Breaking: ನಗ್ನ ಚಿತ್ರ ಪ್ರಕರಣ; ಹೇಳಿಕೆ ದಾಖಲಿಸಿದ ನಟ ರಣವೀರ್ ಸಿಂಗ್

ಮುಂಬೈ, ಆಗಸ್ಟ್ 29: ಸಾಮಾಜಿಕ ಜಾಲತಾಣಗಳಲ್ಲಿ ತನ್ನ ನಗ್ನ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದ ಪ್ರಕರಣದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಹೇಳಿಕೆಯನ್ನು ಮುಂಬೈ ಪೊಲೀಸರು ಸೋಮವಾರ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ಪದಾಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕಳೆದ ತಿಂಗಳು ಮುಂಬೈನ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ರಣವೀರ್ ಸಿಂಗ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.

ನಂತರ ಪೊಲೀಸರು ಪ್ರಕರಣದ ತನಿಖೆಗೆ ಸಹಕರಿಸುವಂತೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ನೋಟಿಸ್ ನೀಡಿದ್ದರು.

Nude Photoshoot Case; Mumbai Police recorded statement actor Ranveer Singh

ಸೋಮವಾರ ಬೆಳಗ್ಗೆ ನಟ ರಣವೀರ್ ಸಿಂಗ್, ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಹೇಳಿಕೆ ನೀಡಿ ರಣವೀರ್ ಸಿಂಗ್ ಪೊಲೀಸ್ ಠಾಣೆಯಿಂದ ವಾಪಸ್ ಹೋಗಿದ್ದಾರೆ. ಅಗತ್ಯವಿದ್ದರೆ ನಟನನ್ನು ಮತ್ತೆ ಠಾಣೆಗೆ ಕರೆಯಲಾಗುವುದು ಎಂದು ಅಧಿಕಾರಿ ಹೇಳಿದರು.

ನಟ ರಣವೀರ್ ಸಿಂಗ್ ಸಾಮಾನ್ಯವಾಗಿ ಮಹಿಳೆಯರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಅವರ ನಗ್ನ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಅವರ ಘನತೆಗ ಅವಮಾನ ಮಾಡಿದ್ದಾರೆ ಎಂದು ಎನ್‌ಜಿಒ ಆರೋಪಿಸಿದೆ.

Nude Photoshoot Case; Mumbai Police recorded statement actor Ranveer Singh

ಎನ್‌ಜಿಒ ದೂರಿನ ಆಧಾರದ ಮೇಲೆ, ಪೊಲೀಸರು ರಣವೀರ್ ಸಿಂಗ್ ವಿರುದ್ಧ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 292 (ಅಶ್ಲೀಲ ಪುಸ್ತಕಗಳ ಮಾರಾಟ, ಇತ್ಯಾದಿ), 293, 509 ಅಡಿಯಲ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಈ ಹಿಂದೆ ಹೇಳಿದ್ದಾರೆ.

ರಣವೀರ್ ಸಿಂಗ್ ಅವರ ಫೋಟೋಶೂಟ್‌ನ ಬೆತ್ತಲೆ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಕೆಲವರು ಅವರ ದಿಟ್ಟ ಕಾರ್ಯಕ್ಕಾಗಿ ಅವರನ್ನು ಶ್ಲಾಘಿಸಿದರು, ಆದರೆ ಕೆಲವರು ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ ಆಕ್ಷೇಪಿಸಿದ್ದರು.

ಇದರ ಜೊತೆಗೆ ರಣವೀರ್ ಅವರ ಚಿತ್ರರಂಗದ ಅನೇಕ ಸಹೋದ್ಯೋಗಿಗಳಾದ ಆಲಿಯಾ ಭಟ್, ಅರ್ಜುನ್ ಕಪೂರ್, ಪರಿಣಿತಿ ಚೋಪ್ರಾ, ವಿದ್ಯಾ ಬಾಲನ್ ಅವರ ಬೆಂಬಲಕ್ಕೆ ನಿಂತರು. ಮತ್ತೊಂದೆಡೆ, ಈ ವಿವಾದದ ಬಗ್ಗೆ ನಟ ರಣವೀರ್ ಸಿಂಗ್ ಎಲ್ಲೂ ಹೇಳಿಕೆ ನೀಡಿಲ್ಲ.

ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ರಣವೀರ್ ಸಿಂಗ್, "ಬಾಜಿರಾವ್ ಮಸ್ತಾನಿ", "ಪದ್ಮಾವತ್" ಮತ್ತು "ಗಲ್ಲಿ ಬಾಯ್" ನಂತಹ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+