ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಿಗೆ 25 ಅಡಿ ಸುರಂಗ ಕೊರೆದು 6 ಕೋಟಿ ದೋಚಿದ ಖದೀಮರು

By Sachhidananda Acharya
|
Google Oneindia Kannada News

ಮುಂಬೈ, ನವೆಂಬರ್ 14: ಸಿನಿಮಾ ಮಾದರಿಯ ದರೋಡೆ ಕೃತ್ಯವೊಂದರಲ್ಲಿ ಬ್ಯಾಂಕಿನೊಳಕ್ಕೆ 25 ಅಡಿ ಉದ್ದದ ಸುರಂಗ ಕೊರೆದು 6 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.

ನವಿ ಮುಂಬೈನ ಜುನಿನಗರ್ ನಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಈ ಕಳ್ಳತನ ನಡೆದಿದೆ.

Robbers dig tunnel, decamp with Rs 6cr worth valuables

ಕಳ್ಳರು ಬ್ಯಾಂಕಿಗೆ ಹೊಂದಿಕೊಂಡ ಅಂಗಡಿಯನ್ನು ಕಳೆದ ಮೇನಿಂದ ಬಾಡಿಗೆಗೆ ಪಡೆದಿದ್ದರು. ಈ ಕಳ್ಳರು ಅಂಗಡಿಯಿಂದ ಲಾಕರ್ ಕೋಣೆಗೆ ಸುರಂಗ ಕೊರೆದು ಕಳ್ಳತನ ನಡೆಸಿದ್ದಾರೆ. 225 ಲಾಕರ್ ಗಳಲ್ಲಿ 30 ಲಾಕರ್ ಗಳಲ್ಲಿದ್ದ ಮೌಲ್ಯಯುತ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಇವುಗಳ ಮೌಲ್ಯ 6 ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಶನಿವಾರ ಮತ್ತು ಭಾನುವಾರದ ಮಧ್ಯದಲ್ಲಿ ಈ ದರೋಡೆ ನಡೆದಿದೆ. ಸೋಮವಾರ ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿಗಳು ಬಂದು ನೋಡುವಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

Robbers dig tunnel, decamp with Rs 6cr worth valuables

"ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಇಲ್ಲಿಯವರೆಗೆ ದರೋಡೆ ಮಾಡಿದ ವಸ್ತುಗಳ ಸರಿಯಾದ ಮೊತ್ತ ಗಣನೆಗೆ ಸಿಕ್ಕಿಲ್ಲ," ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ಮುಂಬೈನ ಸನ್ಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯ್ಲಲಿದೆ.

English summary
In a filmy-style heist, robbers dug a 25-feet tunnel to reach the lockers of a bank and decamped with valuables worth over Rs 6 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X