ಬುಲ್ಲಿ ಬಾಯಿ ವಿವಾದ: ಬೆಂಗಳೂರಿನಲ್ಲಿ ಶಂಕಿತ ಆರೋಪಿ ಬಂಧಿಸಿದ ಮುಂಬೈ ಪೊಲೀಸ್
ಮುಂಬೈ, ಜನವರಿ 3: ವಿವಾದಿತ ಬುಲ್ಲಿ ಬಾಯಿ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರನ್ನು ಮುಂಬೈ ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿ ಅನ್ನು ಮುಂಬೈಗೆ ಕರೆದುಕೊಂಡು ಹೋಗಲಾಗುತ್ತಿದ್ದು, ವಿವಾದಿತ ಆಪ್ ಫಾಲೋವರ್ಸ್ ಪೈಕಿ ಈತನೂ ಒಬ್ಬನಾಗಿದ್ದ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಈತನನ್ನು ಬಂಧಿಸುವ ಸಾಧ್ಯತೆಯಿದೆ.
ನೂರಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ಖಾತೆಗಳಿಂದ ಸಂಗ್ರಹಿಸಿ ಬುಲ್ಲಿ ಬಾಯಿ ಎಂಬ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ ಸಂದರ್ಭದಲ್ಲಿ ಈ ವಿವಾದ ಸ್ಫೋಟಗೊಂಡಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಜನರಿಗೆ ಉತ್ತೇಜಿಸುತ್ತದೆ ಎಂಬುದು ವಿವಾದಕ್ಕೆ ಮುಖ್ಯ ಕಾರಣವಾಗಿತ್ತು.
ಏತನ್ಮಧ್ಯೆ, 'ಬುಲ್ಲಿ ಬಾಯಿ' ವಿವಾದದ ಕುರಿತು ಇಂಡಿಯಾ ಟುಡೆ ಕೇಳಿದ ಪ್ರಶ್ನೆಗಳಿಗೆ GitHub ಪ್ರತಿಕ್ರಿಯಿಸಿದೆ. ಕಿರುಕುಳ, ತಾರತಮ್ಯ ಮತ್ತು ಹಿಂಸೆಯನ್ನು ಪ್ರಚೋದಿಸುವ ವಿಷಯ ಮತ್ತು ನಡವಳಿಕೆಯ ವಿರುದ್ಧ ನೀತಿಗಳನ್ನು ಹೊಂದಿದೆ. ಫ್ಲ್ಯಾಗ್ ಮಾಡಿದ ನಂತರ ಪ್ರಶ್ನೆಯಲ್ಲಿರುವ ಬಳಕೆದಾರರ ಖಾತೆಯನ್ನು ರದ್ದುಗೊಳಿಸಲಾಗಿದೆ ಎಂದು ಸಾಫ್ಟ್‌ವೇರ್ ಡೆವಲಪರ್ ಹೇಳಿದ್ದಾರೆ. GitHub ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿಯಮಗಳನ್ನು ಪಾಲಿಸುವ ಮತ್ತು ಸಹಕರಿಸುವ ಬಗ್ಗೆ ಭರವಸೆಯನ್ನು ನೀಡಿದೆ.

ಬುಲ್ಲಿ ಬಾಯಿ ಅಪ್ಲಿಕೇಶನ್ ವಿವಾದ ಎಂದರೇನು?
'ಬುಲ್ಲಿ ಬಾಯಿ' ಹೆಸರಿನ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅವರ ಒಪ್ಪಿಗೆಯಿಲ್ಲದೆ ಅಪ್‌ಲೋಡ್ ಮಾಡಿ ಹರಾಜು ಮಾಡುವುದು. ಕೆಲ ತಿಂಗಳ ಹಿಂದೆ ಕೆಲವು ಅಪರಿಚಿತ ವ್ಯಕ್ತಿಗಳು ಇದೇ ರೀತಿಯ 'ಸುಲ್ಲಿ ಡೀಲ್ಸ್' ಎಂಬ ಅಪ್ಲಿಕೇಶನ್ ರಚಿಸಿದ್ದರು. ಅವರ ಸಾಮಾಜಿಕ ಮಾಧ್ಯಮ ಖಾತೆಗಳಿಂದ ನೂರಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ತೆಗೆದುಕೊಂಡು ಅಪ್‌ಲೋಡ್ ಮಾಡಿ ಹರಾಜು ಮಾಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆ್ಯಪ್ ಅನ್ನು ತೆಗೆದುಹಾಕಲಾಯಿತು.












Click it and Unblock the Notifications