• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ ಆಸ್ಪತ್ರೆ ಅಗ್ನಿ ಅವಘಡ, ಎರಡು ತಿಂಗಳ ಮಗು ಸೇರಿ ಕನಿಷ್ಠ ಐವರು ಸಾವು

|

ಮುಂಬೈ, ಡಿಸೆಂಬರ್ 17: ಮುಂಬೈ ಆಸ್ಪತ್ರೆಯಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿ, ಎರಡು ತಿಂಗಳ ಮಗು ಸೇರಿದಂತೆ ಕನಿಷ್ಠ ಐವರು ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವರೆಗೆ ನೂರಾ ಆರಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಗ್ನಿ ಅನಾಹುತ ಸಂಭವಿಸಿದೆ ಎಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ದೊರೆತಿದೆ.

ಮುಂಬೈಯಲ್ಲಿ ಭಾರೀ ಕಾಳ್ಗಿಚ್ಚು: ನಾಲ್ಕು ಕಿಮೀ ವ್ಯಾಪಿಸಿದ ಬೆಂಕಿ!

ಸರಕಾರ ನಡೆಸುವ ಇಎಸ್ ಐಸಿ ಕಾಮ್ ಗರ್ ಆಸ್ಪತ್ರೆಯು ಅಂಧೇರಿ ಉಪನಗರದ ಮರೋಲ್ ನಲ್ಲಿ ಇದೆ. ಬೆಂಕಿ ಅನಾಹುತ ಸಂಭವಿಸಿದೆ ಎಂಬ ಬಗ್ಗೆ ಸಂಜೆ ನಾಲ್ಕು ಗಂಟೆ ಹೊತ್ತಿಗೆ ತಿಳಿದುಬಂತು ಎಂದು ನಗರ ಪಾಲಿಕೆ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ಅಗ್ನಿಶಾಮಕ ದಳದ ಹತ್ತು ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಬೆಂಕಿ ನಂದಿಸಲು ಹೆಚ್ಚಿನ ಶ್ರಮ ಹಾಕಲಾಗುತ್ತಿದೆ. ಆಸ್ಪತ್ರೆಯಿಂದ ರೋಗಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಆಸ್ಪತ್ರೆ ಒಳಗೆ ಕೆಲವರು ಸಿಕ್ಕಿಹಾಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆಯು ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Five persons, including a two-month-old baby, were killed while 106 others were rescued as a major fire swept a government hospital in Mumbai’s Andheri (East) on Monday, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X