಲ್ಲಿ ಕೈಗೊಂಡಿದ್ದ ಸಮೀಕ್ಷೆಯಲ್ಲಿ ತಾಲುಕಿನ 4,511 ರೈತರು 7,130 ಹೆಕ್ಟೇರ್ ಭೂಪ್ರದೇಶದಲ್ಲಿ ಬೆಳೆದಿದ್ದ ಹತ್ತಿ ಮತ್ತು ಮುಸುಕಿನ ಜೋಳದ ಬೆಳೆಗಳ ವರದಿಯನ್ನು ನೀಡಲಾಗಿತ್ತು.

ಸರ್ಕಾರ ಮೊದಲ ಹಂತವಾಗಿ ಪರಿಹಾರ ಧನವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಿದ್ದು, ಫಲಾನುಭವಿಗಳ ಪಟ್ಟಿಯನ್ನು ಆಯಾ ಗ್ರಾ.ಪಂ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಹಿಂಗಾರು ಬೆಳೆಯಾಗಿ ರೈತರು ಪ್ರಮುಖವಾಗಿ ರಾಗಿ ಬೆಳೆದಿದ್ದು, ಈ ಬೆಳೆಯನ್ನು ಬರಪರಿಹಾರ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆನ್ನುವ ಒತ್ತಾಯ ರೈತರಿಂದ ಬಂದಿದೆ. ಈ ಕುರಿತು ಈಗಾಗಲೇ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸರ್ಕಾರದ ನಿರ್ಧಾರ ಇನ್ನೂ ಪ್ರಕಟಗೊಂಡಿಲ್ಲವೆಂದರು.
ಕಳೆದ 15 ದಿನಗಳ ಹಿಂದೆ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೋಮದರೆ ಇರಲಿಲ್ಲ. ಅದರ ಇದೀಗ ತಾಲೂಕಿನ 17 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಕಂಡು ಬಂದಿದ್ದು, ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಖಾಸಗಿ ಬೋರ್ ವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳುವತ್ತ ಕೂಡ ಗಮನಹರಿಸಲಾಗಿದೆ. ತಾಲೂಕಿನಲ್ಲಿ ಜಾನುವಾರುಗಳಿಗೆ ಮೆವಿನ ಕೊರತೆ ಇಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಸರ್ಕಾರ ರೈತರ ಪಂಪ್ ಸೆಟ್‌ಗಳಿಗೆ 7 ಗಂಟೆಗಳ ವಿದ್ಯುತ್ ಪೂರೈಕೆಗೆ ಆದೇಶಿಸಿದೆ. ಆದರೆ ತಾಲೂಕಿನಲ್ಲಿ ಪೂರೈಕೆಯಾಗುತ್ತಿಲ್ಲ. ಅದರಲ್ಲೂ ರಾತ್ರಿ ವೇಳೆ ವಿದ್ಯುತ್ ಪೂರೈಸುವುದು ಸರಿಯಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ರೈತ ಮುಖಂಡರಾದ ವಿಷಕಂಠಪ್ಪ, ಮೂರ್ತಿ, ಮಹೇಶ ಮುಂತಾದವರು ಸೆಸ್ಕ್ ಈ ಕುರಿತು ಗಮನಿಸಿ, ವನ್ಯ ಜೀವಿಗಳಿಂದ ರೈತರ ಜೀವಹಾನಿಯೂಗುವುದನ್ನು ತಪ್ಪಿಸಲಿ ಎಂದು ಆಗ್ರಹಿಸಿದರು. ವಿಷಕಂಠಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ಮೋದೂರು ಮಹೇಶ್ ಮಾತನಾಡಿದರು.
ಸೆಸ್ಕ್ ಎಇಇ ಸಿದ್ದಪ್ಪ ಮಾತನಾಡಿ, ತಾಲೂಕಿನಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲೇ ವಿದ್ಯುತ್ ಪೂರೈಸಲಾಗುತ್ತಿದೆ. ತಾಲೂಕಿನಾದ್ಯಂತ ಏಳು ಗಂಟೆಗಳ ವಿದ್ಯುತ್ ಪೂರೈಕೆ ನೀಡಲಾಗುತ್ತಿದೆ. ಟಿಸಿಗಳಲ್ಲಿ ಅಕ್ರಮ ಸಂಪರ್ಕವಿದ್ದಲ್ಲಿ ಓವರ್ಲೋಡ್ ಆಗಿ ಟಿಸಿ ಸುಟ್ಟುಹೋಗುತ್ತದೆ. ಹಾಗಾಗಿ ರೈತರು ಅಕ್ರಮ ಸಂಪರ್ಕಕ್ಕೆ ಕೈಹಾಕಬಾರದು ಎಂದು ಕೋರಿದರು. ತೋಟಗಾರಿಕೆ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿ, ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಸೋಲಾರ್ ವಿದ್ಯುತ್ ಉತ್ಪಾಧನಾ ಘಟಕ ಸ್ಥಾಪನೆಗೆ ಸಬ್ಸಿಡಿ ಫೋಷಿಸಿದೆ.
ಸರ್ಕಾರದಿಂದ ಮೊದಲ ಬೃಹತ್ ಉದ್ಯೋಗ ಮೇಳ ಬೆಂಗಳೂರಿನಲ್ಲಿ ಆರಂಭ 1.5 ಲಕ್ಷ ರೂಪಾಯಿಗಳ ಸಬ್ಸಿಡಿ ಸಿಗಲಿದೆ. ಘಟಕ ಸ್ಥಾಪನೆಗೆ 3-4 ಲಕ್ಷ ರೂಪಾಯಿಗಳು ವೆಚ್ಚವಾಗಲಿದೆ. ಆಸಕ್ತೆಉ ಅರ್ಜಿ ಸಲ್ಲಿಸಲು ಕೋರಿದರು. ರೈತ ಮುಖಂಡರಾದ ಈಶ್ವರ, ನಿಂಗಮ್ಮ, ತಮ್ಮರಸು, ಸ್ವಾಮಿಗೌಡ, ಆರ್. ಮೂರ್ತಿ, ಪಶುಪಾಲನ ಮತ್ತು ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಚನ್ನಬಸಪ್ಪ, ತಾಪಂ ಯೋಜನಾಧಿಕಾರಿ ರಾಜೇಶ್, ಜಿಪಂ ಕುಡಿಯುವ ನೀರು ವಿಭಾಗದ ಎಇಇ ಕಲೀಂ ಅಹಮದ್ ಇದ್ದರು.












Click it and Unblock the Notifications