ನಾಗ್ಪುರದಲ್ಲಿ ವಿಶ್ವದ ಅತೀ ಚಿಕ್ಕ ಮಹಿಳೆ ಜ್ಯೋತಿಯಿಂದ ಯೋಗಾಭ್ಯಾಸ
ನಾಗ್ಪುರ, ಜೂನ್ 20: ವಿಶ್ವದ ಅತೀ ಚಿಕ್ಕಮಹಿಳೆ ಎಂಬ ದಾಖಲೆ ಬರೆದ ಜ್ಯೋತಿ ಆಮ್ಗೆ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ ಯೋಗಪ್ರದರ್ಶನ ಮಾಡಿದರು.
ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗದಿನವಾಗಿದ್ದು, ತನ್ನಿಮಿತ್ತ ನಾಗ್ಪುರದಲ್ಲಿ ನಡೆದ ಯೋಗಾಸನ ತರಬೇತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.
ವಿಶ್ವದ ಅತೀ ಚಿಕ್ಕ ಮಹಿಳೆ ಎಂಬ ದಾಖಲೆ ಬರೆದ 25 ವರ್ಷ ವಯಸ್ಸಿನ ಜ್ಯೋತಿ ಕೇವಲ 2 ಅಡಿ ಎತ್ತರವಿದ್ದಾರೆ. ಗಿನ್ನಿಸ್ ವಿಶ್ವದಾಖಲೆಯ ಪುಟಗಳಲ್ಲಿ ಹೆಸರುಪಡೆದಿರುವ ಇವರು 'ಬಾಡಿ ಶಾಕ್',' ಅಮೆರಿಕನ್ ಹಾರರ್ ಸ್ಟೋರಿ: ಫ್ರೀಕ್ ಶೋ' ಮುಂತಾದ ಡಾಕ್ಯುಮೆಂಟರಿಗಳಲ್ಲಿ ನಟಿಸಿದ್ದಾರೆ.

ಡಿಸೆಂಬರ್ 16, 1993 ರಲ್ಲಿ ಜನಿಸಿದ ಜ್ಯೋತಿ ಕಿಸಾಂಗ್ ಆಮ್ಗೆ ಅವರಿಗೆ ವಂಶವಾಹಿ ಸಮಸ್ಯೆಯಿಂದಾಗಿ ದೇಹ ಬೆಳವಣಿಗೆಯಾದ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.

ಪುಣೆಯ ಲೋನಾವಾಲದಲ್ಲಿರುವ ಸೆಲೆಬ್ರಿಟಿ ಗಳ ವ್ಯಾಕ್ಸ್ ಮ್ಯೂಸಿಯಂನಲ್ಲಿ ಜ್ಯೋತಿ ಅವರ ಮೇಣದ ಪ್ರತಿಮೆ ನಿರ್ಮಿಸಲಾಗಿರುವುದು ವಿಶೇಷ.












Click it and Unblock the Notifications