ವರುಣನ ಆರ್ಭಟ: ಮುಂಗಡ ಟಿಕೆಟ್ ರದ್ದು ಮಾಡುತ್ತಿರುವ ಪ್ರಯಾಣಿಕರು
ಮೈಸೂರು, ಆಗಸ್ಟ್ 10 : ರಾಜ್ಯದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯ ಪರಿಣಾಮ ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಶೇ.35ರಷ್ಟು ಮಂದಿ ಕಾಯ್ದಿರಿಸಿದ ಮುಂಗಡ ಟಿಕೆಟ್ ಅನ್ನು ರದ್ದು ಮಾಡುತ್ತಿದ್ದಾರೆ.
ಭಾರಿ ಮಳೆ: ಪ್ರಯಾಣಿಕರ ಅನುಕೂಲಕ್ಕೆ ಕೆಎಸ್‌ಆರ್‌ಟಿಸಿ ಕ್ರಮ
ಸಾಮಾನ್ಯವಾಗಿ ಪ್ರತಿ ದಿನ ಟಿಕೆಟ್ ರದ್ದತಿಯ ಪ್ರಮಾಣ ಶೇ.6 ರಿಂದ 8ರಷ್ಟು ಇರುತ್ತಿತ್ತು. ಆದರೆ ಕಳೆದೆರಡು ದಿನಗಳಿಂದ ಈ ಪ್ರಮಾಣ 35ರಷ್ಟು ಏರಿಕೆಯಾಗಿದೆ. ಒಟ್ಟು 7156 ಮಂದಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಒಂದು ದಿನದ ಅವಧಿಯಲ್ಲಿ ರದ್ದು ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯವಾಣಿ ಸ್ಥಾಪಿಸಿದ್ದು, ಈ ಸಹಾಯವಾಣಿ ಕೇಂದ್ರಕ್ಕೆ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಹಾಗೂ ಕೆಸಿಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಯಾಣಿಕರನ್ನೊಳಗೊಂಡಿದ್ದ ಬಸ್ ಪ್ರವಾಹ ಅಥವಾ ಜೋರು ಮಳೆಗೆ ಸಿಲುಕಿದಲ್ಲಿ ತಕ್ಷಣ ಪ್ರಯಾಣಿಕರನ್ನು ಕರೆತರಲು ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಿ ತುರ್ತು ಕ್ರಮ ವಹಿಸಬೇಕು. ಇದರೊಂದಿಗೆ ಸಾರ್ವಜನಿಕರು ಬಸ್ಸುಗಳ ಕಾರ್ಯಾಚರಣೆ, ರದ್ದತಿ, ಮಾರ್ಗ ಬದಲಾವಣೆ, ಪರಿಹಾರ ಸಾಮಗ್ರಿಗಳ ಕುರಿತ ಇನ್ನಿತರ ಮಾಹಿತಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications