ಟೀಚರ್ ಅನ್ನು ಕೊಂದು, ಮಾಲಿಗೆ ಹೋಗಿ ಗೇಮ್ ಆಡಿದ 12 ರ ಬಾಲಕ!
ಮುಂಬೈ, ಸೆಪ್ಟೆಂಬರ್ 19: ಹಣದಾಸೆಗೆ ತನ್ನ ಶಿಕ್ಷಕಿಯನ್ನೇ 12 ವರ್ಷದ ಬಾಲಕನೊಬ್ಬ ಕೊಂದ ಘಟನೆ ಮುಂಬೈಯಲ್ಲಿ ನಡೆದಿದೆ. ಶಿಕ್ಷಕಿಯನ್ನು ಕೊಲ್ಲುವಂತೆ ಹಿರಿಯ ವಿದ್ಯಾರ್ಥಿಗಳು ನೀಡಿದ 1000 ರೂಪಾಯಿಯನ್ನು ಪಡೆದು, ಆಕೆಯನ್ನು ಆಕೆಯ ಮನೆಯಲ್ಲೇ ಬಾಲಕ ಇರಿದು ಕೊಂದಿದ್ದಾನೆ.
ನಂತರ ಮಾಲ್ ವೊಂದಕ್ಕೆ ತೆರಳಿ ಬರ್ಗರ್ ಇತ್ಯಾದಿ ತಿಂಡಿ ತಿಂದು, ವಿಡಿಯೋ ಗೇಮ್ ಆಡಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದೆ!
ತನ್ನ ಟ್ಯೂಶನ್ ಟೀಚರ್ ಮತ್ತು ಶಾಲೆಯ ಪ್ರಿನ್ಸಿಪಲ್ ಆಗಿದ್ದ ಮಹಿಳೆಯನ್ನು ಸೋಮವಾರ ಹತ್ಯೆ ಮಾಡಲಾಗಿದ್ದು, 12 ವರ್ಷದ ಬಾಲಕನ್ನು ಪೊಲೀಸರು ಬಂಧಿಸಿದ್ದಾರೆ.
"ಮನೆಯಲ್ಲಿ ಕಷ್ಟ ಇದ್ದಿದ್ದರಿಂದ ಟೀಚರ್ ಬಳಿ 2000 ರೂಪಾಯಿಗಳನ್ನು ತೆಗೆದುಕೊಂಡು ಬರಲು ಅಮ್ಮ ಹೇಳಿದ್ದರು. ಹಣ ಕೇಳಲು ಅವರ ಮನೆಗೆ ತೆರಳಿದ್ದಾಗ ಟೀಚರ್ ನನ್ನನ್ನು ತೀವ್ರವಾಗಿ ಅವಮಾನ ಮಾಡಿದರು. ಇದರಿಂದ ಕೋಪಗೊಂಡು ಅವರನ್ನು ಕೊಂದೆ" ಎಂದು ಆರೋಪಿ ಅಪ್ರಾಪ್ತ ಬಾಲಕ ಒಪ್ಪಿಕೊಂಡಿದ್ದಾನೆ.

ಆದರೆ ನಂತರ ಈ ಕತೆಗೆ ಹೊಸ ತಿರುವು ಸಿಕ್ಕಿದೆ.
ಟೀಚರ್ ಬಳಿ ಹಣ ಪಡೆದು ಬರುವಂತೆ ನಾವು ಆತನಲ್ಲಿ ಹೇಳಿಯೇ ಇರಲಿಲ್ಲ ಎಂದು ಬಾಲಕನ ತಂದೆ ಹೇಳಿದಾಗ ಬಾಲಕ ಎಲ್ಲೋ ನಮ್ಮ ಹಾದಿ ತಪ್ಪಿಸುತ್ತಿದ್ದಾನೆ ಎಂಬ ಅನುಮಾನ ಪೊಲೀಸರಿಗೆ ಆರಂಭವಾಗಿತ್ತು.
ನಂತರ ಬಾಲಕನನ್ನು ಹೆದರಿಸಿ, ವಿಚಾರಿಸಿದಾಗ ಟೀಚರ್ ಅನ್ನು ಕೊಲ್ಲಲು ಹಿರಿಯ ವಿದ್ಯಾರ್ಥಿಯೊಬ್ಬ 1000 ರೂಪಾಯಿ ನೀಡಿದ್ದು, ಕೆಲಸವಾದ ನಂತರ 5000 ರೂ. ನೀಡುವುದಾಗಿ ಹೇಳಿದ್ದ. ಆದ್ದರಿಂದ ನಾನು ಟೀಚರ್ ಅನ್ನು ಚಾಕುವಿನಿಂದ ಇರಿದು ಕೊಂದು, ನಂತರ ಮಾಲ್ ಗೆ ಹೋಗಿ ಬರ್ಗರ್ ತಿಂದು, ವಿಡಿಯೋ ಗೇಮ್ ಆಡಿ 1000 ರೂಪಾಯಿ ಖರ್ಚು ಮಾಡಿದೆ. ನನ್ನೊಂದಿಗೆ ಇನ್ನಿಬ್ಬರು ಗೆಳೆಯರೂ ಮಾಲ್ ಗೆ ಬಂದಿದ್ದರು ಎಂದು ಬಾಲಕ ಹೇಳಿದ್ದಾನೆ. ಈ ಹೇಳಿಕೆಯನ್ನು ಆಧರಿಸಿ ಆ ಇಬ್ಬರು ಬಾಲಕರನ್ನೂ ಪೊಲೀಸರು ವಿಚಾರಣೆ ನಡೆಸಿ, ಹೇಳಿಕೆ ಪಡೆದಿದ್ದಾರೆ.
ಆದರೆ ಟೀಚರ್ ಅನ್ನು ಕೊಲ್ಲುವಂತೆ ಹುಡುಗನಿಗೆ 'ಸುಪಾರಿ' ಕೊಟ್ಟಿದ್ದು ಯಾರು ಎಂಬುದು ಮಾತ್ರ ತಿಳಿದುಬಂದಿಲ್ಲ. ಬಾಲಕ ನೀಡಿದ ವಿವರಣೆಯ ಮೇರೆಗೆ ಪೊಲಿಸರು ಆತನ ಹುಡುಕಾಟ ನಡೆಸುತ್ತಿದ್ದಾರೆ.
ಘಟನೆಯ ನಂತರ ಆಘಾತಗೊಂಡಿರುವ ಬಾಲಕನ ತಾಯಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications