ಸುಶಾಂತ್ ಸಿಂಗ್ ಆತ್ಮಹತ್ಯೆ: ಅಖಾಡಕ್ಕಿಳಿದ ಸುಬ್ರಮಣಿಯನ್ ಸ್ವಾಮಿ

ಮುಂಬೈ, ಜುಲೈ 10: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಎಂದು ಖಚಿತವಾಗಿದೆ. ಅನುಮಾನದ ಹಿನ್ನೆಲೆ ವಿವಿಧ ಆಯಾಮಗಳಿಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Recommended Video

      Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

      ಮತ್ತೊಂದೆಡೆ ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇದೀಗ, ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಮಾಜಿ ಕೇಂದ್ರ ಸಚಿವ ಸುಬ್ರಮಣ್ಯನ್ ಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ.

      ಸುಶಾಂತ್ ಸಿಂಗ್ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬಹುದು ಎಂದು ಪರಿಶೀಲಿಸಲು ವಕೀಲರನ್ನು ನೇಮಿಸಿದ್ದಾರೆ. ''ಸುಶಾಂತ್ ಪ್ರಕರಣ ಸಿಬಿಐ ತನಿಖೆಗೆ ಸೂಕ್ತವಾದ ಪ್ರಕರಣವೇ ಅಥವಾ ಪಿಐಎಲ್ ಅಥವಾ ಕ್ರಿಮಿನಲ್ ಕೇಸ್ ದಾಖಲಿಸಬಹುದು ಎಂದು ಪರಿಶೀಲಿಸಲು ವಕೀಲ ಇಷ್ಕಾರನ್ ಅವರನ್ನು ಕೇಳಿದ್ದೇನೆ'' ಎಂದು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

      ಮತ್ತೊಂದು ಟ್ವೀಟ್‌ನಲ್ಲಿ ''ಸುಶಾಂತ್ ರಜಪೂತ್ ಪ್ರಕರಣದಲ್ಲಿ ಪ್ರಸ್ತುತ, ಸಂವಿಧಾನದ 21 ನೇ ವಿಧಿಯ ಐಪಿಸಿ 306 ಮತ್ತು 308 ಸೆಕ್ಷನ್‌ಗಳು ಅನ್ವಯವಾಗುತ್ತದೆಯೇ ಎಂದು ಇಷ್ಕಾರನ್ ನೋಡುತ್ತಿದ್ದಾರೆ'' ಎಂದು ಸುಬ್ರಮಣ್ಯನ್ ಸ್ವಾಮಿ ಮಾಹತಿ ಹಂಚಿಕೊಂಡಿದ್ದಾರೆ.

      ಈ ವಿಷಯಕ್ಕೆ ಸಂಬಂಧಿಸಿದಂತೆ ಸುಬ್ರಮಣ್ಯನ್ ಸ್ವಾಮಿ ಶುಕ್ರವಾರ ಸಂಜೆ ಆರು ಗಂಟೆಗೆ ಇನ್ಸ್ಟಾಗ್ರಾಂನಲ್ಲಿ ಲೈವ್ ಬರಲಿದ್ದು, ಸುಶಾಂತ್ ಪ್ರಕರಣದ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.

      Sushant Singh Rajput case: Subramanian Swamy interested on CBI

      ಸುಶಾಂತ್ ಸಿಂಗ್ ಆತ್ಮಹತ್ಯೆಯ ಬಗ್ಗೆ ಶೇಖರ್ ಸುಮನ್, ರೂಪಾ ಗಂಗೂಲಿ, ಮನೋಜ್ ತಿವಾರಿ ಸೇರಿದಂತೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಸಹ ಸಿಬಿಐ ತನಿಖೆ ಮಾಡಲಿ ಎಂದು ಒತ್ತಾಯಿಸುತ್ತಿದ್ದಾರೆ.

      ಇನ್ನು ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಸುಮಾರು 30 ಜನರು ವಿಚಾರಣೆ ಮಾಡಿದೆ. ಸುಶಾಂತ್ ಕುಟುಂಬಸ್ಥರು, ಗೆಳತಿ ರಿಯಾ ಚಕ್ರವರ್ತಿ, ಕಾಸ್ಟಿಂಗ್ ನಿರ್ದೇಶಕ ಮುಖೇಶ್, ಯಶ್ ಚೋಪ್ರಾ ಸಂಸ್ಥೆ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಹಲವರ ಹೇಳಿಕೆ ಪಡೆಯಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+