ವೈರಲ್ ವಿಡಿಯೋ: ರೈಲ್ವೇ ಹಳಿಗಳ ಮೇಲೆ ಎದೆ ಝಲ್ಲೆನಿಸುವ ಘಟನೆ!

ಮುಂಬೈ, ಜುಲೈ31: ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ರೈಲ್ವೇ ಹಳಿಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೇ ರಕ್ಷಣಾ ಸಿಬ್ಬಂದಿ ರಕ್ಷಿಸಿದ ಎದೆ ಝಲ್ಲೆನಿಸುವ ಘಟನೆಯ ವಿಡೀಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಂಬೈಯ ಕುರ್ಲಾ ರೈಲ್ವೇ ನಿಲ್ದಾಣದಲ್ಲಿ ಜುಲೈ 30 ರಂದು ಪ್ರಯಾಣಿಕನೊಬ್ಬ ಇದ್ದಕ್ಕಿದ್ದಂತೆ ಬಂದು ರೈಲ್ವೇ ಹಳಿಗಳ ಮೇಲೆ ಮಲಗಿಕೊಂಡುಬಿಟ್ಟ. ಇನ್ನೇನು ರೈಲು ಬರಬೇಕು... ಅಷ್ಟರಲ್ಲಿ ರೈಲ್ವೇ ಸಿಬ್ಬಂದಿ ಮತ್ತು ಸಹಪ್ರಯಾಣಿಕರ ಸಮಯ ಪ್ರಜ್ಞೆಯಿಂದಾಗಿ ಆ ವ್ಯಕ್ತಿಯನ್ನು ಹಳಿಯಿಂದ ಅನಾಮತ್ತಾಗಿ ಮೇಲೆತ್ತಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ, ಸರಿಯಾಗಿ ರೈಲು ಬರುವ ಸಮಯಕ್ಕೆ ಆತ ಹಳಿಯ ಮೇಲೆ ಮಲಗಿದ್ದ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರ ಹಿಂದಿರುವ ಕಾರಣದ ಬಗ್ಗೆ ಮಾಹಿತಿ ಲಭ್ಯವಿಲ್ಲ.

Viral video: Mumbai man attempting to commit suicide on railway track, saved

ಇತ್ತೀಚೆಗಷ್ಟೆ ಮುಂಬು ಪಾನ್ವೆಲ್ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸಿ ಪ್ರಾಣ ಕಳೆದುಕೊಳ್ಳುವಂಥ ಸನ್ನಿವೇಶ ಏರ್ಪಟ್ಟಿತ್ತು. ಆಗಲೂ ರೈಲ್ವೇ ಸಿಬ್ಬಂದಿಯೇ ಅವರನ್ನು ಪವಾಡ ಸದೃಶವಾಗಿ ಪಾರುಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+