ಕಾಂಗ್ರೆಸ್‌ನ ಭಯ, ಶಾಸಕ ಶ್ರೀಮಂತ್ ಪಾಟೀಲ್ ಸ್ಥಳಾಂತರಕ್ಕೆ ಚಿಂತನೆ

ಮುಂಬೈ, ಜುಲೈ 21: ಕಾಂಗ್ರೆಸ್‌ ಪಕ್ಷಕ್ಕೆ ಕೊನೆ ಕ್ಷಣದಲ್ಲಿ ಕೈಕೊಟ್ಟು ರೆಸಾರ್ಟ್‌ನಿಂದ ಹೇಳದೇ-ಕೇಳದೇ ತಪ್ಪಿಸಿಕೊಂಡು ಬಿಜೆಪಿ ತೆಕ್ಕೆಗೆ ಬಿದ್ದಿರುವ ಶಾಸಕ ಶ್ರೀಮಂತ್ ಪಾಟೀಲ್ ಅವರು ಪ್ರಸ್ತುತ ಇರುವ ಮುಂಬೈನ ಆಸ್ಪತ್ರೆಯಿಂದ ಬೇರೆ ಆಸ್ಪತ್ರೆಗೆ ಶಿಫ್ಟ್‌ ಮಾಡಲು ಚಿಂತನೆ ನಡೆದಿದೆ.

ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಶ್ರೀಮಂತ್ ಪಾಟೀಲ್ ಅವರು ಎದೆನೋವಿಗೆ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯ ಸುತ್ತಾ ನೂರಾರು ಪೊಲೀಸರು ಕಾವಲಿಗೆ ನಿಂತಿದ್ದಾರೆ. ಆದರೂ ಬಿಜೆಪಿಗೆ ಭಯ ಹೋದಂತಿಲ್ಲ.

ಶ್ರೀಮಂತ ಪಾಟೀಲ್ ಅವರನ್ನು ಕಾಂಗ್ರೆಸ್‌ನಿಂದ ರಕ್ಷಿಸಿಕೊಳ್ಳಲು ಅವರನ್ನು ಇಂದು ಸಂಜೆ ವೇಳೆಗೆ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಚಿಂತಿಸಲಾಗುತ್ತಿದೆ.

ಮುಂಬೈ ಕಾಂಗ್ರೆಸ್‌ನ ನಾಯಕಿ ಯಶೋಮತಿ ಠಾಕೂರ್ ಅವರು ಶ್ರೀಮಂತ್ ಪಾಟೀಲ್ ಅವರನ್ನು ಆಸ್ಪತ್ರೆಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದರು, ಆದರೆ ಅವರ ಪ್ರಯತ್ನನವನ್ನು ಸಫಲವಾಗಲು ಬಿಡಲಿಲ್ಲ.

ಆಸ್ಪತ್ರೆ ಸ್ಥಳಾಂತರಕ್ಕೆ ಚಿಂತನೆ

ಆಸ್ಪತ್ರೆ ಸ್ಥಳಾಂತರಕ್ಕೆ ಚಿಂತನೆ

ಆದರೆ ಇದರಿಂದ ಆತಂಕಕ್ಕೆ ಒಳಗಾಗಿರುವ ಬಿಜೆಪಿಯು ಶ್ರೀಮಂತ್ ಪಾಟೀಲ್ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಚಿಂತಿಸಿದೆ. ಕಾಂಗ್ರೆಸ್‌ನ ನಾಯಕರು ಶ್ರೀಮಂತ್ ಪಾಟೀಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದು, ಅದರಿಂದ ಪಾರಾಗಲು ಈ ಯೋಜನೆ ರೂಪಿಸಲಾಗಿದೆ.

ವಿಶ್ವಾಸಮತ ಯಾಚನೆ ಹಿಂದಿನ ದಿನ ಎಸ್ಕೇಪ್

ವಿಶ್ವಾಸಮತ ಯಾಚನೆ ಹಿಂದಿನ ದಿನ ಎಸ್ಕೇಪ್

ವಿಶ್ವಾಸಮತ ಯಾಚನೆ ಮಂಡನೆಯ ಹಿಂದಿನ ದಿನ ಕಾಂಗ್ರೆಸ್ ಶಾಸಕರು ಇದ್ದ ರೆಸಾರ್ಟ್‌ನಿಂದ ರಾತ್ರೋರಾತ್ರಿ ಕಾಣೆ ಆಗಿದ್ದರು. ಆ ನಂತರ ಅವರು ಚೆನ್ನೈಗೆ ಪ್ರಯಾಣ ಬೆಳೆಸಿ ಅಲ್ಲಿಂದ ಮುಂಬೈಗೆ ತೆರಳಿದ್ದು ಗೊತ್ತಾಯಿತು.

'ಸದನಕ್ಕೆ ಸ್ಪಷ್ಟನೆ ನೀಡಿದ ಶ್ರೀಮಂತ್ ಪಾಟೀಲ್'

'ಸದನಕ್ಕೆ ಸ್ಪಷ್ಟನೆ ನೀಡಿದ ಶ್ರೀಮಂತ್ ಪಾಟೀಲ್'

ಈ ಬಗ್ಗೆ ಒಂದು ದಿನದ ನಂತರ ಸದನಕ್ಕೆ ಸ್ಪಷ್ಟೀಕರಣ ನೀಡಿದ ಶ್ರೀಮಂತ್ ಪಾಟೀಲ್, ತುರ್ತು ಕೆಲಸದ ನಿಮಿತ್ತ ಚೆನ್ನೈಗೆ ತೆರಳುತ್ತಿದ್ದೆ ಆಗ ಎದೆನೋವು ಕಾಣಿಸಿಕೊಂಡಿತು, ಹಾಗಾಗಿ ಕೂಡಲೇ ಮುಂಬೈಗೆ ತೆರಳಿ ಆಸ್ಪತ್ರೆಯಲ್ಲಿ ದಾಖಲಾದೆ ಎಂದು ಹೇಳಿದ್ದರು.

'ಬಿಜೆಪಿಯು ಶ್ರೀಮಂತ್ ಪಾಟೀಲ್ ಅವರ ಅಪಹರಿಸಿದೆ'

'ಬಿಜೆಪಿಯು ಶ್ರೀಮಂತ್ ಪಾಟೀಲ್ ಅವರ ಅಪಹರಿಸಿದೆ'

'ನಮ್ಮ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಬಿಜೆಪಿಯು ಅಪಹರಣ ಮಾಡಿದೆ' ಎಂದು ಆರೋಪ ಮಾಡಿದ ಕಾಂಗ್ರೆಸ್ ಸದಸ್ಯರು, ಬಿಜೆಪಿಯ ಲಕ್ಷ್ಮಣ್ ಸವದಿ ಅವರ ಜೊತೆ ಶ್ರೀಮಂತ್ ಪಾಟೀಲ್ ಅವರು ಮುಂಬೈಗೆ ಸಂಚರಿಸಿದ ಟಿಕೆಟ್ ಅನ್ನು ಕಾಂಗ್ರೆಸ್ ಸದಸ್ಯರು ಕಲಾಪದಲ್ಲಿ ಪ್ರದರ್ಶಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+