• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇನ್ನು ಮುಂದೆ ಮಾಸ್ಕ್ ಹಾಕದಿದ್ದರೆ 1000 ರೂ. ದಂಡ ಕಟ್ಟಬೇಕು

|
Google Oneindia Kannada News

ಮುಬೈ, ಜೂನ್ 30 : ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮುಂಬೈ ನಗರದಲ್ಲಿ ಸೋಂಕು ಹರಡುವಿಕೆ ತಡೆಯಲು ಬಿಎಂಸಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ನಗರದಲ್ಲಿನ ಸೋಂಕಿತರ ಸಂಖ್ಯೆ 76,765ಕ್ಕೆ ಏರಿಕೆಯಾಗಿದೆ.

   ಮುಂಬೈ, ದೆಹಲಿ ತೋರಿಸಿ 'ಚಂದಮಾಮ' ಕಥೆ ಹೇಳುತ್ತಿರುವ ಯಡಿಯೂರಪ್ಪ | Yediyurappa | Karnataka | Oneindia Kannada

   ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾದಾಗಲೇ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ, ಹಲವು ಜನರು ಮಾಸ್ಕ ಇಲ್ಲದೇ ಸಂಚಾರ ನಡೆಸುತ್ತಿದ್ದಾರೆ. ಅವರಿಗೆ ಹೆಚ್ಚಿನ ದಂಡವನ್ನು ವಿಧಿಸಲು ತೀರ್ಮಾನಿಸಲಾಗಿದೆ.

   ಜುಲೈ 31ರ ವರೆಗೂ ಲಾಕ್‌ಡೌನ್‌ ಘೋಷಿಸಿದ ಮಹಾರಾಷ್ಟ್ರಜುಲೈ 31ರ ವರೆಗೂ ಲಾಕ್‌ಡೌನ್‌ ಘೋಷಿಸಿದ ಮಹಾರಾಷ್ಟ್ರ

   ಬಿಎಂಸಿ ಸೋಮವಾರ ಈ ಕುರಿತು ಆದೇಶ ಹೊರಡಿಸಿದೆ. ಮಾಸ್ಕ್ ಧರಿಸದವರಿಗೆ ಹಾಕುತ್ತಿದ್ದ ದಂಡದ ಮೊತ್ತವನ್ನು 1000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಪೊಲೀಸರಿಗೆ, ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ದಂಡ ಹಾಕಲು ಅನುಮತಿ ನೀಡಲಾಗಿದೆ.

   ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದರೂ ಹಲವಾರು ಜನರು ಹಾಗೆಯೇ ಸಂಚಾರ ನಡೆಸುತ್ತಿದ್ದಾರೆ. ಇದರಿಂದಾಗಿ ಅವರು ಮಾತ್ರವಲ್ಲ ಬೇರೆ ಜನರ ಆರೋಗ್ಯದ ಮೇಲೆಯೂ ಪರಿಣಾಮ ಉಂಟಾಗುತ್ತಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿದೆ.

   ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕದಲ್ಲಿ ಎಷ್ಟು ಕೇಸ್ ಪತ್ತೆ?ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕದಲ್ಲಿ ಎಷ್ಟು ಕೇಸ್ ಪತ್ತೆ?

   ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸಹಾಯಕ ಆಯುಕ್ತರು ವಿವಿಧ ವಾರ್ಡ್‌ಗಳಲ್ಲಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಮುಂಬೈ ಪೊಲೀಸರಿಗೂ ದಂಡ ಹಾಕುವ ಅಧಿಕಾರವನ್ನು ನೀಡಲಾಗಿದೆ.

   English summary
   In a order Brihanmumbai Municipal Corporation (BMC) said that people who not wearing mask will be fined 1,000. Police and ward officials to impose the fine on spot. Wearing face masks was made compulsory in April.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X