ಸೈನಿಕರ ಜೊತೆ ಮಗನ ಮದುವೆ ಸಂಭ್ರಮ ಆಚರಿಸಿದ ಅಂಬಾನಿ ದಂಪತಿ

ಮುಂಬೈ, ಮಾರ್ಚ್‌ 13: ರಿಲಯನ್ಸ್‌ ಸಂಸ್ಥೆಯ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರುಗಳು ತಮ್ಮ ಪುತ್ರನ ವಿವಾಹ ಸಂಭ್ರಮವನ್ನು ದೇಶ ಕಾಯುವ ಸೈನಿಕರ ಜೊತೆ ಆಚರಿಸಿದ್ದಾರೆ.

ಮಗ ಆಕಾಶ್‌ ಅಂಬಾನಿ ಹಾಗೂ ಶ್ಲೋಕಾ ಅವರ ಮದುವೆ ಸಂಭ್ರಮವನ್ನು ಸೈನಿಕರು, ಮುಂಬೈ ಪೊಲೀಸ್, ರೈಲ್ವೆ ಪೊಲೀಸ್, ರಿಸರ್ವ್‌ ಪೊಲೀಸ್ ಹೀಗೆ ದೇಶ ಕಾಯುವ ಯೋಧರುಗಳ ಜೊತೆ ಹಂಚಿಕೊಂಡರು. ಅವರಿಗೆಂದೆ ಅನಂತ ಪ್ರೇಮ ಎಂಬ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Nita and Mukesh Ambani celebrate son’s wedding with protectors of the nation

ದೇಶ ಮತ್ತು ನಮ್ಮ ನಗರವನ್ನು ಕಾಪಾಡುತ್ತಿರುವ ನಾಯಕರುಗಳೊಂದಿಗೆ ನಮ್ಮ ಮಗನ ಮದುವೆಯ ಸಂಭ್ರಮವನ್ನು ಹಂಚಿಕೊಳ್ಳುತ್ತಿರುವುದು ಗೌರವದಾಯಕ, ನೀವೆಲ್ಲಾ ನಮ್ಮನ್ನು ಪ್ರತಿದಿನ ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ಈ ಸಂದರ್ಭದಲ್ಲಿ ನೀತಾ ಅಂಬಾನಿ ಅವರು ಹೇಳಿದರು.

Nita and Mukesh Ambani celebrate son’s wedding with protectors of the nation

ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಅವರುಗಳು ತಮ್ಮ ಮಗನ ಮದುವೆ ಸಂಭ್ರಮವನ್ನು ಕೇವಲ ತಮ್ಮ ಗೆಳೆಯರು, ಬಂಧುಗಳೊಡನೆ ಮಾತ್ರವೇ ಆಚರಿಸಿಕೊಳ್ಳದೆ, ಸೈನಿಕರು, ಪೊಲೀಸರು, ಅನಾಥಾಶ್ರಮದ ಮಕ್ಕಳು, ವೃದ್ಧಾಶ್ರಮದ ಸದಸ್ಯರು, ಸ್ವಚ್ಛತಾ ಕಾರ್ಮಿಕರು ಹೀಗೆ ಎಲ್ಲರ ಜೊತೆಗೂ ಆಚರಿಸಿಕೊಂಡಿದ್ದಾರೆ.

Nita and Mukesh Ambani celebrate son’s wedding with protectors of the nation

ಸಂಗೀತ ರಸಸಂಜೆ ಕಾರ್ಯಕ್ರಮವು ಧೀರೂಬಾಯ್ ಅಂಬಾನಿ ಸ್ಕ್ವೇರ್‌ನಲ್ಲಿ ನಡೆಯಿತು. ಹಲವು ಬಾಲಿವುಡ್ ತಾರೆಯರು ಕುಣಿದು, ಹಾಡಿ ನೆರೆದಿದ್ದವರನ್ನು ರಂಜಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+