30 ಕೋಟಿ ರೂ ಚಿನ್ನಾಭರಣ ಕದ್ದ ಮಹಿಳಾ ಉದ್ಯಮಿ!

mumbai-businesswoman-vihari-sheth-smuggled-r-30-cr-jewellery-singapore
ಮುಂಬೈ, ಜ.30: ತನ್ನ ಒಳ ಉಡುಪು ಮತ್ತು ದುಬಾರಿ ಕೈಗಡಿಯಾರದಲ್ಲಿ ವಜ್ರದ ಹರಳುಗಳುಳ್ಳ ಚಿನ್ನಾಭರಣವನ್ನು ಹುದುಗಿಸಿಟ್ಟುಕೊಂಡಿದ್ದ ಮಹಿಳಾ ಉದ್ಯಮಿ ವಿಹಾರಿ ಶೇಠ್, 2 ಕೋಟಿ ರೂ ಅಧಿಕ ಮೌಲ್ಯದ ಚಿನ್ನದ ಕಳ್ಳಸಾಗಣೆ ಮಾಡುವಾಗ ಕಳೆದ ಆಗಸ್ಟಿನಲ್ಲಿ ಸಿಕ್ಕಿಬಿದ್ದಿದ್ದಳು. ಆ ಮಹಿಳೆಯನ್ನು ಸಂಪೂರ್ಣ ತಪಾಸಣೆಗೊಳಪಡಿಸಿದ್ದ ಸುಂಕದ ಅಧಿಕಾರಿಗಳು ಅನೇಕ ಕುತೂಹಲಕಾರಿ ಸಂಗತಿಗಳನ್ನು ಹೊರಹಾಕಿದ್ದಾರೆ.

ಪ್ರಕರಣದ ಸಂಬಂಧ ಕಂದಾಯ ಗುಪ್ತಚರ ನಿರ್ದೇಶನಾಲಯ ಸದರಿ ಮಹಿಳೆಗೆ ಷೋಕಾಸ್ ನೋಟಿಸ್ ನೀಡಿದೆ. ಗಮನಾರ್ಹವೆಂದರೆ ಆರೋಪಿ ವಿಹಾರಿ ಶೇಠ್ ತನ್ನ ಚಿಕ್ಕಪ್ಪನ ಜತೆ ಸಿಂಡಿಕೇಟ್ ರಚಿಸಿಕೊಂಡು ಚಿನ್ನದ ಕಳ್ಳಸಾಗಣೆಯಲ್ಲಿ ತೊಡಗಿದ್ದಳು ಎನ್ನಲಾಗಿದೆ. ( ವೈಷ್ಣೋದೇವಿ ಹುಂಡಿಯಲ್ಲಿ ನಕಲಿ ಚಿನ್ನ ಬೆಳ್ಳಿ ಆಭರಣ )

ಸಿಂಗಪುರ ಮೂಲದ Vihari Jewels ಆಭರಣ ಮಾರಾಟ ಸಂಸ್ಥೆಯ ಪಾಲುದಾರರಾಗಿಯೂ ಆರೋಪಿ ವಿಹಾರಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ Directorate of Revenue Intelligence ಜಾರಿ ಮಾಡಿರುವ ನೋಟಿಸ್ ಪ್ರಕಾರ 2 ವರ್ಷಗಳಲ್ಲಿ ಆರೋಪಿ ವಿಹಾರಿ 30 ಕೋಟಿ ರೂ. ವಜ್ರ ಮತ್ತು ಚಿನ್ನಾಭರಣ ಕದ್ದು ಸಾಗಿಸಿದ್ದಾರೆ.

28 ತಿಂಗಳಲ್ಲಿ (2011ರ ಮಾರ್ಚಿನಿಂದ 2013ರ ಆಗಸ್ಟ್ ತಿಂಗಳ ಮಧ್ಯೆ ) ಆರೋಪಿ ವಿಹಾರಿ, 32 ಬಾರಿ ಮುಂಬೈ-ಸಿಂಗಪುರ ಮಧ್ಯೆ ಸಂಚಾರ ಮಾಡಿದ್ದಾರೆ. ವಜ್ರಾಭರಣ ಕದ್ದು ಸಾಗಿಸುವುದೇ ಈಕೆಯ ಜಾಯಮಾನ/ಕಾಯಕ/ಹವ್ಯಾಸವಾಗಿತ್ತು ಎಂದು DRI ನೋಟಿಸ್ ನಲ್ಲಿ ಆರೋಪಿಸಲಾಗಿದೆ. ಹಾಗೆ ಕದ್ದು ತಂದ ಚಿನ್ನದ ಮಾಲನ್ನು ಆರೋಪಿ ವಿಹಾರಿ, ಮುಂಬೈನಲ್ಲಿರುವ ತನ್ನ ಸಂಬಂಧಿಗಳು ಚಿನ್ನದ ಮಳಿಗೆಗಳ ಮೂಲಕ ಮಾರಾಟ ಮಾಡುತ್ತಿದ್ದರು.

ಆರೋಪಿ ವಿಹಾರಿ ಸುಶಿಕ್ಷತಳಾಗಿದ್ದು ಕಸ್ಟಮ್ಸ್ ಕಾನೂನು ಚೆನ್ನಾಗಿ ಬಲ್ಲವರು. ಹಾಗಾಗಿ ವಜ್ರ ಖಚಿತ ಚಿನ್ನಾಭರಣವನ್ನು ತನ್ನ ಒಳ ಉಡುಪಗಳಲ್ಲಿ ಜೋಡಿಸಿಟ್ಟುಕೊಂಡು ಸುಲಭೋಪಾಯವಾಗಿ ಸಾಗಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, DRI ಅಧಿಕಾರಿಗಳು ಸಿಂಗಾಪುರದಲ್ಲಿ ನೆಲೆಸಿರುವ ಆರೋಪಿ ವಿಹಾರಿಯ ತಂದೆ ರಾಜೇಶ್ ಶೇಠ್ ಮತ್ತು ಮನಿಶಾ ಶೇಠ್ ಬಗ್ಗೆಯೂ ಅನುಮಾನಗೊಂಡಿದ್ದು, ಚಿನ್ನದ ಕಳ್ಳಸಾಗಣೆಯಲ್ಲಿ ಸಕ್ರಿಯವಾಗಿದ್ದಾರೆ ಎಂದು ಶಂಕಿಸಿದ್ದಾರೆ. ಇಬ್ಬರ ವಿರುದ್ಧವೂ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ್ದಾರೆ.

57 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ವಿಹಾರಿ ಆನಂತರ ಜಾಮೀನು ಪಡೆದು ಹೊರಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+