ಹಕ್ಕುಚ್ಯುತಿ ಮಂಡನೆಯಾದರೆ ಶೋಭಾ ಡೇಗೆ ಜೈಲು?
ಮುಂಬೈ, ಏ. 9 : ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರತಿದಿನ ಸಂಜೆ ಮರಾಠಿ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿಯ ಆದೇಶವನ್ನು 'ದಾದಾಗಿರಿ' ಎಂದು ಟ್ವಿಟ್ಟರಿನಲ್ಲಿ ಬಣ್ಣಿಸಿದ್ದ ಅಂಕಣಗಾರ್ತಿ, ಪತ್ರಕರ್ತೆ ಶೋಭಾ ಡೇ ವಿರುದ್ಧ ಶಿವಸೇನೆ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ.
ದಕ್ಷಿಣ ಮುಂಬೈನಲ್ಲಿರುವ ಶೋಭಾ ನಿವಾಸದೆದಿರು ಶಿವಸೇನೆ ಬೆಂಬಲಿಗರು ಜಮಾಗೊಳ್ಳುತ್ತಿದ್ದು, ಪ್ರತಿಭಟನೆ ತೀವ್ರಸ್ವರೂಪ ಪಡೆದುಕೊಳ್ಳುತ್ತಿದೆ. ಅವರ ಮನೆ ವಿಳಾಸವನ್ನು ಎಸ್ಎಂಎಸ್ ಮೂಲಕ ರವಾನಿಸಲಾಗುತ್ತಿದೆ. ಮಹಾರಾಷ್ಟ್ರ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಶೋಭಾ ಡೇ ಅವರು ಕ್ಷಮೆಯಾಚಿಸಬೇಕು ಎಂದು ಶಿವಸೇನೆ ಆಗ್ರಹಿಸುತ್ತಿದೆ.

ಮರಾಠಿ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶೋಭಾ ಡೇ (67) ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಬೇಕೆಂದು ಶಿವಸೇನೆ ನಾಯಕ ಪ್ರತಾಪ್ ಸರ್ನಾಯಕ್ ಅವರು ಒತ್ತಾಯಿಸಿದ್ದಾರೆ. ಡೇ ಮನೆಗೆ ಪೊಲೀಸರು ಭಾರೀ ಬಿಗಿಬಂದೋಬಸ್ತ್ ಏರ್ಪಡಿಸಿದ್ದಾರೆ.
ಒಂದು ಮೂಲದ ಪ್ರಕಾರ ಶೋಭಾ ಡೇಗೆ ಸ್ಪೀಕರ್ ಹರಿಬಾವು ಬಾಗಡೆ ಅವರು ನೋಟೀಸ್ ಜಾರಿ ಮಾಡಿದ್ದಾರೆ. ಡೇ ನೀಡಿರುವ ಹೇಳಿಕೆ ಮಹಾರಾಷ್ಟ್ರಕ್ಕೆ ವಿರುದ್ಧವಾದುದು ಎಂದು ನಿರ್ಣಯವಾದರೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಭಾನುವಾರ 'ಪೊಲಿಟಿಕಲಿ ಇನ್‌ಕರೆಕ್ಟ್' ಅಂಕಣ ಬರೆಯುತ್ತಿರುವ ಶೋಭಾ ಅವರಿಗೆ ಜೈಲುಶಿಕ್ಷೆಯಾಗುವ ಸಾಧ್ಯತೆಯೂ ಇದೆ.
Well done, Mumbai Police. Thank you. pic.twitter.com/Zt6WJL2Zqy
— Shobhaa De (@DeShobhaa) April 9, 2015 ಆದರೆ, ಈ ಯಾವ ಒತ್ತಡಕ್ಕೆ, ಬೆದರಿಕೆಗೆ, ಪ್ರತಿಭಟನೆಗೆ ಶೋಭಾ ಡೇ ಅವರು ಬಗ್ಗಿಲ್ಲ. ಮನೆಯಲ್ಲಿ ಕುಳಿತು, "ನನಗೆ ಭದ್ರತೆ ಒದಗಿಸಿದ್ದಕ್ಕಾಗಿ ಮುಂಬೈ ಪೊಲೀಸರಿಗೆ ಥ್ಯಾಂಕ್ಸ್. ಸಂಜೆ ಮತ್ತೊಂದು ಮೋರ್ಚಾ ಪ್ರತಿಭಟನೆಗೆ ಬರುತ್ತಂತೆ. ಯಾವ ಸ್ನಾಕ್ಸ್ ಕಳುಹಿಸಿಕೊಡಲಿದ್ದಾರೋ" ಎಂದು ಶೋಭಾ ಡೇ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿದ್ದಾರೆ.
Now a privilege motion demanding an apology from me? Come on! I am a proud Maharashtrian and love Marathi films. Always have. Always will !
— Shobhaa De (@DeShobhaa) April 8, 2015 ಈ ಮೊದಲು, "ಕ್ಷಮೆಗೆ ಆಗ್ರಹಿಸಿ ನನ್ನ ವಿರುದ್ಧ ಹಕ್ಕುಚ್ಯುತಿ ಮಂಡನೆಯೆ? ನಾನು ಮಹಾರಾಷ್ಟ್ರದವಳು, ನನಗೆ ಮರಾಠಿ ಸಿನೆಮಾಗಳೆಂದು ಬಲು ಇಷ್ಟ. ಹಿಂದೆಯೂ ಇಷ್ಟಪಡುತ್ತಿದ್ದೆ, ಮುಂದೆಯೂ ಇಷ್ಟಪಡುತ್ತೇನೆ" ಎಂದು ನಿರ್ಭಿಡೆಯಿಂದ ಟ್ವೀಟಾಸ್ತ್ರವನ್ನು ಶೋಭಾ ಡೇ ಪ್ರಯೋಗಿಸಿದ್ದರು.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications