ಮೈಸೂರು ಅರಮನೆ ಮುಂದೆ ಅರ್ಜುನನಿಗೆ ತ್ರಿಡಿ ಪೇಟಿಂಗ್ ನಮನ
ಮೈಸೂರು, ಡಿಸೆಂಬರ್ 16: ಅರ್ಜುನ ಆನೆ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಸ್ಮರಣಾರ್ಥವಾಗಿ ನಗರದ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಕಲಾವಿದ ಅನಿಲ್ ತ್ರಿಡಿ ಪೇಂಟಿಂಗ್ ಬರೆಯುವ ಮೂಲಕ ವಿಶೇಷವಾಗಿ ನಮನ ಸಲ್ಲಿಸಿದರು.
ಎಂಟು ಬಾರಿ ಅಂಬಾರಿ ಹೊತ್ತು ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಿ ಎಲ್ಲರ ನೆಚ್ಚಿನ ಆನೆಯಾಗಿದ್ದ ಅರ್ಜುನ ಮೃತಪಟ್ಟು ಇಂದಿಗೆ 11 ದಿನ. ಕಾರ್ಯಾಚರಣೆ ವೇಳೆ ಆತ ಮೃತಪಟ್ಟಾಗ ನಾಡಿನ ತುಂಬ ಇರುವ ವನ್ಯಜೀವಿ ಪ್ರೇಮಿಗಳು ಕಣ್ಣೀರಿಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಅರ್ಜುನ ಆನೆ ನೆನಪಿಗಾಗಿ ಮೈಸೂರಿನ ಕಲಾವಿದ ಅನಿಲ್ ವಿಶಿಷ್ಟ ರೀತಿಯಲ್ಲಿ ತ್ರಿಡಿ ಪೇಂಟಿಂಗ್ ಮಾಡಿ ಗಮನ ಸೆಳೆದರು. ಎನಾಮನ್ ಮತ್ತು ಅಕಾಲಿಕ್ ಪೇಂಟ್ ಬಳಸಿ ಚಿತ್ರ ರಚಿಸಲಾಗಿದೆ. ನೂರಾರು ಜನ ತ್ರಿಡಿ ಪೇಂಟಿಂಗ್ ನೋಡಿ ಮೆಚ್ಚುಗೆ ಸೂಚಿಸಿದರು. ಹಲವರು ಪೇಂಟಿಂಗ್ ಮುಂದೆ ನಿಂತು ೆಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
''ಮೈಸೂರಿನ ಜನರಿಗೆ ಅರ್ಜುನನೊಂದಿಗೆ ಭಾವನಾತ್ಮಕ ನಂಟಿದೆ. ಆತನ ನೆನಪು ಸದಾ ನಮ್ಮೊಂದಿಗೆ ಇರಲಿ ಎಂದು ತ್ರಿಡಿ ಚಿತ್ರ ಬಿಡಿಸಿದ್ದೇನೆ. 18 ಅಡಿ ಉದ್ದ ಹಾಗೂ 9 ಅಡಿ ಅಗಲ ಇರುವ ಅರ್ಜುನನ ಚಿತ್ರ ಬರೆಯಲು 24 ಗಂಟೆ ಬೇಕಾಯಿತು. ಚಿತ್ರದೊಂದಿಗೆ ೆಟೋ ತೆಗೆಸಿಕೊಂಡರೆ ನಿಜವಾದ ಅರ್ಜುನನ ಜೊತೆ ನಿಂತು ಭಾವಚಿತ್ರ ತೆಗೆಸಿಕೊಂಡ ಅನುಭವ ವಾಗುತ್ತದೆ,'' ಎಂದು ಕಲಾವಿದ ಅನಿಲ್ ತಿಳಿಸಿದ್ದಾರೆ.












Click it and Unblock the Notifications