ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜವಾದಿ ಪಕ್ಷಕ್ಕೆ ಬೆಂಬಲ ಘೋಷಿಸಿದ ಶರದ್ ಪವಾರ್: ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟಿಗೆ ಕರೆ

|
Google Oneindia Kannada News

ಮುಂಬೈ, ಅಕ್ಟೋಬರ್ 13: 2022ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕೇಸರಿ ಪಕ್ಷ ಅಧಿಕಾರ ಉಳಿಸಿಕೊಳ್ಳುವುದನ್ನು ತಡೆಯಲು ಎಲ್ಲಾ ಬಿಜೆಪಿಯೇತರ ಪಕ್ಷಗಳು ಒಂದಾಗಬೇಕು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಮನವಿ ಮಾಡಿದ್ದಾರೆ.

ಇಂದು ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ''2022 ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಎನ್‌ಸಿಪಿ ಈಗಾಗಲೇ ಘೋಷಿಸಿದೆ. ಈ ವೇಳೆ ಮತಗಳ ವಿಭಜನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದನ್ನು ಖಾತ್ರಿಪಡಿಸುವುದು ಮುಖ್ಯ. ಎಲ್ಲಾ ಬಿಜೆಪಿಯೇತರ ಪಕ್ಷಗಳು ಒಟ್ಟಾಗಬೇಕು" ಎಂದು ಶರದ್ ಪವಾರ್ (80) ಮನವಿ ಮಾಡಿದ್ದಾರೆ.

ಲಖಿಂಪುರ್ ಖೇರಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪವಾರ್, ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿದರು, ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

UP Election 2022: Sharad Pawar announces support for Samajwadi Party

"ಲಖಿಂಪುರದಲ್ಲಿ ರೈತರು ಅಮಾನವೀಯವಾಗಿ ಸಾವನ್ನಪ್ಪಿದರು. ಸಚಿವರ ಪುತ್ರ ಸ್ಥಳದಲ್ಲಿ ಇದ್ದಾನೆ ಎಂದು ರೈತರು ಆರೋಪಿಸುತ್ತಾರೆ. ಸುಪ್ರೀಂ ಕೋರ್ಟ್ ತಾಕೀತು ಬಳಿಕ ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಯಿತು. ಈ ಬಗ್ಗೆ ಆಡಳಿತ ಪಕ್ಷ ಸರಿಯಾದ ನಿಲುವನ್ನು ತೆಗೆದುಕೊಳ್ಳಬೇಕು. ಈ ಘಟನೆಯಿಂದ ಸಚಿವರ ಮಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಘಟನೆಯ ಹೊಣೆ ಹೊತ್ತು ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು "ಎಂದು ಪವಾರ್ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರದಿಂದ ಏಜೆನ್ಸಿಗಳ ದುರ್ಬಳಕೆ:

ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸೇರಿದಂತೆ ಕೇಂದ್ರ ಸಂಸ್ಥೆಗಳು ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಶರದ್ ಪವಾರ್ ಆರೋಪಿಸಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಜೊತೆ ಸಂಬಂಧ ಹೊಂದಿರುವ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಗಳನ್ನು ಉಲ್ಲೇಖಿಸಿ ಮಾತನಾಡುತ್ತಾ ಏಜೆನ್ಸಿಗಳ ಸಿಬ್ಬಂದಿ ಬುಧವಾರ ಆರನೇ ದಿನಕ್ಕೆ ದಾಳಿ ನಡೆಸಿದ್ದಾರೆ, ಇದು ತುಂಬಾ ಅಸಾಮಾನ್ಯವಾಗಿದೆ ಎಂದರು. ಇಡಿ, ಸಿಬಿಐ ಮತ್ತು ಎನ್‌ಸಿಬಿ ಸೇರಿದಂತೆ ಕೇಂದ್ರ ಏಜೆನ್ಸಿಗಳು ದುರ್ಬಳಕೆಯಾಗುತ್ತಿವೆ ಎಂದು ಆರೋಪಿಸಿದ್ದಾರೆ.

ಪರಮ್ ಬೀರ್ ಸಿಂಗ್ ಮನೆ ಮೇಲೆ ದಾಳಿ:

"ಪರಮ್ ಬೀರ್ ಸಿಂಗ್ ವಿರುದ್ಧ ಅನೇಕ ಸುಲಿಗೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ವರ್ಷ ಏಪ್ರಿಲ್‌ನಲ್ಲಿ ದಾಖಲಾದ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪೊಲೀಸ್ ಇನ್ಸ್‌ಪೆಕ್ಟರ್‌ ನೀಡಿದ ದೂರಿನ ಮೇರೆಗೆ ಅವರು ಪ್ರಕರಣವನ್ನು ಎದುರಿಸುತ್ತಿದ್ದಾರೆ.

ಅವರ (ದೇಶಮುಖ್) ಮನೆಯ ಮೇಲೆ ಐದನೇ ಬಾರಿ ದಾಳಿ ನಡೆಸಲಾಯಿತು. ಐದನೇ ಬಾರಿಗೆ ಅಲ್ಲಿಗೆ ಹೋದ ನಂತರ ಏಜೆನ್ಸಿಗಳು ಏನನ್ನು ಪಡೆದುಕೊಂಡವು ಎಂದು ನನಗೆ ಅರ್ಥವಾಗುತ್ತಿಲ್ಲ. ಆದರೆ ಅವರು (ಏಜೆನ್ಸಿಗಳು) ದಾಖಲೆಯನ್ನು ಸೃಷ್ಟಿಸಿದ್ದಾರೆ "ಎಂದು ಶರದ್ ಪವಾರ್ ವ್ಯಂಗ್ಯವಾಡಿದರು. ಹೀಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಕೇಂದ್ರ ಸಂಸ್ಥೆಗಳನ್ನು ರಕ್ಷಿಸಲು ಬಿಜೆಪಿ ಪಕ್ಷದ ನಾಯಕರು ಮುಂಚೂಣಿಯಲ್ಲಿದ್ದಾರೆ ಎಂದು ದೂರಿದ್ದಾರೆ.

ವಿರೋಧ ಪಕ್ಷದೊಂದಿಗೆ ಉತ್ತಮ ಸಂಬಂಧ:

ನಾನು 54 ವರ್ಷಗಳ ಶಾಸಕಾಂಗ ವೃತ್ತಿಜೀವನದಲ್ಲಿ ಸುಮಾರು 26 ವರ್ಷಗಳ ಕಾಲ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿದೆ. ಆದರೆ ವಿರೋಧ ಪಕ್ಷದಲ್ಲಿದ್ದಾಗ ಅಥವಾ ಸರ್ಕಾರದಲ್ಲಿದ್ದಾಗ ಆಡಳಿತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇ. ನಾವು ಎಂದಿಗೂ ಅಧಿಕಾರದ ಅಹಂಕಾರವನ್ನು ತೋರಿಸಿಲ್ಲ ಎಂದು ಶರದ್ ಪವಾರ್ ಹೇಳಿದರು.

NCB ಶರದ್ ಪವಾರ್ ಮೆಚ್ಚುಗೆ:
ಇತ್ತೀಚೆಗೆ ಎನ್ಸಿಬಿ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಇತ್ತೀಚೆಗೆ ಕೆಲವು ಉನ್ನತ ವ್ಯಕ್ತಿಗಳ ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ. ಮುಂಬೈ ಪೋಲಿಸ್‌ನ ಮಾದಕದ್ರವ್ಯ ವಿರೋಧಿ ಸೆಲ್ (ANC) ಕೇಂದ್ರ ಸಂಸ್ಥೆಗಿಂತ ಉತ್ತಮ ಕೆಲಸ ಮಾಡಿದೆ ಎಂದು ಹೇಳಿದರು.

"ರಾಜ್ಯ ಸಂಸ್ಥೆಯು ತನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತದೆ, ಆದರೆ ಕೇಂದ್ರೀಯ ಸಂಸ್ಥೆಯು ತನ್ನ ಕೆಲಸವನ್ನು ಕೇಂದ್ರಕ್ಕೆ ನೀಡಲು ಮಾತ್ರ ತನ್ನ ಕೆಲಸವನ್ನು ಮಾಡುತ್ತದೆ ಎಂದು ತೋರುತ್ತದೆ" ಎಂದು ಅವರು ಆರೋಪಿಸಿದ್ದಾರೆ.

ಮುಂಬೈ ಕ್ರೂಸ್ ಡ್ರಗ್ಸ್ ಕೇಸ್‌ನಲ್ಲಿ ಖ್ಯಾತ ನಟ ಶಾರುಖ್ ಖಾನ್ ಪುತ್ರನ ಬಂಧನಕ್ಕೆ ಕಾರಣವಾಗಿದೆ. ಕಳೆದ ವರ್ಷ ಹೆಸರಾಂತ ನಟ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಕೇಸ್‌ ಬಗ್ಗೆ ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ತನಿಖೆ ನಡೆಸಿತು. ಹೀಗೆ ಸುಶಾಂತ್ ಡ್ರಗ್ ಪ್ರಕರಣ ಉನ್ನತ ಮಟ್ಟದ ಜನರನ್ನು ವಿಚಾರಣೆ ಮಾಡಲಾಯಿತಾದರೂ ಇದರ ಬೆಳವಣಿಗೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದರು.

English summary
Nationalist Congress Party (NCP) president Sharad Pawar has appealed all non-BJP parties to come together, announced support to Samajwadi party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X