ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸುತ್ತಾರಾ? ಸ್ಪಷ್ಟನೆ ನೀಡಿದ ಅತೃಪ್ತರು

Recommended Video

      ಗುರುವಾರದಂದು ಎಚ್ ಡಿ ಕುಮಾರಸ್ವಾಮಿ ಮತಯಾಚನೆ | ಅತೃಪ್ತ ಶಾಸಕರು ಭಾಗಿಯಾಗುತ್ತಾರಾ?

      ಮುಂಬೈ, ಜುಲೈ 17: ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು ಬಂದ ಬೆನ್ನಲ್ಲೆ ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರು ಪ್ರತಿಕ್ರಿಯೆ ನೀಡಿದ್ದು, ನಾಳೆ ನಡೆಯುವ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿದ್ದಾರೆ.

      ಮುಂಬೈನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅತೃಪ್ತ ಶಾಸಕರು, ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪಿಗೆ ಸ್ವಾಗತ ವ್ಯಕ್ತಪಡಿಸಿದ್ದು, ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇತ್ತು, ನಮ್ಮ ನಿರೀಕ್ಷೆಯಂತೆ ತೀರ್ಪು ಬಂದಿದೆ ಎಂದಿದ್ದಾರೆ.

      ಶಾಸಕರು ಅಧಿವೇಶನಕ್ಕೆ ಬರುವ ಅಥವಾ ಬರದೇ ಇರುವ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರ್ಯರು ಎಂದು ಸುಪ್ರೀಂಕೋರ್ಟ್ ಹೇಳಿರುವ ಕಾರಣ, ನಾವು ನಾಳಿನ ಅಧಿವೇಶನಕ್ಕೆ ಬರದೇ ಇರಲು ನಿರ್ಧರಿಸಿದ್ದೇವೆ ಎಂದು ಅತೃಪ್ತ ಶಾಸಕರಲ್ಲಿ ಪ್ರಮುಖರಾದ ಎಚ್.ವಿಶ್ವನಾಥ್ ಅವರು ಹೇಳಿದ್ದಾರೆ.

      We do not attend confidence vote proceedings: Dissident MLAs

      ಮುಂಬೈನಲ್ಲಿ ನೆಲೆಸಿರುವ 12 ಅತೃಪ್ತರು ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸುವುದಿಲ್ಲವೆಂಬುದು ಸ್ಪಷ್ಟವಾಗಿದೆ. ಆದರೆ ಮುಂಬೈಗೆ ಹೋಗಿರದ ಆನಂದ್ ಸಿಂಗ್, ರಾಮಲಿಂಗಾ ರೆಡ್ಡಿ ಮತ್ತು ಸುಧಾಕರ್ ಅವರುಗಳು ನಾಳಿನ ಅಧಿವೇಶನದಲ್ಲಿ ಭಾಗವಹಿಸುತ್ತಾರೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.

      ರಾಜೀನಾಮೆ ವಿಚಾರ ಇತ್ಯರ್ಥವಾಗುವವರೆಗೆ ಶಾಸಕರ ಮೇಲೆ ವಿಧಾನಸಭೆ ಪ್ರಕ್ರಿಯೆಗಳಲ್ಲಿ ಭಾಗಿಯಾಗುವಂತೆ ಒತ್ತಾಯ ಹೇರುವಂತಿಲ್ಲವೆಂದು ಸುಪ್ರೀಂಕೋರ್ಟ್‌ ಇಂದು ಮಧ್ಯಂತರ ತೀರ್ಪಿನಲ್ಲಿ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+