'ಮಹಾ' ಸೂತ್ರಕ್ಕೆ ಒಪ್ಪದಿದ್ದರೆ ಎನ್ ಡಿಎ ಯಿಂದಲೇ ಶಿವಸೇನೆ ಹೊರಕ್ಕೆ?

ಮುಂಬೈ, ನವೆಂಬರ್ 08: ಅಕಸ್ಮಾತ್ ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆಯೊಂದಿಗೆ 50:50 ಸೂತ್ರಕ್ಕೆ ಒಪ್ಪದೆ ಇದ್ದರೆ ಎನ್ ಡಿ ಎ ಮೈತ್ರಿಕೂಟದಿಂದಲೇ ತಾನು ಹೊರಹೋಗುತ್ತೇನೆ ಎಂಬ ಸೂಚನೆಯನ್ನು ಶಿವಸೇನೆ ನೀಡಿದೆ.

ಶಿವಸೇನೆಯ ಹಿರಿಯ ಮುಖಂಡರೊಬ್ಬರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಈ ಸೂವನೆ ನೀಡಿದ್ದು ಅವರು ತಮ್ಮ ಹೆಸರನ್ನು ಬಹಿರಂಗ ಪಡಿಸದಂತೆ ಮನವಿ ಮಾಡಿದ್ದಾರೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಕೇಂದ್ರ ಎನ್ ಡಿ ಎ ಮೈತ್ರಿಕೂಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಶಿವಸೇನೆ ಬೆಂಬಲವಿಲ್ಲದಿದ್ದರೂ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಸುಭದ್ರವಾಗಿಯೇ ಇರಲಿದೆ.

"ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದು ಆಗಲೇ ಹತ್ತು ದಿನದ ಮೇಲಾಗಿದೆ. ಆದರೂ ರಾಜ್ಯದಲ್ಲಿ ಸರ್ಕಾರ ರಚನೆಯಾಗಿಲ್ಲ. ಬಿಜೆಪಿ-ಶಿವಸೇನೆ ಈಗಲೂ ಒಮ್ಮತಕ್ಕೆ ಬಂದಿಲ್ಲ. ನಾವು ಶಿವಸೇನೆಯೊಂದಿಗೆ ಸೇರಿ ಪರ್ಯಾಯ ವ್ಯವಸ್ಥೆ ಮಾಡಲು ಸಿದ್ಧರಿದ್ದೇವೆ. ಆದರೆ ಶಿವಸೇನೆ ಬಿಜೆಪಿ ಅಥವಾ ಎನ್ ಡಿಎ ಯೊಂದಿಗೆ ಗುರುತಿಸಿಕೊಳ್ಳಬಾರದು, ಮೈತ್ರಿಯಿಂದ ಹೊರಬರಬೇಕು" ಎಂದು ಎನ್ ಸಿಪಿ ನಾಯಕರೊಬ್ಬರು ಈ ಮೊದಲೇ ಹೇಳಿದ್ದರು.

Maharashtra Politics May affect On centre Too, Shiv Sena May Leave NDA

ಕಳೆದ ಅಕ್ಟೋಬರ್ 21 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋಬರ್ 24 ರಂದು ಹೊರಬಿದ್ದಿದ್ದು, ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+