ಮುಂಬೈಯಲ್ಲಿ ಕುಂಭದ್ರೋಣ ಮಳೆ, ಮಹಾನಗರಕ್ಕೆ ಕಟ್ಟೆಚ್ಚರ
ಮುಂಬೈ, ಆಗಸ್ಟ್ 29: ಮಹಾ ಮಳೆಗೆ ಮುಂಬೈನಲ್ಲಿ ಭಯ ಪಡುವಂತಾಗಿದೆ. "ಅಗತ್ಯ ಇಲ್ಲ ಅನ್ನೋದಾದರೆ ಮನೆಯಿಂದ ಆಚೆ ಕಾಲಿಡಲೇ ಬೇಡಿ" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮನವಿ ಮಾಡಿದ್ದಾರೆ.
ಸಂಚಾರ ವ್ಯವಸ್ಥೆ ಬಗ್ಗೆ ನೀಡುವ ಸಲಹೆ-ಸೂಚನೆಗಳನ್ನು ಪಾಲಿಸಿ. ಮುಂಬೈ ಪೊಲೀಸರಿಗೆ ಟ್ವೀಟ್ ಮಾಡಿ ಅಥವಾ ಕರೆ ಮಾಡಿ. ಅವರು ನಿಮ್ಮ ನೆರವಿಗೆ ಧಾವಿಸುತ್ತಾರೆ ಎಂದು ಫಡಣವೀಸ್ ತಿಳಿಸಿದ್ದಾರೆ.

ಇನ್ನು ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸಂಪೂರ್ಣ ಸ್ಥಗಿತವಾಗಿದೆ. ನಿರಂತರ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಮುಂಬೈನಲ್ಲಿ ಎಲ್ಲಿ ನೋಡಿದರೂ ನೀರೇ ನೀರು ಕಾಣುವಂತಾಗಿದೆ. ಮುಂದಿನ ಮೂರು ದಿನಗಳಲ್ಲಿ ಮಹಾರಾಷ್ತ್ರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ವಿಪತ್ತು ನಿರ್ವಹಣಾ ಇಲಾಖೆ ಜತೆಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಫಡಣವೀಸ್ ಶೀಘ್ರದಲ್ಲೇ ನೆರವಿಗೆ ಧಾವಿಸುವಂತೆ ಹೇಳಿದ್ದೇನೆ ಎಂಬ ಮಾಹಿತಿ ನೀಡಿದ್ದಾರೆ.












Click it and Unblock the Notifications