ದಸರಾಗೆ ಬೆಂಗಳೂರು– ಮೈಸೂರು ನಡುವೆ ವಿಶೇಷ ರೈಲು ಸಂಚಾರ
ಮೈಸೂರು, ಅಕ್ಟೋಬರ್.07 : ನಾಡಹಬ್ಬ ದಸರಾ ಅಂಗವಾಗಿ ಜನದಟ್ಟಣೆ ತಪ್ಪಿಸಲು ಅಕ್ಟೋಬರ್ 9ರಿಂದ 22ರ ವರೆಗೆ ಬೆಂಗಳೂರು- ಮೈಸೂರು ನಡುವೆ ವಿಶೇಷ ರೈಲು ಸಂಚರಿಸಲಿದೆ.
'ಜನಸಾಧಾರಣ ವಿಶೇಷ ರೈಲ'ನ್ನು ನೈರುತ್ಯ ರೈಲ್ವೆ ಪರಿಚಯಿಸಿದೆ. ಬೆಂಗಳೂರು ನಗರ-ಮೈಸೂರು ವಿಶೇಷ ಎಕ್ಸ್ಪ್ರೆಸ್ (06557) ರೈಲು ಅ.9ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 8:45ಕ್ಕೆ ಬೆಂಗಳೂರು ನಗರದಿಂದ ಹೊರಟು ಬೆಳಗ್ಗೆ 11:35ಕ್ಕೆ ಮೈಸೂರು ತಲುಪಲಿದೆ.
ಅದೇ ರೀತಿ ಅ.10ರಿಂದ 22ರವರೆಗೆ ಮೈಸೂರಿನಿಂದ ಮಧ್ಯಾಹ್ನ 12:50ಕ್ಕೆ ಹೊರಡುವ ರೈಲು (06558) ಮಧ್ಯಾಹ್ನ 3:45ಕ್ಕೆ ಬೆಂಗಳೂರು ನಗರ ನಿಲ್ದಾಣಕ್ಕೆ ಬಂದು ಸೇರಲಿದೆ. ಒಟ್ಟು 13 ಟ್ರಿಪ್ ರೈಲು ಸಂಚರಿಸಲಿದೆ.

ಶಿವಮೊಗ್ಗ ಟೌನ್-ಶ್ರವಣಬೆಳಗೊಳ ವಾರದಲ್ಲಿ ಮೂರು ದಿನ ಸಂಚಾರದ ವಿಶೇಷ ಎಕ್ಸ್ಪ್ರೆಸ್ (06223) ರೈಲು ಅ.9ರಿಂದ 25ರವರೆಗೆ ಪ್ರತಿ ಭಾನುವಾರ, ಮಂಗಳವಾರ ಹಾಗೂ ಗುರುವಾರ ಬೆಳಗ್ಗೆ 6:25ಕ್ಕೆ ಶಿವಮೊಗ್ಗದಿಂದ ಹೊರಟು ಬೆಳಗ್ಗೆ 11:25ಕ್ಕೆ ಶ್ರವಣಬೆಳಗೊಳಕ್ಕೆ ತಲುಪಲಿದೆ.
ಅ.9ರಿಂದ 25ರವರೆಗೆ ಶ್ರವಣಬೆಳಗೊಳ-ಶಿವಮೊಗ್ಗ ಟೌನ್ ವಿಶೇಷ ಎಕ್ಸ್ಪ್ರೆಸ್ (06224) ರೈಲು ಪ್ರತಿ ಭಾನುವಾರ, ಮಂಗಳವಾರ ಹಾಗೂ ಗುರುವಾರ ಮಧ್ಯಾಹ್ನ 1:35ಕ್ಕೆ ಶ್ರವಣಬೆಳಗೊಳದಿಂದ ಪ್ರಯಾಣ ಬೆಳೆಸಿ ಸಂಜೆ 7:10ಕ್ಕೆ ಶಿವಮೊಗ್ಗ ಟೌನ್ ಸೇರಲಿದೆ.
ನೈಋತ್ಯ ರೈಲ್ವೆ ಕೆಲವು ಹಾಲ್ಟ್ ಸ್ಟೇಶನ್ ಗಳನ್ನು 3 ತಿಂಗಳ ಅವಧಿಗೆ ಬಂದ್ ಮಾಡಿದೆ. ಆದಿಚುಂಚನಗಿರಿ, ಸಿದ್ದಾಪುರ, ಪಾಲಹಳ್ಳಿ, ದೊಡ್ಡನಟ್ಟ, ಗಣ್ಣಘಟ್ಟ, ಗೊಟ್ಟಿಹಳ್ಳಿ, ಗಿಡ್ನಹಳ್ಳಿ ಹಾಲ್ಟ್ ನಿಲ್ದಾಣಗಳನ್ನು ಅ.7ರಿಂದ ಮೂರು ತಿಂಗಳ ಅವಧಿಗೆ ಬಂದ್ ಮಾಡಲಾಗುವುದು.
ಯಶವಂತಪುರ-ಮೈಸೂರು ಪ್ಯಾಸೆಂಜರ್ (56215) ರೈಲು ಆದಿಚುಂಚನಗಿರಿ ಹಾಗೂ ಸಿದ್ದಾಪುರ, ಬೆಂಗಳೂರು ನಗರ-ಕೋಲಾರ ಪ್ಯಾಸೆಂಜರ್ (76551) ರೈಲು ದೊಡ್ಡನಟ್ಟ, ಜನ್ನಘಟ್ಟ, ಗಿಡ್ನಳ್ಳಿ ನಿಲ್ದಾಣದಲ್ಲಿ ಚನ್ನಪಟ್ಟಣ-ಕೋಲಾರ (76525) ದೊಡ್ಡನಟ್ಟ, ಗೊಟ್ಟಿಹಳ್ಳಿ, ಜನ್ನಘಟ್ಟ ಹಾಗೂ ಗಿಡ್ನಳ್ಳಿ ನಿಲ್ದಾಣದಲ್ಲಿ 3 ತಿಂಗಳು ನಿಲುಗಡೆಗೊಳ್ಳುವುದಿಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
-
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?












Click it and Unblock the Notifications