'ಮುಂಬೈನಲ್ಲಿ ಡ್ಯಾನ್ಸ್ ಬಾರ್ ಓಪನ್ ಮಾಡಲು ಅನುಮತಿ'

ನವದೆಹಲಿ, ಜನವರಿ 17: ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್‌ ಗಳ ಲೈಸನ್ಸ್ ಪಡೆಯುವುದು ಸುಲಭವಾಗಲಿದೆ. ಮಹಾರಾಷ್ಟ್ರ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಸುಪ್ರೀಂಕೋರ್ಟ್ ಸರಳಗೊಳಿಸಿದೆ. ಹೀಗಾಗಿ, ಮುಂಬೈ ಹಾಗೂ ಇತರ ನಗರಗಳಲ್ಲಿ ಡ್ಯಾನ್ಸ್ ಬಾರ್‌ಗಳನ್ನು ಆರಂಭವಾಗಲಿದೆ.

2005ರಿಂದ ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್‌ಗಳಿಗೆ ಲೈಸನ್ಸ್ ಸಿಕ್ಕಿಲ್ಲ. ಡ್ಯಾನ್ಸ್ ಬಾರ್‌ಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳು ಸರಿಯಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಇದರ ಜೊತೆಗೆ ಡಾನ್ಸ್‌ ಬಾರ್‌ನೊಳಗೆ ಸಿಸಿಟಿವಿ ಅಳವಡಿಕೆ ಕಡ್ಡಾಯವೆಂಬ ಮಹಾರಾಷ್ಟ್ರ ಸರಕಾರದ ನಿಯಮವನ್ನು ತಳ್ಳಿಹಾಕಿದೆ. ಇದು ಖಾಸಗಿತನವನ್ನು ಉಲ್ಲಂಘನೆ ಎಂದು ಕೋರ್ಟ್ ಹೇಳಿದೆ.

Supreme Court Okays Dance Bars With Liquor: 10 Facts On What Its Changed

ಉತ್ತಮ ಗುಣನಡತೆಯ ವ್ಯಕ್ತಿ, ಕ್ರಿಮಿನಲ್ ಹಿನ್ನಲೆ ಇಲ್ಲದವರಿಗೆ ಮಾತ್ರ ಡ್ಯಾನ್ಸ್‌ ಬಾರ್ ಲೈಸೆನ್ಸ್ ಪಡೆಯಬೇಕೆಂಬ ರಾಜ್ಯ ಸರಕಾರದ ನಿಯಮವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ಉತ್ತಮ ನಡತೆಯನ್ನು ವ್ಯಾಖ್ಯಾನಿಸುವುದು ತುಂಬಾ ಕಷ್ಟ ಎಂದಿದೆ.

ಬಾರ್‌ನೊಳಗೆ ಹಣ ಬಳಕೆಯಾಗುತ್ತಿರುವ ಬಗ್ಗೆ ತನ್ನ ನಿರ್ಧಾರ ತಿಳಿಸಿದ ಸುಪ್ರೀಂಕೋರ್ಟ್, ಡಾನ್ಸರ್ಸ್, ಬಾರ್ ಟೆಂಡರ್ ಗಳಿಗೆ ಟಿಪ್ಸ್‌ನ್ನು ನೀಡಬಹುದು. ಆದರೆ, ಬಾರ್‌ನೊಳಗೆ ಹಣ ಹಾಗೂ ನಾಣ್ಯಗಳನ್ನು ಎಸೆದಾಡುವಂತಿಲ್ಲ ಎಂದು ಹೇಳಿದೆ. ಬಾರ್ ರೂಮ್ ಹಾಗೂ ಡ್ಯಾನ್ಸ್ ವೇದಿಕೆ ಪ್ರತ್ಯೇಕಿಸುವ ವಿಭಾಗ ಇರಬೇಕು ಎಂಬ ನಿಯಮ ತೆಗೆದು ಹಾಕಿದೆ.

ಸಂಪೂರ್ಣ ನಿಷೇಧ ಹೇರುವುದು ಸರಿಯಲ್ಲ. ಕಠಿಣ ನಿಯಮಾವಳಿಗಳನ್ನು ರೂಪಿಸಬಹುದು ಎಂದು ಜಸ್ಟೀಸ್ ಎಕೆ ಸಿಕ್ರಿ ಹಾಗೂ ಜಸ್ಟೀಸ್ ಅಶೋಕ್ ಭೂಷಣ್ ಅಭಿಪ್ರಾಯಪಟ್ಟಿದ್ದಾರೆ. ಡ್ಯಾನ್ಸ್ ಬಾರ್ ಸಿಬ್ಬಂದಿ, ನೃತ್ಯಗಾರ್ತಿಯರ ಸುರಕ್ಷತೆ ಬಗ್ಗೆ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಮಹಾರಾಷ್ಟ್ರದ ಡ್ಯಾನ್ಸ್ ಬಾರ್ ನಿಯಂತ್ರಣ ಕಾಯ್ದೆ 2016ರ ಪ್ರಕಾರ, 2015ರಿಂದ ಯಾವುದೇ ಹೊಸ ಡ್ಯಾನ್ಸ್ ಬಾರ್ ಗೆ ಲೈಸನ್ಸ್ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+