ಮುಂಬೈನಲ್ಲಿ ಭಾರೀ ಅಗ್ನಿ ದುರಂತ, 14 ಜನ ಸಾವು
ಮುಂಬೈ/ಮಥುರಾ, ಡಿಸೆಂಬರ್ 29 : ಕಮಲ ಮಿಲ್ಸ್ ಕಾಂಪೌಂಡ್ ನಲ್ಲಿರುವ ಹೋಟೆಲೊಂದರಲ್ಲಿ ಗುರುವಾರ ರಾತ್ರಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, 14 ಜನರು ಅಸುನೀಗಿದ್ದು, 16ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಹೋಟೆಲಿನ 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದು 6ನೇ ಮಹಡಿಯವರೆಗೂ ಆವರಿಸಿಕೊಂಡಿದೆ. 8 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವಲ್ಲಿ ನಿರತವಾಗಿದ್ದವು. ಗಾಯಾಳುಗಳನ್ನು ಬೀಚ್ ಕ್ಯಾಂಡಿ ಮತ್ತಿತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ, ಕಟ್ಟಡದಿಂದ ಹೊರ ಓಡಲು ಜನರು ಯತ್ನಿಸಿದಾಗ ಕಾಲ್ತುಳಿತವೂ ಸಂಭವಿಸಿದೆ. ಯಾರೂ ತಳ್ಳಿದ್ದರಿಂದ ನಾನು ಪವಾಡಸದೃಶವಾಗಿ ಪಾರಾಗಿ ಬಂದೆ ಎಂದು ಡಾ. ಸುಲಭಾ ಆರೋರಾ ಎಂಬುವವರು ಟ್ವಿಟ್ಟರಿನಲ್ಲಿ ಬರೆದಿದ್ದಾರೆ.

ಮಥುರಾದಲ್ಲಿಯೂ ಅಗ್ನಿ ದುರಂತ : ಗುರುವಾರ ರಾತ್ರಿಯೇ ಉತ್ತರ ಪ್ರದೇಶದ ಮಥುರಾದಲ್ಲಿರುವ ಚಟ್ಟಾ ಬಜಾರ್ ನ ಕಟ್ಟಡವೊಂದರ ಬಟ್ಟೆ ಮಳಿಗೆಯಲ್ಲಿ ಮತ್ತೊಂದು ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿವೆ. ಆದರೆ, ಈ ದುರಂತದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.











Click it and Unblock the Notifications