ಜಗತ್ತಿನಲ್ಲೆ ಅತಿ ದೊಡ್ಡ ಮೆದುಳು ಗಡ್ಡೆ ತೆಗೆದ ಮುಂಬೈನ ವೈದ್ಯರು

ಜಗತ್ತಿನಲ್ಲೇ ಅತಿ ದೊಡ್ಡದು ಎನ್ನಬಹುದಾದ ಮೆದುಳು ಗಡ್ಡೆಯನ್ನು ಭಾರತದ ವೈದ್ಯರು ತೆಗೆದುಹಾಕಿದ್ದಾರೆ. ಮೂವತ್ತೊಂದು ವರ್ಷದ ವ್ಯಕ್ತಿಯ ಮೆದುಳಿನಲ್ಲಿದ್ದ ಗಡ್ಡೆಯ ತೂಕ 1.8 ಕೆಜಿ ಇತ್ತು. ಫೆಬ್ರವರಿ ಹದಿನಾಲ್ಕರಂದು ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಯಾವ ಪದ್ಧತಿ ಅನುಸರಿಸಲಾಗಿದೆ ಎಂಬ ಮಾಹಿತಿಯನ್ಮು ಬಹಿರಂಗ ಪಡಿಸಿಲ್ಲ. ಏಕೆಂದರೆ ಇದು ಯಶಸ್ವಿ ಆಗಿದೆಯಾ ಎಂಬ ಬಗ್ಗೆ ವೈದ್ಯರಿಗೆ ಇನ್ನೂ ಖಾತ್ರಿ ಆಗಿಲ್ಲ. ಇದೀಗ ಆತ ಚೇತರಿಸಿಕೊಳ್ಳಬೇಕಿದೆ. ಆದರೆ ಆತ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರಾದ ತ್ರಿಮೂರ್ತಿ ನಾಡಕರ್ಣಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಸಂತ್ ಲಾಲ್ ಪಾಲ್ ಗೆ ಮೂರು ವರ್ಷದಿಂದ ಗಡ್ಡೆ ಇತ್ತು. ಈ ಗಡ್ಡೆಯಿಂದಾಗಿಯೇ ಆತ ದೃಷ್ಟಿಯನ್ನು ಕಳೆದುಕೊಂಡಿದ್ದರು. ಆದರೆ ಈಗ ಶಸ್ತ್ರಚಿಕಿತ್ಸೆ ಮಾಡಿರುವುದರಿಂದ ಚೇತರಿಸಿಕೊಂಡ ನಂತರ ದೃಷ್ಟಿ ಮರಳಬಹುದು ಎಂಬ ಭರವಸೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.

Mumbai doctors remove world's 'largest brain tumour'

ತಲೆಯ ಹಿಂಭಾಗಕ್ಕೆ ಸಣ್ಣ ಫುಟ್ ಬಾಲ್ ಗಾತ್ರದ ಗಡ್ಡೆ ಸಂತ್ ಲಾಲ್ ಗೆ ಇತ್ತು. ಅದನ್ನು ನೋಡಿದರೆ ಎಂಥವರಿಗೂ ಗಾಬರಿ ಆಗುವಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+