ಮುಂಬೈ ಗಲಭೆ: ಜಿಗ್ನೇಶ್ ಮೆವಾನಿ, ಉಮರ್ ಖಲೀದ್ ವಿರುದ್ಧ ಎಫ್ ಐಆರ್
ಮುಂಬೈ, ಜನವರಿ 04: ಮಹಾರಾಷ್ಟ್ರದಲ್ಲಿ ಕಳೆದ ಮೂರನಾಲ್ಕು ದಿನಗಳಿಂದ ನಡೆಯುತ್ತಿರುವ ಗಲಭೆಗೆ ಸಂಬಂಧಿಸಿದಂತೆ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಮತ್ತು ಜೆಎನ್ ಯು ವಿದ್ಯಾರ್ಥಿ ಉಮರ್ ಖಲೀದ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಭೀಮಾ ಕೊರೆಗಾಂವ್ ವಿಜಯೋತ್ಸವದ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಅಷ್ಟೇ ಅಲ್ಲ, ಜ.04 ರಂದು ಮಹಾರಾಷ್ಟ್ರದಾದ್ಯಂತ ದಲಿತಪರ ಸಂಘಟನೆಗಳು ಬಂದ್ ಆಚರಿಸಿದ ಹಿನ್ನೆಲೆಯಲ್ಲಿ, ಇಂದು ಮುಂಬೈಯಲ್ಲಿ ನಡೆಯಬೇಕಿದ್ದ ಜಿಗ್ನೇಶ್ ಮೆವಾನಿ ಮತ್ತು ಉಮರ್ ಖಲೀದ್ ಅವರ ಕಾರ್ಯಕ್ರಮವನ್ನು ಮುಂಬೈ ಪೊಲೀಸರು ರದ್ದುಗೊಳಿಸಿದ್ದಾರೆ.
ಯಾವುದೇ ಅಹಿತರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಮುನ್ನೆಚ್ಚರಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಂಬೈ ಪೊಲಿಸರು ಹೇಳಿದ್ದಾರೆ.












Click it and Unblock the Notifications