ಪಿಎಂಸಿ ಬ್ಯಾಂಕ್ ಅವ್ಯವಹಾರ, ಹೃದಯಾಘಾತದಿಂದ ಮತ್ತೊಂದು ಸಾವು

ಮುಂಬೈ, ಅಕ್ಟೋಬರ್ 15: ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟೀವ್ ಅವ್ಯವಹಾರದಿಂದ ಕಂಗೆಟ್ಟು ಸೋಮವಾರ ವ್ಯಕ್ತಿಯೊಬ್ಬರು ಮೃತರಾದ ಘಟನೆ ಇನ್ನೂ ಹಸಿಯಾಗಿರುವಾಗಲೇ, ಮಂಗಳವಾರ ಇನ್ನೊಬ್ಬ ವ್ಯಕ್ತಿ ಹೃದಯಾಘಾತದಿಂದ ಮೃತರಾಗಿದ್ದಾರೆ.

ಪಿಎಂಸಿ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದ ಫತ್ತೋಮಳ್ ಪಂಜಾಬಿ ಎಂಬ 60 ವರ್ಷ ವಯಸ್ಸಿನ ವ್ಯಕ್ತಿ ಮಂಗಳವಾರ ಸಂಜೆ ಹೃದಯಾಘಾತದಿಂದ ಸಾವಿಗೀಡಾದರು.

ಫತ್ತಮೋಳ್ ಅವರು ಪಿಎಂಸಿ ಬ್ಯಾಂಕಿನಲ್ಲಿ ಎಷ್ಟು ಠೇವಣಿ ಹೊಂದಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Mumbai: Another PMC Bank account holder dies of heart attack

ಸೋಮವಾರ ರಾತ್ರಿ ಸಂಜಯ್ ಗುಲಾಟಿ ಎಂಬ ವ್ಯಕ್ತಿ ಸಹ ಹೃದಯಾಘಾತದಿಂದ ಮೃತರಾಗಿದ್ದರು. ಅವರು ಈ ಬ್ಯಾಂಕಿನಲ್ಲಿ 90 ಲಕ್ಷ ರೂ. ಠೇವಣಿ ಇಟ್ಟಿದ್ದರು ಎನ್ನಲಾಗಿದೆ.

ಪಿಎಂಸಿ ಬ್ಯಾಂಕಿನಲ್ಲಿ ಸುಮಾರು 4300 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಂಚನೆ ಪ್ರಕರಣ ಬಯಲಾಗಿದ್ದು, ಬ್ಯಾಂಕಿನಲ್ಲಿ ವಿಥ್ ಡ್ರಾ ಮಿತಿಯನ್ನು ಆರ್ಬಿಐ ಕಡಿತಗೊಳಿಸಿತ್ತು. ಜೊತೆಗೆ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಸಾವಿರಾರು ಜನರು ತಮ್ಮ ಠೇವಣಿ ಹಣದ ಬಗ್ಗೆ ಆತಂಕಪಡುವಂತಾಗಿದ್ದು, ಕಳೆದ 24 ಗಂಟೆಯಲ್ಲಿ ಪಿಎಂಸಿಯಲ್ಲಿ ಖಾತೆ ಹೊಂದಿರುವ ಇಬ್ಬರು ಮೃತರಾದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+