ಚೀನಾ ಜೊತೆಗಿನ ಒಪ್ಪಂದ ರದ್ದುಗೊಳಿಸಿಲ್ಲ; ಮಹಾರಾಷ್ಟ್ರದ ಸ್ಪಷ್ಟನೆ

ಮುಂಬೈ, ಜೂನ್ 22 : ಚೀನಾದ ಮೂರು ಕಂಪನಿಗಳ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ ಮೂರು ಕಂಪನಿಗಳ ಜೊತೆ ಮಾಡಿಕೊಂಡಿದ್ದ ಒಪ್ಪಂದದ ಮೊತ್ತ 5020 ಕೋಟಿ ರೂ. ಆಗಿದೆ.

ಜೂನ್ 15ರಂದು ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆ ಬಳಿಕ ಚೀನಾದ ಮೇಲೆ ದೇಶದಲ್ಲಿ ಆಕ್ರೋಶ ಹೆಚ್ಚಾಗಿದೆ. ಚೀನಾ ಉತ್ಪನ್ನಗಳನ್ನು ನಿಷೇಧಿಸಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.

ಮಹಾರಾಷ್ಟ್ರ ಸರ್ಕಾರ ಚೀನಾ ಜೊತೆ ಮಾಡಿಕೊಂಡಿದ್ದ ಮೂರು ಒಪ್ಪಂದಗಳನ್ನು ರದ್ದುಗೊಳಿಸಿದೆ ಎಂಬ ಸುದ್ದು ಸೋಮವಾರ ಬೆಳಗ್ಗೆಯಿಂದ ಹಬ್ಬಿತ್ತು. ಈ ಸುದ್ದಿಗಳಿಗೆ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ಸ್ಪಷ್ಟನೆಯನ್ನು ನೀಡಿದ್ದಾರೆ.

MoUs With Chinese Companies Not Cancelled Maharashtra

ಚೀನಾದ ಹೆಂಗ್ಲಿ ಇಂಜಿನಿಯರಿಂಗ್, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೇರಿದಂತೆ ಮೂರು ಕಂಪನಿಗಳು ಪುಣೆಯಲ್ಲಿ ಹೂಡಿಕೆ ಮಾಡಲು ಮಹಾರಾಷ್ಟ್ರ ಸರ್ಕಾರದ ಜೊತೆ ಕೆಲವು ದಿನಗಳ ಹಿಂದೆ ಒಪ್ಪಂದ ಮಾಡಿಕೊಂಡಿದ್ದವು. ಈ ಒಪ್ಪಂದದ ಅನ್ವಯ 5020 ಕೋಟಿ ಹೂಡಿಕೆಯಾಗಬೇಕಿದೆ.

"ಒಪ್ಪಂದಗಳಿಗೆ ಈಗಾಗಲೇ ಸಹಿ ಮಾಡಲಾಗಿದ್ದು, ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗುತ್ತದೆ. ಚೀನಾ ಜೊತೆಗಿನ ಒಪ್ಫಂದವನ್ನು ರದ್ದುಗೊಳಿಸಿಲ್ಲ" ಎಂದು ಸುಭಾಷ್ ದೇಸಾಯಿ ಅವರ ಕಚೇರಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಚೀನಾ ಜೊತೆಗೆ ವಾಣಿಜ್ಯ ಒಪ್ಪಂದ ಮುಂದುವರೆಸುವ ಕುರಿತು ಕೇಂದ್ರ ಸರ್ಕಾರ ನೀಡುವ ಸ್ಪಷ್ಟನೆಗಾಗಿ ಕಾಯಲಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಬಂಧ ಹೇಗೆ ಮುಂದುವರೆಯಲಿದೆ ಎಂಬುದರ ಮೇಲೆ ಒಪ್ಪಂದ ತೀರ್ಮಾನವೂ ನಿಂತಿದೆ" ಎಂದು ಸುಭಾಷ್ ದೇಸಾಯಿ ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡ ಒಪ್ಪಂದದ ಅನ್ವಯ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿ ರಾಜ್ಯದಲ್ಲಿ ಘಟಕ ನಿರ್ಮಾಣ ಮಾಡಲಿದ್ದು, ಇದರ ಹೂಡಿಕೆ ಮೌಲ್ಯ ಸುಮಾರು 3770 ಕೋಟಿ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+