ಅಧಿಕಾರದಲ್ಲೇ ಇದ್ದೀರಿ, ಆದರೂ ರಾಮನಿಗೇಕೆ ವನವಾಸ?: ಬಿಜೆಪಿಗೆ ಶಿವಸೇನಾ ಪ್ರಶ್ನೆ

ಮುಂಬೈ, ನವದೆಹಲಿ 24: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿಯೇ ಇದ್ದರೂ ರಾಮಮಂದಿರ ನಿರ್ಮಾಣ ಮಾತ್ರ ಏಕೆ ಸಾಧ್ಯವಾಗಿಲ್ಲ ಎಂದು ಶಿವಸೇನಾ ತನ್ನ ಮುಖವಾಗಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಪ್ರಶ್ನಿಸಿದೆ.

ಕೇಂದ್ರ ಸರ್ಕಾರ ಭಾರಿ ನಿದ್ದೆಯಲ್ಲಿದೆ. ರಾಮಾಯಣದ ಕುಂಭಕರ್ಣನಂತೆ. ಆದರೆ, ಕಥೆಯಲ್ಲಿ ಮುಖ್ಯವಾದ ಹೀರೋನಂತೆ. ಜತೆಗೆ ಖಳನಾಯಕ ಕೂಡ. ನಾವು ಕುಂಭಕರ್ಣನನ್ನು ಎಬ್ಬಿಸಲು ಬಯಸಿದ್ದೇವಷ್ಟೇ. ನಮಗೆ ಸಾಕಾಗಿದೆ ಎಂದು ಅವರಿಗೆ ತಿಳಿಸಲು ಬಯಸಿದ್ದೇವೆ.

Shiv sena bjp ayodhya ram temple saamna editorial

ನಿಮಗೆ ಚುನಾವಣೆ ಸಮೀಪಿಸಿದಾಗ ಮಾತ್ರ ರಾಮನ ನೆನಪಾಗುತ್ತದೆ. ನಿಮಗೆ ಆತ ರಾಜಕೀಯದ ಅದೃಷ್ಟಕ್ಕೆ ಆಶೀರ್ವಾದ ಮಾಡಿದವನು. ಆದರೂ ಆತ ವನವಾಸದಲ್ಲಿಯೇ ಇದ್ದಾನೆ. ಆದರೆ ರಾಮ ಮತ್ತು ಮಂದಿರವು ರಾಜಕೀಯದಲ್ಲಿ ಸೇರಿಕೊಳ್ಳುವುದನ್ನು ನಾವು ಇಷ್ಟಪಡುವುದಿಲ್ಲ. ನಮಗೆ ಮಂದಿರ ಬೇಕು ಎಂದು ಸಾಮ್ನಾ ಹೇಳಿದೆ.

1992ರಲ್ಲಿ ಬಾಬ್ರಿ ಮಸೀದಿಯನ್ನು ನಾವು (ಶಿವಸೇನಾ) ಒಡೆದಿದ್ದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆಗಿನ ಪ್ರಧಾನಿ ನರಸಿಂಹ ರಾವ್ ದೇಶವನ್ನು ವಂಚಿಸಲಾಗಿದೆ ಎಂದು ಹೇಳಿದ್ದರು. ಆದರೆ, ಕಳೆದ 24 ವರ್ಷಗಳಿಂದ ನಾವು ಸುರಕ್ಷಿತವಾಗಿ ಹೇಳಬಲ್ಲೆವು, ನಮ್ಮನ್ನು ವಂಚಿಸಲಾಗುತ್ತಲೇ ಇದೆ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

ನಮಗೆ ಮೊದಲು ರಾಮಮಂದಿರ ನಿರ್ಮಿಸಿಕೊಡಿ. ಮೊದಲು ಮಂದಿರ, ಬಳಿಕ ಸರ್ಕಾರ ಎಂದು ಶಿವಸೇನಾ ಆಗ್ರಹಿಸಿದೆ.

'ನಿಮ್ಮನ್ನು ಮತ್ತೊಮ್ಮೆ ಪ್ರಶ್ನಿಸುತ್ತಿದ್ದೇವೆ, ನೀವೇಕೆ ರಾಮಮಂದಿರ ನಿರ್ಮಾಣದ ದಿನಾಂಕವನ್ನು ಘೋಷಿಸಬಾರದು? 2019ರಲ್ಲಿ ರಾಮ ಮಂದಿರದ ವಿಚಾರ ನಿಮ್ಮ ಕೈತಪ್ಪಿ ಹೋದರೆ ನಿಮ್ಮ ಜೀವನಕ್ಕೆ ಬೇಕಾದ ರೊಟ್ಟಿಯಲ್ಲದೆ, ನಿಮ್ಮ ಅನೇಕರ ನಾಲಿಗೆಗಳು ಹೊರಳುವುದೂ ನಿಲ್ಲುತ್ತದೆ ಅಲ್ಲವೇ' ಎಂದು ಬಿಜೆಪಿಯನ್ನು ಅದು ವ್ಯಂಗ್ಯವಾಗಿ ಪ್ರಶ್ನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+