ಓಮಿಕ್ರಾನ್‌; ಆತಂಕದ ಮಾಹಿತಿ ಬಿಚ್ಚಿಟ್ಟ ಮುಂಬೈ ಪಾಲಿಕೆ

ಮುಂಬೈ, ಡಿಸೆಂಬರ್ 31; ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಮುಂಬೈ ನಿವಾಸಿಗಳ ಶೇ 37ರಷ್ಟು ಕೋವಿಡ್ ಪ್ರಕರಣಗಳು ಓಮಿಕ್ರಾನ್ ಆಗಿದೆ ಎಂಬ ಆತಂಕದ ಮಾಹಿತಿಯನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಹೇಳಿದೆ. ಈ ಹಿನ್ನಲೆಯಲ್ಲಿ ನಗರದಲ್ಲಿ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ.

ಡಿಸೆಂಬರ್ 21 ಮತ್ತು 22ರಂದು 375 ಮುಂಬೈನ ನಿವಾಸಿಗಳ ಸ್ವ್ಯಾಬ್ ಮಾದರಿಯನ್ನು ಸಂಗ್ರಹ ಮಾಡಲಾಗಿತ್ತು. ಇವುಗಳಲ್ಲಿ 141 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಎಲ್ಲವೂ ಓಮಿಕ್ರಾನ್ ಪ್ರಕರಣವಾಗಿವೆ.

ಮುಂಬೈ ನಗರದ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 153. ಇದರಲ್ಲಿ 12 ಜನರು ಮಾತ್ರ ಅಂತರಾಷ್ಟ್ರೀಯ ಪ್ರಯಾಣಿಕರು. ಮಹಾನಗರ ಪಾಲಿಕೆಯ ಈ ಮಾಹಿತಿ ಓಮಿಕ್ರಾನ್ ಸೋಂಕು ಸಮುದಾಯಕ್ಕೆ ಹಬ್ಬಿದೆಯೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.

Omicron

ನಗರದ 141 ಓಮಿಕ್ರಾನ್ ಪ್ರಕರಣಗಳ ಪೈಕಿ 89 ಪುರುಷರು, 52 ಮಹಿಳೆಯರು. 93 ಜನರು ಎರಡು ಡೋಸ್ ಲಸಿಕೆ ಪಡೆದವರು. 3 ಜನರು ಮಾತ್ರ ಒಂದು ಡೋಸ್ ಲಸಿಕೆ ಪಡೆದಿದ್ದರು ಎಂದು ಪಾಲಿಕೆ ಹೇಳಿದೆ. ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳ ಹೆಚ್ಚಳ ಆತಂಕಕ್ಕೆ ಕಾರಣವಾಗಿದೆ.

ಹಲವಾರು ನಿರ್ಬಂಧಗಳು; ಮುಂಬೈ ನಗರದಲ್ಲಿ ಓಮಿಕ್ರಾನ್ ಮತ್ತು ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ನಗರದಲ್ಲಿ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಿ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಆದೇಶ ಹೊರಡಿಸಿದೆ.

* ಬೀಚ್, ಪಾರ್ಕ್, ತೆರೆದ ಮೈದಾನ ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳ ಭೇಟಿಗೆ ನಿಯಮ ಜಾರಿಗೊಳಿಸಲಾಗಿದೆ. ಸಂಜೆ 5 ಗಂಟೆಯಿಂದ ಬೆಳಗ್ಗೆ 5 ಗಂಟೆ ತನಕ ಜನರು ಭೇಟಿ ನೀಡುವಂತಿಲ್ಲ. ಜನವರಿ 15ರ ತನಕ ಆದೇಶ ಜಾರಿಯಲ್ಲಿರುತ್ತದೆ.

* ನಗರದಲ್ಲಿ ಹೆಚ್ಚು ಜನರು ಗುಂಪು ಸೇರುವುದನ್ನು ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದಲೇ ನಿರ್ಬಂಧಿಸಲಾಗಿದೆ. ಈ ಆದೇಶ ಸಹ ಜನವರಿ 15ರ ತನಕ ಜಾರಿಯಲ್ಲಿರಲಿದೆ.

ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯ ಕೋವಿಡ್ ಟಾಸ್ಕ್ ಪೋರ್ಸ್ ಸಭೆ ನಡೆಸಿದರು. ಸಭೆಯಲ್ಲಿ ಮುಂಬೈ ನಗರ ಮತ್ತು ರಾಜ್ಯದಲ್ಲಿ ಕೋವಿಡ್ ಹರಡುವಿಕೆ ತಡೆಯಲು ಸಭೆ ನಡೆಯಿತು. ಈ ಸಭೆಯ ಬಳಿಕ ಮುಂಬೈ ಮಹಾನಗರ ಪಾಲಿಕೆ ನಿರ್ಬಂಧಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.

ಭಾರತದಲ್ಲಿ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 960ಕ್ಕೆ ಏರಿಕೆಯಾಗಿದೆ. ಇವುಗಳಲ್ಲಿ 450 ಪ್ರಕರಣಗಳು ಮಹಾರಾಷ್ಟ್ರ ರಾಜ್ಯದಲ್ಲಿಯೇ ಪತ್ತೆಯಾಗಿದೆ. ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,671 ಪ್ರಕರಣಗಳು ದಾಖಲಾಗಿವೆ.

ಡಿಸೆಂಬರ್ 25ರಂದು ಮುಂಬೈ ನಗರದಲ್ಲಿ ಸೆಕ್ಷನ್ 144 (ಸಿಆರ್‌ಪಿಸಿ) ಜಾರಿಗೊಳಿಸಲಾಗಿತ್ತು. ಅದನ್ನು ಈಗ ಜನವರಿ 15ರ ತನಕ ವಿಸ್ತರಣೆ ಮಾಡಲಾಗಿದೆ. ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮದಲ್ಲಿ 50 ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಅಂತ್ಯ ಸಂಸ್ಕಾರದಲ್ಲಿ 20 ಜನರು ಮಾತ್ರ ಭಾಗವಹಿಸಬಹುದಾಗಿದೆ.

ಗುರುವಾರ ಮಹಾರಾಷ್ಟ್ರದಲ್ಲಿ 5,368 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಬುಧವಾರಕ್ಕೆ ಹೋಲಿಕೆ ಮಾಡಿದರೆ ಶೇ 37ರಷ್ಟು ಏರಿಕೆ ಕಂಡುಬಂದಿದೆ. ಮುಂಬೈ ಮಹಾನಗರ ಪಾಲಿಕೆ ವಾರ್ಡ್‌ ಮಟ್ಟದ ಆಸ್ಪತ್ರೆಗಳ ಮಾಹಿತಿ ಜನರಿಗೆ ಸಿಗುವಂತೆ ಮಾಡಿದೆ. 24 ವಾರ್ಡ್‌ಗಳಲ್ಲಿನ ಆಕ್ಸಿಜನ್ ಸಹಿತ ಬೆಡ್ ವ್ಯವಸ್ಥೆಯ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡುತ್ತಿದೆ.

ಮುಂಬೈನಲ್ಲಿ ಪತ್ತೆಯಾದ ಶೇ 90ರಷ್ಟು ಓಮಿಕ್ರಾನ್‌ ಪ್ರಕರಣಗಳಲ್ಲಿ ರೋಗ ಲಕ್ಷಣಗಳು ಇಲ್ಲ. ಆದರೆ ಈ ಪ್ರಕರಣಗಳು ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ ಎಂಬುದು ಆತಂಕ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+