Get Updates
Get notified of breaking news, exclusive insights, and must-see stories!

ಯದುವೀರನ ಮದುವೆ ಆಲೋಚನೆ ಈಗಿಲ್ಲ

ಮೈಸೂರು, ಫೆ. 24 : ಮೈಸೂರು ಯದುವಂಶದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಾಹದ ಬಗ್ಗೆ ಅವರ ವಿದ್ಯಾಭ್ಯಾಸದ ನಂತರ ಮಾಹಿತಿ ನೀಡುತ್ತೇನೆ ಎಂದು ರಾಣಿ ಪ್ರಮೋದಾದೇವಿ ಅವರು ಹೇಳಿದ್ದಾರೆ.

ಮಂಗಳವಾರ ತಮ್ಮ ದತ್ತುಪುತ್ರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆ ರಾಣಿ ಪ್ರಮೋದಾದೇವಿ ಅವರು ಜ್ವಾಲಾಮುಖಿ ತ್ರಿಪುರ ಸುಂದರಿ ದೇವಾಲಯ ಮತ್ತು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. [ದತ್ತು ಸ್ವೀಕಾರ ಸಮಾರಂಭದ ಚಿತ್ರಗಳು]

yaduveer

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಯದುವೀರ ಒಡೆಯರ್ ಅವರ ವಿವಾಹದ ಬಗ್ಗೆ ಶೀಘ್ರದಲ್ಲೇ ಸಿಹಿಸುದ್ದಿ ನೀಡಲಿದ್ದೇನೆ. ಮೊದಲು ಅವರ ವಿಧ್ಯಾಭ್ಯಾಸ ಪೂರ್ಣಗೊಳ್ಳಲಿ' ಎಂದು ತಿಳಿಸಿದರು. [ಯದುವೀರ ಅರಸ್ ಪರಿಚಯ]

ರಾಜಸ್ಥಾನದ ರಾಜಮನೆತನದ ತ್ರಿಶಿಕಾ ಕುಮಾರಿ ಸಿಂಗ್ ಅವರ ಜೊತೆ ಯದುವೀರ ಒಡೆಯರ್ ಅವರ ನಿಶ್ಚಿತಾರ್ಥ ನಡೆಯಲಿದೆಯೇ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಮೋದಾ ದೇವಿ ಅವರು, 'ನಿಶ್ಚಿತಾರ್ಥದ ಸುದ್ದಿ ಸುದ್ದಿಯಾಗೇ ಇರಲಿ. ವಿಧ್ಯಾಭ್ಯಾಸ ಪೂರ್ಣಗೊಂಡ ಬಳಿಕ ಈ ಬಗ್ಗೆ ನಿಮಗೆ ಸಿಹಿ ಸುದ್ದಿ ನೀಡುತ್ತೇನೆ' ಎಂದು ಹೇಳಿದರು.

prince yaduveer

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ಗಾಯಿತ್ರಿ ದೇವಿಯವರ ಮೊಮ್ಮಗ ಯದುವೀರ ಅರಸ್ ಮೈಸೂರು ಸಂಸ್ಥಾನದ ಉತ್ತರಾಧಿಕಾರಿಯಾಗಲಿದ್ದು, ಸೋಮವಾರ ಅವರ ದತ್ತು ಸ್ವೀಕಾರ ಸಮಾರಂಭ ಮುಕ್ತಾಯಗೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+