ದಿ.ಬಾಳ್ ಠಾಕ್ರೆ ಜನ್ಮದಿನಕ್ಕೆ ಶುಭಕೋರಿದ ಪ್ರಧಾನಿ ಮೋದಿ

ಮುಂಬೈ, ಜನವರಿ 23: ಶಿವಸೇನಾ ನಾಯಕ ದಿ.ಬಾಳ್ ಠಾಕ್ರೆ ಅವರ 91 ನೇ ಜನ್ಮದಿನಕ್ಕೆ ಪ್ರಧಾನಿ ನರೇಮದ್ರ ಮೋದಿ ಟ್ವಿಟ್ಟರ್ ನಲ್ಲಿ ಶುಭಹಾರೈಸಿದ್ದಾರೆ.

"ಬಾಳಾಸಾಹೇಬ್ ಠಾಕ್ರೆ ಅವರನ್ನು ಅವರ ಜನ್ಮದಿನದಂದು ಸ್ಮರಿಸುತ್ತೇನೆ. ಜನರ ಆಶೋತ್ತರ ಈಡೇರಿಸುವುದಕ್ಕಾಗಿ ನಿರ್ಭಯವಾಗಿ, ದಣಿವರಿಯದೆ ಹೋರಾಡಿದ ನಾಯಕ ಅವರು" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದ ಪ್ರಭಾವಿ ನಾಯಕರಲ್ಲೊಬ್ಬರಾದ ಠಾಕ್ರೆ(23 ಜನವರಿ 1966 - 17 ನವೆಂಬರ್ 2012) ಕಾರ್ಟೂನಿಸ್ಟ್ ಆಗಿ ತಮ್ಮ ವೃತ್ತಿ ಆರಂಭಿಸಿದವರು. ದಿ ಫ್ರಿ ಪ್ರೆಸ್ ಜರ್ನಲ್ ನಲ್ಲಿ ಕೆಲವು ವರ್ಷ ಕೆಲಸ ಮಾಡಿದ ನಂತರ ಮಾರ್ಮಿಕ್ ಎಂಬ ರಾಜಕೀಯ ಸಾಪ್ತಾಹಿಕವನ್ನು ಅವರೇ ಹೊರತಂದಿದ್ದರು.

PM Modi wishes Bal Thackeray on 91st birth anniversary

ಅವರ ರಾಜಕೀಯ ಸಿದ್ಧಾಂತಗಳು ಅವರ ತಂದೆ ಕೇಶವ ಸೀತಾರಾಮ್ ಠಾಕ್ರೆ ಅವರ ಪ್ರಭಾವದಿಂದ ಹುಟ್ಟಿದ್ದವು. ಕಟ್ಟರ್ ಹಿಂದುವಾದಿಯಾಗಿಯೂ ಅವರು ಹೆಸರಾದವರು. ಮುಂಬೈಯಲ್ಲಿ ಮರಾಠಿಯೇತರ ಸಮುದಾಯ ಹೆಚ್ಚುತ್ತಿರುವ ವಿರುದ್ಧ ತಮ್ಮ ಪತ್ರಿಕೆಯ ಮೂಲಕ ಆಕ್ರೋಶ ಹೊರಹಾಕುತ್ತಿದ್ದ ಠಾಕ್ರೆ, ನಂತರ 1966 ಶಿವಸೇನೆ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಶಿವಸೇನಾ ಪಕ್ಷವು ಇಂದಿಗೂ ಮುಂಬೈಯಲ್ಲಿರುವ ಮರಾಠಿಗರ ಒಳಿತಿಗಾಗಿ ಹೋರಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+