ಪೊಲೀಸರಿಗೆ ಅವಾಜ್ ಹಾಕಿ ಜೈಲು ಸೇರಿದ ಮಾಡೆಲ್

ಮುಂಬೈ, ಅ.7: 'ಯಾಕಮ್ಮ ಅಷ್ಟು ಜೋರಾಗಿ ಮ್ಯೂಸಿಕ್ ಕೇಳ್ತಾ ಇದ್ದಿಯಾ' ಎಂದು ಪ್ರಶ್ನಿಸಲು ಬಂದ ರಾತ್ರಿ ಪಾಳೆಯದ ಪೊಲೀಸರಿಗೆ ಮನಬಂದಂತೆ ಅವಾಚ್ಯ ಶಬ್ದಗಳಲ್ಲಿ ಬೈದ ರೂಪದರ್ಶಿ ಕಮ್ ನಟಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ವರದಿಯಾಗಿದೆ.

ಓಶಿವಾರ ಪೊಲೀಸರು ನಟಿ ಅಂಜುಮ್ ನಾಯರ್ ಗೆ ಎಷ್ಟೇ ಬುದ್ಧಿ ಹೇಳಲಿ ಯತ್ನಿಸಿದರೂ ಸಾಧ್ಯವಾಗದಿದ್ದಾಗ ಅನಿವಾರ್ಯವಾಗಿ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ.

ಅಂಜುಮ್ ವಿರುದ್ಧ ಐಪಿಸಿ ಸೆಕ್ಷನ್ 353, 294,504 ಹಾಗೂ 506 ಅನ್ವಯ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೆಟ್ರೋಪಾಲಿಟನ್ ಕೋರ್ಟಿನಲ್ಲಿ ಅಂಜುಮ್ ಅವರನ್ನು ನಾಳೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

Mumbai based model named Anjum Nayar detained

ಅಂಜುಮ್ ನಾಯರ್ ಹೇಳುವುದೇನು: ನಮ್ಮ ಮನೆ ನವರಾತ್ರಿ ಅಂಗವಾಗಿ ಸಣ್ಣದಾಗಿ ಪೂಜೆ ನಡೆಸಲಾಗುತ್ತಿತ್ತು. ನನ್ನ ಬೆಡ್ ರೂಮಿನಲ್ಲಿ ಸಂಗೀತ ಹಾಕಲಾಗಿತ್ತು. ಹಾಡಿನ ಶಬ್ದ ಯಾರಿಗೂ ತೊಂದರೆ ಮಾಡುವ ಮಟ್ಟದಲ್ಲಿರಲಿಲ್ಲ. ಆದರೆ, ಮನೆಗೆ ಬಂದ ಪೊಲೀಸರು ಏಕಾಏಕಿ ಒಳನುಗ್ಗಲು ಯತ್ನಿಸಿದ್ದಲ್ಲದೆ, ಅನುಚಿತವಾಗಿ ವರ್ತಿಸಿದರು. ಮಹಿಳಾ ಪೇದೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆನ್ನೆಗೆ ಬಾರಿಸಿದರು. ನನ್ನದು ಏನು ತಪ್ಪಿಲ್ಲ ದಿದ್ದರೂ ಶಬ್ದ ಮಾಲಿನ್ಯ ಮಾಡಿದ್ದೀಯಾ ಎಂದು ಹೇಳಿ ದಂಡ ಹಾಕಿದರು ಎಂದು ಹೇಳಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಅಂಜುಮ್ ನಂತರ ಬಾಲಿವುಡ್ ಚಿತ್ರರಂಗಕ್ಕೂ ಕಾಲಿಟ್ಟಿದ್ದರು. ಜಾಕಿ ಶ್ರಾಫ್ ಜತೆಯಲ್ಲಿ 'ಕವರ್ ಸ್ಟೋರಿ' ಚಿತ್ರದಲ್ಲಿ ನಟಿಸಿದ್ದರು.

ಈಗ ಸಮರ್ಥ ಅಂಗಂ ಕಟ್ಟಡದ ಇತರೆ ನಿವಾಸಿಗಳ ದೂರಿನ ಅನ್ವಯ ಅಂಜುಮ್ ನಿಂದ ಶಬ್ದ ಮಾಲಿನ್ಯವಾಗಿದೆ. ಇತರೆ ನಿವಾಸಿಗಳು ಕೇಳಲಾರದಷ್ಟು ಎತ್ತರದ ದನಿಯಲ್ಲಿ ಸಂಗೀತ ಹಾಕಲಾಗಿದೆ. ಪೊಲೀಸರ ಮೇಲೆ ಕೂಡಾ ಅಂಜುಮ್ ಹರಿಹಾಯ್ದಿದ್ದಾಳೆ.

ಪೊಲೀಸರನ್ನು ನಾಯರ್ ಬೈಯುತ್ತಿರುವ ದೃಶ್ಯವನ್ನು ನೆರಮನೆಯವರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ವಿಡಿಯೋದಲ್ಲಿ ಅಂಜುಮ್ ಹೇಳಿರುವ ಮಾತುಗಳು ಇಲ್ಲಿವೆ ಓದಿ ಮರೆತು ಬಿಡಿ


"Tum logon ki waat laga dongi Police Commissioner ke Bhen***d do gi mein bhula uss sale ko yaha pe ...saale music bandh karvane aagaye...waat laga doongi Bhen***d Mumbai ki...aur tum sab police walo ki..andhar uske gho diya Nirbhaya ki (referring to Delhi rape) uski waat lagadi Bhen***d...samarth Angan mein music bandh karane aaye hai...,"

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+