ಗಂಡನ ಆಸ್ತಿಗಾಗಿ ಅಲೆದಾಡಿ ಬೇಸತ್ತು ನೇಣಿಗೆ ಶರಣಾದ ಮಹಿಳೆ
ಮೈಸೂರು, ಜುಲೈ 30: ಗಂಡನನ್ನು ಕಳೆದುಕೊಂಡ ಮಹಿಳೆ ಅವರ ಆಸ್ತಿಗಾಗಿ ಹೋರಾಡಿ ಬೇಸತ್ತು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ಸೋಮವಾರ ನಡೆದಿದೆ.
ನಗರದ ಉದಯಗಿರಿಯ ಕಲ್ಯಾಣಗಿರಿಯಲ್ಲಿ ಈ ಘಟನೆ ನಡೆದಿದೆ. ಶಬರೀನ್ ಬಾನು (31) ಮೃತ ಮಹಿಳೆ. 15 ವರ್ಷಗಳ ಹಿಂದೆ ಸೈಯದ್ ಅಜಮದ್ ಆಲಿ ಎಂಬಾತನನ್ನು ಶಬರೀನ್ ಬಾನು ಮದುವೆ ಆಗಿದ್ದರು. ಆದರೆ ಸೈಯದ್ ಅಜಮದ್ ಆಲಿ 8 ವರ್ಷದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಸಾವನ್ನಪ್ಪಿದ ನಂತರ ಕೆಲಸಕ್ಕಾಗಿ ಶಬರೀನ್ ಬಾನು ದುಬೈಗೆ ತೆರಳಿದ್ದರು. ದುಬೈನಲ್ಲಿ ಮೂರು ವರ್ಷ ಕೆಲಸ ಮಾಡಿ ಮೂರು ವರ್ಷದ ಹಿಂದೆ ತಾಯ್ನಾಡಿಗೆ ವಾಪಾಸ್ ಬಂದಿದ್ದರು.

ಬೆಂಗಳೂರಿನ ಯಶವಂತಪುರದಲ್ಲಿ ಗಂಡನಿಗೆ ಸೇರಿದ ಆಸ್ತಿ ಸಂಬಂಧ ಅಲೆದಾಡಿ ಬೇಸತ್ತಿದ್ದರು. ಜತೆಗೆ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತೀವ್ರ ಸಂಕಷ್ಟ ಎದುರಿಸಿದ್ದರು. ಹೀಗಾಗಿ ನಿನ್ನೆ ತಡ ರಾತ್ರಿ ಶಬರೀನ್ ಬಾನು ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.












Click it and Unblock the Notifications