ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಮಹಾನಗರ ಸಾರಿಗೆ ನೌಕರರ ಮುಷ್ಕರ; ಜನಜೀವನ ಅಸ್ತವ್ಯಸ್ತ

ಮುಂಬೈ ವಿದ್ಯುತ್ ಸರಬರಾಜು ಹಾಗೂ ಸಾರಿಗೆ ಇಲಾಖೆ ನೌಕರರ ಮುಷ್ಕರ. ನಿಗದಿತ ಕಾಲಕ್ಕೆ ವೇತನ ಮತ್ತಿತರ ಬೇಡಿಕೆ ಈಡೇರಿಸಲು ಆಗ್ರಹಿಸಿ ಮುಷ್ಕರ. ಸೋಮವಾರ (ಆಗಸ್ಟ್ 7ರಿಂದ) ಆರಂಭಗೊಂಡ ಮುಷ್ಕರಕ್ಕೆ ಮುಂಬೈ ಜನಜೀವನ ಅಸ್ತವ್ಯಸ್ತ.

|
Google Oneindia Kannada News

ಮುಂಬೈ, ಆಗಸ್ಟ್ 7: ಮುಂಬೈ ವಿದ್ಯುತ್ ಸರಬರಾಜು ಹಾಗೂ ಸಾರಿಗೆ ಸಂಸ್ಥೆಯ (ಬೆಸ್ಟ್), ಸಾರಿಗೆ ನೌಕಕರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದು, ನಾಗರಿಕರು ಪರದಾಡುವಂತಾಗಿದೆ.

ನಿಗದಿತ ಸಮಯಕ್ಕೆ ವೇತನ ಪಾವತಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೌಕರರು ಮುಷ್ಕರಕ್ಕಿಳಿದಿದ್ದಾರೆ.

Mumbai: BEST Buses Go for Strike Over Salaries

ಈ ಮಧ್ಯೆ, ನೌಕರರ ವಿರುದ್ದ ಕಿಡಿಕಾರಿರುವ ನೀಡಿರುವ ಮಹಾರಾಷ್ಟ್ರ ಸರ್ಕಾರವು, ಮುಷ್ಕರ ನಿರತ ನೌಕರರ ವಿರುದ್ಧ ಎಸ್ಮಾ (ಅಗತ್ಯ ಸೇವಾ ನಿರ್ವಹಣಾ ಕಾಯ್ದೆ) ಜಾರಿಗೊಳಿಸುವ ಎಚ್ಚರಿಕೆ ನೀಡಿದೆ.

ಆದರೆ, ಇದಕ್ಕೆ ಮಣಿಯದ ನೌಕರರು ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಹಾಗಾಗಿ, ಆಗಸ್ಟ್ 7ರಂದು ಸಂಜೆ ನೌಕಕರ ಸಂಘದ ಪದಾಧಿಕಾರಿಗಳು ಹಾಗೂ ಸರ್ಕಾರದ ನಡುವೆ ಮಾತುಕತೆ ನಡೆಯುವ ಸಾಧ್ಯತೆಗಳಿವೆ.

ಬೆಸ್ಟ್ ಇಲಾಖೆಯು ಸುಮಾರು 3,700 ನೌಕರರನ್ನು ಹೊಂದಿದ್ದು, ಪ್ರತಿದಿನ ಸರಾಸರಿ 29 ಲಕ್ಷ ಪ್ರಯಾಣಿಕರು ಬೆಸ್ಟ್ ಸೇವೆ ಪಡೆಯುತ್ತಾರೆ.

English summary
The Mumbai Electricity Supply and Transport Department employees have gone to indefinite strike from Monday (7th August, 2017) which affected normal life in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X