ರನ್‌ವೇ 34ದಂತೆ SG-945 ಫ್ಲೈಟ್‌ನಲ್ಲಿ ಘಟನೆ: ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

ಅಜಯ್ ದೇವಗನ್ ಅವರ ಚಲನಚಿತ್ರ 'ರನ್‌ವೇ 34' ತೀವ್ರ ಕೆಟ್ಟ ಹವಾಮಾನದಲ್ಲಿ ಸಿಲುಕಿದ ವಿಮಾನದ ಕಥೆಯನ್ನು ಹೇಳುತ್ತದೆ. ಒಬ್ಬ ಸಮರ್ಥ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಪ್ರಯತ್ನಿಸುವ ಕಥೆ ಇದರಲ್ಲಿದೆ. ಈ ಸಿನಿಮಾದಲ್ಲಿ ಪ್ರಯಾಣಿಕರು ತಮ್ಮ ಜೀವವನ್ನು ಬಿಗಿಹಿಡಿದು ವಿಮಾನ ಲ್ಯಾಂಡ್ ಆಗುವುದನ್ನು ಎದುರು ನೋಡುತ್ತಾರೆ. ಭಾನುವಾರ ಸಂಜೆ ಸ್ಪೈಸ್‌ಜೆಟ್‌ನ ಮುಂಬೈ-ದುರ್ಗಾಪುರ SG-945 ವಿಮಾನವು ಚಂಡಮಾರುತಕ್ಕೆ ಸಿಲುಕಿ ಇದೇ ರೀತಿಯ ಘಟನೆ ಸಂಭವಿಸಿದೆ. ಸ್ಪೈಸ್ ಜೆಟ್ ವಿಮಾನ ಪಶ್ಚಿಮ ಬಂಗಾಳದ ದುರ್ಗಾಪುರದ ಕಾಜಿ ನಜ್ರುಲ್ ಇಸ್ಲಾಂ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಅಪಾಯಕಾರಿ ಹವಮಾನದ ವಿರುದ್ಧ ಹೋರಾಡಿದೆ.

ವಿಮಾನ ಲ್ಯಾಂಡಿಂಗ್ ವೇಳೆ ಕಲ್ಬೈಸಾಖಿ ಎಂದು ಕರೆಯಲ್ಪಡುವ ಚಂಡಮಾರುತಕ್ಕೆ ವಿಮಾನ ಸಿಲುಕಿದೆ. ಚಂಡಮಾರುತ ಸಮೀಪಿಸುತ್ತಿರುವ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲರ್ ಅಥವಾ ವಿಮಾನವನ್ನು ಹಾರಿಸುವ ಪೈಲಟ್‌ಗೆ ತಿಳಿಸಲಾಗಿದೆಯೇ ಅಥವಾ ಪೈಲೆಟ್ ಈ ವಿಚಾರವನ್ನು ತಿಳಿದಿರಲಿಲ್ಲವೇ ಎಂಬುದು ಇನ್ನೂ ಯಾವುದೇ ದೃಢೀಕರಣವಿಲ್ಲ. ಆದರೆ ಈ ಬಗ್ಗೆ ಎಚ್ಚರಿಕೆಯಿಲ್ಲದ ಪ್ರಯಾಣಿಕರು ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ತಲೆಗೆ ಗಾಯವಾದ ಒಬ್ಬ ಪ್ರಯಾಣಿಕ ವಿಮಾನದಲ್ಲಿನ ಭಯಾನಕ ಸಂದರ್ಭವನ್ನು ಹಂಚಿಕೊಂಡಿದ್ದಾರೆ. 'ನಾವು ವಿಮಾನ ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸಿದೆವು ಮತ್ತು ನಾವು ಬಿಗಿಯಾಗಿ ಸೀಟ್ ಬೆಲ್ಟ್ ಹಾಕಿಕೊಂಡಿದ್ದೆವು. ಸೀಟ್ ಬೆಲ್ಟ್‌ಗಳ ಪ್ರಭಾವದಿಂದ ನಾವು ಸೀಟ್ ಬಿಟ್ಟು ಕದಡಲಿಲ್ಲ. ಆದರೆ ನಮ್ಮ ಸುತ್ತಮುತ್ತ ಇದ್ದ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದವು. ನಾವು ಬದುಕುವ ಭರವಸೆಯನ್ನೇ ಕಳೆದುಕೊಂಡಿದ್ದೆವು' ಎಂದು ಹೇಳಿಕೊಂಡಿದ್ದಾರೆ.

ಆದರೂ ಕೆಲವರು ತಮ್ಮ ಸೀಟಿನಿಂದ ಕೆಳಗೆ ಬಿದ್ದರು ಎಂದು ಮೊಹಮ್ಮದ್ ಇಕ್ಬಾಲ್ ಎಂದು ಪ್ರಯಾಣಿಕರು ವಿವರಿಸಿದರು. ವಿಮಾನವನ್ನು ಚಲಾಯಿಸಲು ಪೈಲಟ್‌ನ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಪ್ರಕೃತಿಯ ಶಕ್ತಿಯ ವಿರುದ್ಧ ಮಾನವನು ಮಾಡಬಹುದಾದಷ್ಟು ಪ್ರಯತ್ನವನ್ನು ಪೈಲೆಟ್ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.

Runway 34: Passengers on Spicejet Horror Flight Recount Narrow Escape

"ವಿಮಾನವು ಈ ಕಡೆ ವಾಲುತ್ತಿರುವಂತೆ ಭಾಸವಾಯಿತು. ಕೆಲವರು ತಮ್ಮ ಆಸನದಿಂದ ಕೆಳಗೆ ಬಿದ್ದರು. ಓವರ್‌ಹೆಡ್ ಬಿನ್‌ಗಳಿಂದ ವಸ್ತುಗಳು ಕೆಳಗೆ ಬಿದ್ದವು, ಜನರ ತಲೆಗೆ ಹೊಡೆದವು, "ಎಂದು ಅವರು ಹೇಳಿದರು. ಅಗ್ನಿಪರೀಕ್ಷೆಯ ನಂತರ ಆಸ್ಪತ್ರೆಗೆ ದಾಖಲಾದ ಇನ್ನೊಬ್ಬ ಪ್ರಯಾಣಿಕರು ವಿಮಾನ "ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತಿತ್ತು. ವಿಮಾನ ಪಲ್ಟಿಯಾಗುತ್ತದೆ ಎಂದು ನಾನು ಭಾವಿಸಿದೆ" ಎಂದು ಭಯಾನಕ ಸಂದರ್ಭವನ್ನು ವಿವರಿಸಿದ್ದಾರೆ.

Runway 34: Passengers on Spicejet Horror Flight Recount Narrow Escape

ಓವರ್‌ಹೆಡ್‌ ಬಿನ್‌ಗಳಿಂದ ವಸ್ತುಗಳು ಬಿದ್ದ ಪರಿಣಾಮ 11 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 11 ಮಂದಿಯಲ್ಲಿ ಒಬ್ಬ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿವೆ. ವಿಮಾನವು ಚಂಡಮಾರುತಕ್ಕೆ ಹೇಗೆ ಸಿಲುಕಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+