ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5 ರಾಜ್ಯದ ಚುನಾವಣೆ; ಮೈಸೂರಿನ ಅಳಿಸಲಾಗದ ಶಾಯಿಗೆ ಬೇಡಿಕೆ

By C. Dinesh
|
Google Oneindia Kannada News

ಮೈಸೂರು, ಮಾರ್ಚ್ 11; ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಚುನಾವಣೆಗಾಗಿ ಮೈಸೂರಿನಲ್ಲಿ ತಯಾರಾಗುವ ಅಳಿಸಲಾಗದ ಶಾಯಿ ಪೂರೈಕೆಗೆ ಆಯಾ ರಾಜ್ಯಗಳ ಚುನಾವಣಾ ಆಯೋಗಗಳು ಪ್ರಸ್ತಾವನೆ ಸಲ್ಲಿಸಿವೆ.

ಆಯೋಗಗಳ ಮನವಿಯಂತೆ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (ಮೈಲ್ಯಾಕ್) ಈಗಾಗಲೇ ಭರದ ತಯಾರಿಯಲ್ಲಿ ತೊಡಗಿದೆ. ಎರಡು ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಶಾಯಿಯನ್ನು ಪೂರೈಸಲು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದೆ.

ಕೇರಳ ವಿಧಾನಸಭಾ ಚುನಾವಣೆಗೆ ನಾಲ್ಕು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಕೇರಳ ವಿಧಾನಸಭಾ ಚುನಾವಣೆಗೆ ನಾಲ್ಕು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಬಳಸಲ್ಪಡುವ ಅಳಿಸಲಾಗದ ಶಾಯಿ ಒದಗಿಸುವಂತೆ ಆಯಾ ರಾಜ್ಯಗಳ ಚುನಾವಣಾ ಆಯೋಗ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಗೆ ಪತ್ರ ಬರೆದಿವೆ. ಐದೂ ರಾಜ್ಯಗಳಿಂದ ಒಟ್ಟು 6,99,270 ಬಾಟಲಿ ಶಾಹಿಗೆ ಬೇಡಿಕೆ ಬಂದಿದೆ.

ತಮಿಳುನಾಡು ಚುನಾವಣಾ ಪೂರ್ವ ಸಮೀಕ್ಷೆ; ಬಿಜೆಪಿಗೆ ನಿರಾಸೆ! ತಮಿಳುನಾಡು ಚುನಾವಣಾ ಪೂರ್ವ ಸಮೀಕ್ಷೆ; ಬಿಜೆಪಿಗೆ ನಿರಾಸೆ!

ಬೇಡಿಕೆ ಬಂದ ದಿನದಿಂದಲೇ ಉತ್ಪನ್ನದ ತಯಾರಿಕೆಯಲ್ಲಿ ಹೆಚ್ಚಳ ಮಾಡಿರುವ ಮೈಲ್ಯಾಕ್, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಚುನಾವಣಾ ಆಯೋಗಗಳು ಕೇಳಿದ್ದ ನಿಗದಿತ ಪ್ರಮಾಣದ ಇಂಕನ್ನು ಈಗಾಗಲೇ ಕಳುಹಿಸಿಕೊಟ್ಟಿದೆ.

ಮತಕ್ಕಾಗಿ ಮಂತ್ರ: ಪಶ್ಚಿಮ ಬಂಗಾಳದಲ್ಲಿ ಇದೆಂಥಾ ರಾಜಕೀಯ ತಂತ್ರ!? ಮತಕ್ಕಾಗಿ ಮಂತ್ರ: ಪಶ್ಚಿಮ ಬಂಗಾಳದಲ್ಲಿ ಇದೆಂಥಾ ರಾಜಕೀಯ ತಂತ್ರ!?

ಎಲ್ಲಾ ರಾಜ್ಯಗಳ ಬೇಡಿಕೆ

ಎಲ್ಲಾ ರಾಜ್ಯಗಳ ಬೇಡಿಕೆ

ಮಾರ್ಚ್ 15ರೊಳಗೆ ಎಲ್ಲಾ ರಾಜ್ಯಗಳ ಬೇಡಿಕೆಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಮೈಲ್ಯಾಕ್ ಕಾರ್ಯ ನಿರ್ವಹಣೆ ಮಾಡುತ್ತಿದೆ. ಇನ್ನುಳಿದ ಮೂರು ರಾಜ್ಯಗಳಿಗೆ ಮುಂದಿನ ವಾರದೊಳಗೆ ತಲುಪಿಸಲು ಸಿದ್ಧತೆ ಮಾಡಿಕೊಂಡಿದೆ.

ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಶಾಯಿಗೆ ಬೇಡಿಕೆ ಹೆಚ್ಚಾಗಿದ್ದು, ಐದೂ ರಾಜ್ಯಗಳಿಂದ ಮೈಲ್ಯಾಕ್‌ಗೆ ಒಟ್ಟು 11 ಕೋಟಿ 20 ಲಕ್ಷ ರೂ.ಗಳ ವ್ಯವಹಾರ ನಡೆದಿದೆ. ಮೈಲ್ಯಾಕ್‌ನಲ್ಲಿ 5 ಸಿಸಿ ಮತ್ತು 10ಸಿಸಿ ಬಾಟಲಿಗಳಲ್ಲಿ ಶಾಯಿ ಲಭ್ಯವಿದ್ದು, ಈ ಐದೂ ರಾಜ್ಯಗಳ ಚುನಾವಣಾ ಆಯೋಗಗಳು 10 ಸಿಸಿ ಪ್ರಮಾಣದ ಬಾಟಲಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಅಂತೆಯೇ ಮೈಲ್ಯಾಕ್ ಎಲ್ಲ ರಾಜ್ಯಗಳಿಗೂ 10 ಸಿಸಿ ಬಾಟಲಿಯಲ್ಲಿ ಅಳಿಸಲಾಗದ ಶಾಯಿಯನ್ನು ಪೂರೈಕೆ ಮಾಡುತ್ತಿದೆ.

ಉತ್ತರಪ್ರದೇಶ ಪ್ರಸ್ತಾವನೆ

ಉತ್ತರಪ್ರದೇಶ ಪ್ರಸ್ತಾವನೆ

ಉತ್ತರಪ್ರದೇಶ ರಾಜ್ಯದಲ್ಲಿ ಶೀಘ್ರದಲ್ಲೇ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಶಾಯಿ ಒದಗಿಸುವಂತೆ ಕೋರಿ ಉತ್ತರ ಪ್ರದೇಶ ಚುನಾವಣಾ ಆಯೋಗ ಪ್ರಸ್ತಾವನೆ ಸಲ್ಲಿಸಿದೆ. ಆ ರಾಜ್ಯದ ಬೇಡಿಕೆ ಈಡೇರಿಕೆಗಾಗಿ ಮೈಲ್ಯಾಕ್‌ನಲ್ಲಿ ತಯಾರಿ ನಡೆದಿದೆ.

10 ಸಿಸಿ ಬಾಟಲಿಗಳಲ್ಲಿ ಪೂರೈಕೆ

10 ಸಿಸಿ ಬಾಟಲಿಗಳಲ್ಲಿ ಪೂರೈಕೆ

ಅಸ್ಸಾಂ ರಾಜ್ಯ 83,860, ಪಶ್ಚಿಮ ಬಂಗಾಳ 2,70,700, ಕೇರಳ 1,02,000, ತಮಿಳುನಾಡು 2,37,410, ಪುದುಚೇರಿ 6,000 ಸೇರಿದಂತೆ ಒಟ್ಟು 6,99,270 ಬಾಟಲಿ ಅಳಿಸಲಾಗದ ಶಾಹಿಗಾಗಿ ಬೇಡಿಕೆ ಬಂದಿದೆ. ಎರಡು ರಾಜ್ಯಗಳಿಗೆ ಈಗಾಗಲೇ ಮೈಸೂರಿನಿಂದ 10 ಸಿಸಿ ಬಾಟಲಿಗಳಲ್ಲಿ ಶಾಹಿಯನ್ನು ಕಳಿಸಲಾಗಿದೆ.

ನಿಗದಿತ ಸಮಯದೊಳಗೆ ಒದಗಿಸುತ್ತೇವೆ

ನಿಗದಿತ ಸಮಯದೊಳಗೆ ಒದಗಿಸುತ್ತೇವೆ

ಈ ಬಗ್ಗೆ ಮಾತನಾಡಿರುವ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಎನ್. ವಿ. ಫಣೀಶ್, "ಚುನಾವಣಾ ಆಯೋಗಗಳು ಎಷ್ಟೇ ಪ್ರಮಾಣದ ಶಾಯಿ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಿದರೂ, ಅದನ್ನು ನಿಗಧಿತ ಸಮಯದೊಳಗೆ ಒದಗಿಸಲು ಮೈಲ್ಯಾಕ್ ಶಕ್ತವಾಗಿದೆ. ಪಂಚರಾಜ್ಯಗಳ ಚುನಾವಣೆಗೆ ಈಗಾಗಲೇ ಭರದ ತಯಾರಿ ನಡೆದಿದೆ. ಶಾಯಿಯ ಗುಣಮಟ್ಟದಲ್ಲಿ ಅತ್ಯುನ್ನತೆ ಕಾಯ್ದುಕೊಂಡಿರುವುದರಿಂದ ಇಂದು ಭಾರತ ಮಾತ್ರವಲ್ಲದೆ, ಹೊರದೇಶಗಳಿಂದಲೂ ಶಾಯಿಗಾಗಿ ಬೇಡಿಕೆ ಬರುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಮತ್ತಷ್ಟು ಹೊಸ ಆವಿಷ್ಕಾರಕ್ಕೆ ಮೈಲ್ಯಾಕ್ ಪ್ರಯತ್ನ ನಡೆಸಿದ್ದು, ಅದರ ಫಲಿತಾಂಶ ಸಧ್ಯದಲ್ಲೇ ಬರಲಿದೆ" ಎಂದು ಹೇಳಿದ್ದಾರೆ.

English summary
5 state assembly elections announced. Mysore Paints and Varnish Limited received order for 6,99,270 bottle of indelible ink is popularly known as voter's ink to mark on voters finger during elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X