• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಹೈಡ್ರೋಜನ್ ಬಾಂಬ್ ಎಸೆಯುತ್ತೇನೆ'': ದಾವೂದ್ ಇಬ್ರಾಹಿಂ ಜೊತೆಗಿನ ಸಂಪರ್ಕಕ್ಕೆ ನವಾಬ್ ಪ್ರತಿಕ್ರಿಯೆ

|
Google Oneindia Kannada News

ಮುಂಬೈ ನವೆಂಬರ್ 9: ಸಚಿವ ನವಾಬ್ ಮಲಿಕ್ ಮತ್ತು ಅವರ ಕುಟುಂಬ ಸದಸ್ಯರು ಭೂಗತ ಜಗತ್ತಿನ ವ್ಯಕ್ತಿಗಳೊಂದಿಗೆ ಭೂ ವ್ಯವಹಾರ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಆರೋಪಿಸಿದ ಒಂದು ಗಂಟೆಯೊಳಗೆ ನವಾಬ್ ಮಲಿಕ್ ವಿಪಕ್ಷ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ "ನಾಳೆ ಹೈಡ್ರೋಜನ್ ಬಾಂಬ್ ಎಸೆಯುತ್ತೇನೆ" ಎಂದು ಹೇಳಿದ್ದಾರೆ. ನವೆಂಬರ್ 10 ಬೆಳಗ್ಗೆ 10 ಗಂಟೆಗೆ ಫಡ್ನವೀಸ್ ಭೂಗತ ಜಗತ್ತಿನ ಸಂಪರ್ಕವನ್ನು ಬಹಿರಂಗಪಡಿಸುವುದಾಗಿ ನವಾಬ್ ಮಲಿಕ್ ಹೇಳಿದ್ದಾರೆ.

ಈ ಹಿಂದೆ ನವಾಬ್‌ ಮಲಿಕ್‌ಗೆ ಭೂಗತ ಲೋಕದ ಸಂಪರ್ಕವಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಆರೋಪ ಮಾಡಿದ್ದರು. ಈ ಆರೋಪವನ್ನು ಮತ್ತೆ ಮಾಡಿದ ದೇವೇಂದ್ರ ಫಡ್ನವೀಸ್‌ ಪತ್ರಿಕಾಗೋಷ್ಠಿಯಲ್ಲಿ "ನವಾಬ್‌ ಮಲಿಕ್‌ಗೆ ಭೂಗತ ಲೋಕದ ಸಂಪರ್ಕ ಇರುವ ಪುರಾವೆಗಳು" ಎಂದು ಹೇಳಿ ದಾಖಲೆಗಳನ್ನು ಪ್ರಸ್ತುತ ಪಡಿಸಿದ್ದಾರೆ.

"ದೀಪಾವಳಿಯ ಬಳಿಕ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸುತ್ತೇನೆ ಎಂದು ನಾನು ಈ ಹಿಂದೆಯೇ ತಿಳಿಸಿದ್ದೆ. ದಾಖಲೆಗಳು ಲಭ್ಯವಾಗಲು ಸ್ವಲ್ಪ ಸಮಯ ಬೇಕಾಯಿತು. ನಾನು ಸಲೀಂ ಜಾವೇದ್‌ರ ಸ್ಕ್ರಿಪ್ಟ್‌ ಅನ್ನು ನಿರೂಪಣೆ ಮಾಡುತ್ತಿಲ್ಲ ಹಾಗೂ ಇದು ಮಧ್ಯಂತರದ ಚಿತ್ರಣವೇನಲ್ಲ," ಎಂದು ಹೇಳಿದ್ದಾರೆ. 1993ರ ಮುಂಬೈ ಸ್ಫೋಟದ ಆರೋಪಿಯಾದ ಭೂಗತ ಜಗತ್ತಿನ ವ್ಯಕ್ತಿಯೊಂದಿಗೆ ನವಾಬ್ ಮಲಿಕ್ ಆಸ್ತಿ ಒಪ್ಪಂದ ಮಾಡಿಕೊಂಡಿದ್ದರು ಎಂಬುದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಆರೋಪವಾಗಿದೆ.

"ಕುರ್ಲಾದಲ್ಲಿ ಎಲ್‌ಬಿಎಸ್‌ ರಸ್ತೆಯಲ್ಲಿ ಇರುವ 2.80 ಎಕರೆ ಜಾಗವನ್ನು ಗೋವಾಲಾ ಕಾಂಪೌಂಡ್ ಎಂದು ಕರೆಯಲಾಗುತ್ತದೆ. ಈ ಪ್ಲಾಟ್ ಸಾಲಿಡಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ನೋಂದಣಿಯಾಗಿದೆ. ಈ ಕಂಪನಿಯು ನವಾಬ್ ಮಲಿಕ್ ಕುಟುಂಬಕ್ಕೆ ಸೇರಿದ್ದು ಆಗಿದೆ. ಅವರೂ ಕೂಡಾ ಈ ಕಂಪನಿಯಲ್ಲಿ ಇದ್ದರು. ಆದರೆ ಸಚಿವರಾದ ಬಳಿಕ ರಾಜೀನಾಮೆ ನೀಡಿದರು. ಭೂಗತ ಜಗತ್ತಿನ ವ್ಯಕ್ತಿಗಳಿಂದ 30 ಲಕ್ಷಕ್ಕೆ ಪ್ಲಾಟ್‌ ಖರೀದಿಸಲಾಗಿದೆ. ಅದರಲ್ಲಿ 20 ಲಕ್ಷ ಮಾತ್ರ ಪಾವತಿಸಲಾಗಿದೆ. ನೀವು ಅಪರಾಧಿಗಳಿಂದ ಏಕೆ ಜಮೀನು ಖರೀದಿಸಿದ್ದೀರಿ? ಮತ್ತು ಅವರು ಎಲ್‌ಬಿಎಸ್ ರಸ್ತೆಯಲ್ಲಿರುವ ಮೂರು ಎಕರೆ ಜಾಗವನ್ನು 30 ಲಕ್ಷಕ್ಕೆ ಏಕೆ ಮಾರಾಟ ಮಾಡಿದರು," ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಪ್ರಶ್ನೆ ಮಾಡಿದ್ದಾರೆ. ಸಲೀಂ ಪಟೇಲ್ ದರೋಡೆಕೋರ ದಾವೂದ್ ಇಬ್ರಾಹಿಂನ ಸಹಾಯಕ ಮತ್ತು ಅವನು ದಾವೂದ್ ಸಹೋದರಿ ಹಸೀನಾ ಪಾರ್ಕರ್‌ರ ಚಾಲಕನಾಗಿದ್ದನು. ದಾವೂದ್ ಪರಾರಿಯಾದ ನಂತರ, ಸಲೀಂ ಪಟೇಲ್ ಮೂಲಕ ಹಸೀನಾ ಪಾರ್ಕರ್ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ದಾವೂದ್ ಇಬ್ರಾಹಿಂ 1993ರ ಮುಂಬೈ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್‌ ಆಗಿದ್ದಾನೆ " ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಆರೋಪ ಮಾಡಿದ್ದಾರೆ.

Nawab Malik Reacts to Link With Dawood Ibrahim

ಈ ಹಿಂದೆ ದೇವೇಂದ್ರ ಫಡ್ನವಿಸ್‌ ವಿರುದ್ಧ ನವಾಬ್‌ ಮಲಿಕ್‌ ಆರೋಪ ಮಾಡಿದ್ದರು. ದೇವೇಂದ್ರ ಫಡ್ನವೀಸ್ ಪ್ರಸ್ತುತ ಜೈಲಿನಲ್ಲಿರುವ ಡ್ರಗ್ ಪೆಡ್ಲರ್‌ನಿಂದ ಹಣ ಪಡೆದ ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನವಾಬ್ ಮಲಿಕ್ ಆರೋಪ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ದೇವೇಂದ್ರ ಫಡ್ನವೀಸ್‌ ಇದು "ಹಾಸ್ಯಾತ್ಮಕ ವಿಚಾರ" ಎಂದು ಹೇಳಿದ್ದರು. ಇನ್ನು ತನಗೆ ಭೂಗತ ಲೋಕದ ಸಂಪರ್ಕ ಇದೆ ಎಂದು ಹೇಳಿದ ದೇವೇಂದ್ರ ಫಡ್ನವೀಸ್‌ ವಿರುದ್ಧ ವಾಗ್ದಾಳಿ ನಡೆಸಿದ ನವಾಬ್‌ ಮಲಿಕ್‌, "ನನಗೆ ಭೂಗತ ಲೋಕದ ಸಂಪರ್ಕವಿದೆ ಎಂದು ಹೇಳುವ ಧೈರ್ಯ ಯಾರಿಗಿದೆ," ಎಂದು ಆಕ್ರೋಶಿತರಾಗಿದ್ದರು.

English summary
Nawab Malik said that at 10 am tomorrow, Fadnavis would uncover his underworld connection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X