ಮುಂಬೈ ಎಟಿಎಂನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ಮುಂಬೈ, ಮೇ 13 : ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಮಹಿಳೆ ಮಾಡಿದ ಟ್ವೀಟ್ ಆಧರಿಸಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಹರಿ ಓಂ ನಗರದ ಎಟಿಎಂನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿ ಮಹಿಳೆಗೆ ಮರ್ಮಾಂಗವನ್ನು ತೋರಿಸಿದ್ದಾನೆ. ಮಹಿಳೆ ಇದನ್ನು ವಿಡಿಯೋ ರೆಕಾರ್ಡ್‌ ಮಾಡಿ ಟ್ವೀಟ್ ಮಾಡಿದ್ದಾಳೆ.

ಸಂದೀಪ್ ಕುಂಬಾರ್‌ಕರ್ ಎಂಬ ವ್ಯಕ್ತಿ ಮಹಿಳೆಗೆ ಕಿರುಕುಳ ನೀಡಿದವನು. ಆಟೋ ಚಾಲಕನಿಗೆ ಹಣ ನೀಡಲು ಮಹಿಳೆ ಎಟಿಎಂಗೆ ಹೋಗಿದ್ದಾಳೆ. ಆಗ ಸಂದೀಪ್ ಆಕೆಗೆ ಹಣದ ಆಮಿಷ ವೊಡ್ಡಿದ್ದಾನೆ. ಆಕೆಯ ಖಾಸಗಿ ಅಂಗಗಳನ್ನು ಮುಟ್ಟಲು ಪ್ರಯತ್ನ ನಡೆಸಿದ್ದಾನೆ.

Man flashes private parts

ಮಹಿಳೆ ವಿಡಿಯೋ ಮಾಡುತ್ತಿರುವುದಾಗಿ ಹೇಳಿದ ಬಳಿಕ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆ ಟ್ವೀಟ್‌ಗೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದು, ವ್ಯಕ್ತಿಯ ಕೃತ್ಯವನ್ನು ಖಂಡಿಸಿದ್ದಾರೆ.

ಮಹಿಳೆ ನೀಡಿದ ದೂರು, ವಿಡಿಯೋ ಅನ್ವಯ ಐಪಿಸಿ ಸೆಕ್ಷನ್ 354 ಮತ್ತು ಸೆಕ್ಷನ್ 509ರ ಅಡಿ ಸಂದೀಪ್ ಕುಂಬಾರ್‌ಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

'ಆಟೋದವನಿಗೆ ಹಣ ನೀಡಲು 3 ಗಂಟೆಗೆ ನಾನು ಎಟಿಎಂಗೆ ಹೋದೆ. ಈ ವ್ಯಕ್ತಿಯಿಂದ ನನಗೆ ತೊಂದರೆ ಉಂಟಾಯಿತು. ನನಗೆ ಹಣ ಆಫರ್ ಮಾಡಿದ ಆತ ನನ್ನನ್ನು ಮುಟ್ಟಲು ಬಂದ. ನಾನು ಅದನ್ನು ವಿಡಿಯೋ ರೆಕಾರ್ಡ್ ಮಾಡಿದೆ. ಇದರಿಂದ ಆತಂಕಗೊಂಡ ಆತ ಅಲ್ಲಿಂದ ತೆರಳಿದ' ಎಂದು ಮಹಿಳೆ ಟ್ವೀಟರ್‌ನಲ್ಲಿ ಬರೆದಿದ್ದಾಳೆ.

'ನಾನು ಪೊಲೀಸ್ ವ್ಯಾನ್ ನೋಡಿ ಅವರಿಗೆ ಮಾಹಿತಿ ನೀಡಿದೆ. ವಿಡಿಯೋವನ್ನು ಅವರಿಗೆ ತೋರಿಸಿದೆ. ಪೊಲೀಸರು ಆತನನ್ನು ತಕ್ಷಣ ಹಿಂಬಾಲಿಸಿ, ಹಿಡಿದರು' ಎಂದು ಟ್ವೀಟ್ ಮಾಡಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+