ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ಬೇಡ! ನಿತಿನ್ ಗಡ್ಕರಿಗೆ ಪ್ರಧಾನಿ ಪಟ್ಟ ಕೊಡಿ'

|
Google Oneindia Kannada News

Recommended Video

'ಮೋದಿ ಬೇಡ! ನಿತಿನ್ ಗಡ್ಕರಿಗೆ ಪ್ರಧಾನಿ ಪಟ್ಟ ಕೊಡಿ'..! | Oneindia Kannada

ಮುಂಬೈ, ಡಿಸೆಂಬರ್ 20: "2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕೆಂದರೆ ನರೇಂದ್ರ ಮೋದಿಯವರ ಬದಲಿಗೆ ನಿತಿನ್ ಗಡ್ಕರಿ ಅವರಿಗೆ ಪ್ರಧಾನಿ ಪಟ್ಟ ನೀಡಿ" ಎಂದು ಮಹಾರಾಷ್ಟ್ರದ ರೈತ ಮುಖಂಡರೊಬ್ಬರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಿಗೆ ಪತ್ರ ಬರೆದಿದ್ದಾರೆ.

ರೈತ ಮುಖಂಡ ಕಿಶೋರ್ ತಿವಾರಿ ಎಂಬುವವರು ಆರೆಸ್ಸೆಸ್ ಮುಖಂಡರಾದ ಮೋಹನ್ ಜೀ ಭಾಗವತ್ ಮತ್ತು ಭಯ್ಯಾಜಿ ಸುರೇಶ್ ಜೋಶಿ ಅವರಿಗೆ ಪತ್ರ ಬರೆದಿದ್ದು, 'ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳ ಫಲಿತಾಂಶ ದುರಹಂಕಾರದ ಪ್ರತಿಫಲ. ಅಪನಗದೀಕರಣ, ಜಿಎಸ್ಟಿ ಮತ್ತು ತೈಲ ಬೆಲೆ ಏರಿಕೆ ಮುಂತಾದ ನಿರ್ಧಾರಗಳೇ ಈ ಸೋಲಿಗೆ ಕಾರಣ' ಎಂದಿದ್ದಾರೆ.

ಬಿಜೆಪಿಗೆ ಮತ್ತೊಮ್ಮೆ ಭಾರೀ ಆಘಾತ ನೀಡಿದ ಕುಶ್ವಾಹ ನಡೆ ಬಿಜೆಪಿಗೆ ಮತ್ತೊಮ್ಮೆ ಭಾರೀ ಆಘಾತ ನೀಡಿದ ಕುಶ್ವಾಹ ನಡೆ

ಈಗಾಗಲೇ ಹಲವು ಪಕ್ಷಗಳು ಎನ್ ಡಿಎ ಮೈತ್ರಿಕೂಟದಿಂದ ಹೊರಹೋಗುತ್ತಿರುವ ಹೊತ್ತಲ್ಲಿ, ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿರುವ ಹಂತದಲ್ಲಿ ಈ ಬೆಳವಣಿಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪ್ರಚೋದನಾಕಾರಿ ಮನೋಭಾವ ಬೇಡ

ಪ್ರಚೋದನಾಕಾರಿ ಮನೋಭಾವ ಬೇಡ

"ಪ್ರಚೋದನಾಕಾರಿ ಮನೋಭಾವ ಮತ್ತು ನಿರಂಕುಶ ಸ್ವಭಾವ ಹೊಂದಿರುವವವರು ಸರ್ಕಾರದಲ್ಲಿರುವುದು ಸರ್ಕಾರಕ್ಕೆ, ದೇಶಕ್ಕೆ ಒಳಿತಲ್ಲ. ಇದನ್ನು ನಾವು ಇತಿಹಾಸದಲ್ಲೂ ನೋಡಿದ್ದೇವೆ. ಇದು 2019 ರ ಲೋಕಸಭೆ ಚುನಾವಣೆಯಲ್ಲೂ ಮರುಕಳಿಸಬಾರದದೆಂದರೆ ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿ" ಎಂದು ಪತ್ರದಲ್ಲಿ ಕಿಶೋರ್ ಬರೆದಿದ್ದಾರೆ.

ದುರಹಂಕಾರವೇ ಸೋಲಿಗೆ ಕಾರಣ

ದುರಹಂಕಾರವೇ ಸೋಲಿಗೆ ಕಾರಣ

ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರೈತ ವಿರೋಧಿ ಮತ್ತು ಜನವಿರೋಧಿ ನಿಲುವು ಪಕ್ಷದ ಸೋಲಿಗೆ ಕಾರಣವಾಗುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡಿದ್ದರೂ, ಮೋದಿ-ಶಾ ಅವರ ದುರಂಹಂಕಾರದಿಂದ ಅದು ಸೋಲುವಂತಾಯಿತು ಎಂದು ಅವರು ದೂರಿದ್ದಾರೆ.

ತುರ್ತು ಪರಿಸ್ಥಿತಿ ನಂತರ ಕಾಂಗ್ರೆಸ್ ಹೆಚ್ಚು ಕುತಂತ್ರಿಯಾಗಿದೆ: ಮೋದಿತುರ್ತು ಪರಿಸ್ಥಿತಿ ನಂತರ ಕಾಂಗ್ರೆಸ್ ಹೆಚ್ಚು ಕುತಂತ್ರಿಯಾಗಿದೆ: ಮೋದಿ

ಪ್ರಧಾನಿಯಾಗುವ ಸಾಮರ್ಥ್ಯ ಇರುವುದು ಯಾರಿಗೆ?

ಪ್ರಧಾನಿಯಾಗುವ ಸಾಮರ್ಥ್ಯ ಇರುವುದು ಯಾರಿಗೆ?

"61 ವರ್ಷ ವಯಸ್ಸಿನ ನಿತಿನ್ ಗಡ್ಕರಿ ಅವರಿಗೆ ಪ್ರಧಾನಿಯಾಗುವ ಸಾಮರ್ಥ್ಯವಿದೆ. ಅವರು ಪಕ್ಷಾಧ್ಯಕ್ಷರಾಗಿಯೂ ಕೆಲಸ ಮಾಡಿದವರು. ಬಿಜೆಪಿ ಮತ್ತು ಆರೆಸ್ಸೆಸ್ ನ ನಿಷ್ಠಾವಂತ ಕಾರ್ಯಕರ್ತರೂ ಆಗಿರುವ ಅವರು ಮಹಾರಾಷ್ಟಕ್ಕಷ್ಟೇ ಸೀಮಿತವಾಗದೆ, ಕೇಂದ್ರ ನಾಯಕರಾಗಿಯೂ ಬೆಳೆದಿದ್ದಾರೆ. ಗಡ್ಕರಿ ಅವರು ಯಾವ ವಿಷಯವನ್ನು ವಿವಾದಾತ್ಮಕವಾಗಿ ತೆಗೆದುಕೊಳ್ಳದೆ, ಸ್ನೇಹದಿಂದ ಪರಿಹರಿಸುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಕಿಶೋರ್, ಗಡ್ಕರಿ ಅವರ ಗುಣಗಾನ ಮಾಡಿದರು.

ಕುಶ್ವಾಹ ಹೇಳಿಕೆಗೆ ಪೂರಕವಾದ ಪತ್ರ

ಕುಶ್ವಾಹ ಹೇಳಿಕೆಗೆ ಪೂರಕವಾದ ಪತ್ರ

ಇತ್ತೀಚೆಗಷ್ಟೇ ಎನ್ ಡಿಎ ತೊರೆದ ಆರ್ ಎಲ್ ಎಸ್ ಪಿ ಮುಖಂಡ ಉಪೇಂದ್ರ ಕುಶ್ವಾಹ ಅವರ ಹೇಳಿಕೆಗೂ ಈ ಪತ್ರ ಪೂರಕವಾಗಿದೆ. ಬಿಜೆಪಿ ನಾಯಕರ ದುರಂಹಕಾರಕ್ಕೆ ಬೇಸತ್ತು ತಾವು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡೀ, ಎನ್ ಡಿಎ ಯಿಂದ ಹೊರಬಂದಿರುವುದಾಗಿ ಕುಶ್ವಾಹ ಹೇಳಿದ್ದರು. ಜೊತೆಗೆ ನರೇಂದ್ರ ಮೊದಿಯವರನ್ನು ಸೋಲಿಸಿ, ಪ್ರಧಾನಿಯಾಗುವ ಸಾಮರ್ಥ್ಯ ರಾಹುಲ್ ಗಾಂಧಿ ಅವರಿಗಿದೆ ಎಂದೂ ಹೇಳಿಕೆ ನೀದಿದ್ದರು.

ಲೋಕಸಭೆ ಚುನಾವಣೆಗೂ ಮುನ್ನ ಎನ್ ಡಿಎ ವಿರುದ್ಧ 'ಮಾಜಿ'ಗಳ ಯುದ್ಧ!ಲೋಕಸಭೆ ಚುನಾವಣೆಗೂ ಮುನ್ನ ಎನ್ ಡಿಎ ವಿರುದ್ಧ 'ಮಾಜಿ'ಗಳ ಯುದ್ಧ!

English summary
A prominent Maharashtra farmer leader writes letter to RSS leader to replace PM Narendra Modi with union minister Nitin Gadkari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X