ಮಾಜಿ ಸಂಸದ ಎಚ್ ವಿಶ್ವನಾಥ್ ಜೆಡಿಎಸ್ ಗೆ: ದೇವೇಗೌಡ್ರು ಏನಂದ್ರು?

Posted By:
Subscribe to Oneindia Kannada

ಮೈಸೂರು, ಏಪ್ರಿಲ್ 18 : ಮೈಸೂರು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಎಚ್ ವಿಶ್ವನಾಥ್ ಅವರು ಜೆಡಿಎಸ್ ಗೆ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ವಿಶ್ವನಾಥ್ ಮೈಸೂರು ಭಾಗದ ಶಕ್ತಿಯುತ ನಾಯಕರು, ಅವರು ಜೆಡಿಎಸ್ ಗೆ ಬರುತ್ತಾರೆ ಎಂಬ ಬಗ್ಗೆ ಇದುವರೆಗೆ ಅವರೂ ಮಾತನಾಡಿಲ್ಲ ನಾನು ಅವರೊಂದಿಗೆ ಮಾತನಾಡಿಲ್ಲ. ಎಲ್ಲವೂ ಹೀಗೆ ಸುದ್ದಿಯಾಗುತ್ತಿದೆ ಅಷ್ಟೇ'' ಎಂದು ಸ್ಪಷ್ಟನೆ ನೀಡಿದರು.[ಮಾಜಿ ಸಂಸದ ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆ?]

EX PM H D Devegowda clarification about EX Mysuru congress MP H Vishwanath join JDS

ಹಲವು ದಿನಗಳಿಂದ ಸ್ವಪಕ್ಷದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದರಿಂದ ವಿಶ್ವನಾಥ್ ಅವರು ಜೆಡಿಎಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದವು. ಇದೀಗ ಆ ಎಲ್ಲ ಸುದ್ದಿಗಳಿಗೆ ಮಾಜಿ ಪ್ರಧಾನಿ ದೇವೇಗೌಡ ಅವರ ತೆರೆ ಎಳೆದಿದ್ದಾರೆ.

ಪಕ್ಷದ ಮುಖಂಡರ ಜತೆ ಮುನಿಸಿಕೊಂಡಿರುವ ವಿಶ್ವಾನಾಥ್ ಅವರ ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರ ಇರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
EX Mysuru congress MP H Vishwanath join JDS rumors, EX PM H D Devegowda clarification press conference in Mysuru, on April 18.
Please Wait while comments are loading...